ಲೋಕದರ್ಶನ ವರದಿ:-
ಮುಧೋಳ:8:- ಸಕರ್ಾರದಿಂದ ಬರುವ ವಿವಿಧ ಯೋಜನೆಗಳನ್ನು ಫಲಾನುಭವಿಗಳಿಗೆ ವಿತರಿಸುವ ವೇಳೆ ನಮ್ಮ ಗಮನಕ್ಕೆ ತರದೇ ವಿತರಣೆ ಮಾಡುತ್ತಿದ್ದಾರೆ. ಈ ಬಗ್ಗೆ ಹಿಂದಿನ ಸಭೆಯಲ್ಲಿ ಗಮನಕ್ಕೆ ತಂದರೂ ಕೂಡ ಯಾವೂದೇ ಪ್ರಯೋಜನವಾಗಿಲ್ಲ ಎಂದು ತಾಪಂ ಸದಸ್ಯರು ಅಧಿಕಾರಿಗಳ ವಿರುದ್ಧ ಹರಿಹಾಯ್ದ ಘಟನೆ ಸಭೆಯಲ್ಲಿ ನಡೆಯಿತು.
ತಾಪಂ ಸಭಾಭವನದಲ್ಲಿ ಇಂದು ನಡೆದ ತಾಪಂನ 13ನೇ ಸಾಮಾನ್ಯ ಸಭೆಯಲ್ಲಿ ಸದಸ್ಯರು ಈ ಬಗ್ಗೆ ಅಸಮಾಧಾನ ಹೊರ ಹಾಕಿದರು. ಅಷ್ಟೇ ಅಲ್ಲದೇ ಸಭೆಗೆ ಬರಲು ನಮಗೆ ನೋಟಿಸ್ ಹಾಗೂ ತಾಲೂಕುವಾರು ಅಭಿವೃದ್ಧಿ ಪರ ಕಾರ್ಯಗಳ ಮಾಹಿತಿ ಕೂಡ ನಮಗೆ ತಲುಪಿಲ್ಲ ಎಂದು ಅಧ್ಯಕ್ಷರ ಗಮನಕ್ಕೆ ತಂದರು.
ಈ ವೇಳೆ ಮಾತನಾಡಿದ ತಾಪಂ ಸದಸ್ಯರು ಭಂಟನೂರ ಮತ್ತು ಚಿಕ್ಕೂರ ಶಾಲೆಯಲ್ಲಿ ಸೈಕಲ್ ವಿತರಣೆ ವೇಳೆ ನಮಗೆ ಆಹ್ವಾನಿಸಿಲ್ಲ.ಈ ಕಾರಣ ಆ ಶಾಲೆಯ ಮುಖ್ಯೋಪಾಧ್ಯರನ್ನು ಅಮಾನತ್ತು ಮಾಡಬೇಕೆಂದು ತಾಪಂ ಸದಸ್ಯ ಯಶವಂತ ಹರಿಜನ ಹಾಗೂ ಹಲವಾರು ಸದಸ್ಯರು ಒತ್ತಾಯಿಸಿದರು.
ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಎರಡು ದಿನದಲ್ಲಿ ಪರಿಶೀಲನೆ ಮಾಡಿ, ತಪ್ಪಿತಸ್ಥರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳುತ್ತಾರೆ ಎಂದು ತಾಪಂ ಅಧಿಕಾರಿಯು ಸಭೆಗೆ ತಿಳಿಸಿದರು. ಇದೇ ಸದಸ್ಯರು ತಾಪಂಗೆ ಒಳಪಡುವ ತಾಲೂಕಿನ ಆಸ್ತಿ ಬಗ್ಗೆ ಕಳೆದ 8-10 ತಿಂಗಳುಗಳ ಹಿಂದೆ ಕೇಳಿದ್ದಿವಿ.ಇನ್ನೂವರೆಗೆ ಮಾಹಿತಿ ಏಕೆ ಕೊಟ್ಟಲ್ಲ ಎಂದು ಪ್ರಶ್ನೀಸಿದರು. ಈ ಕುರಿತು ಈಗಾಗಲೇ ಮಾಹಿತಿ ರವಾನಿಸಲಾಗಿದೆ. ಅದನ್ನು ಪರಿಶೀಲಿಸಿ ತಮಗೆ ತಿಳಿಸಲಾಗುವುದು ಎಂದು ತಾಪಂ ಕಾರ್ಯನಿವರ್ಾಹಕ ಅಧಿಕಾರಿಗಳು ಉತ್ತರಿಸಿದರು. ಒಂದು ವರ್ಷದಿಂದ ಖಾಲಿ ಇರುವ ವಾಣಿಜ್ಯ ಮಳಿಗೆಗಳನ್ನು ಏಕೆ ಬಾಡಿಗೆ ನೀಡಿಲ್ಲ,ಅದು ನಷ್ಟ ಅಲ್ಲವೇ ಎಂದು ಸದಸ್ಯರು ಕೇಳಿದಾಗ ಅದಕ್ಕೆ ತಾಪಂ ಇಒ ಅವರು ಯಾವುದೇ ಉತ್ತರ ನೀಡಲಿಲ್ಲ.
ಕೃಷಿ ಇಲಾಖೆಯ ಅಧಿಕಾರಿಗಳು ತಮಗೆ ಬೇಕಾದ ನಾಲ್ಕಾರು ಜನರಿಗೆ ಸಕರ್ಾರಿ ಯೋಜನೆಗಳ ಸವಲತ್ತು ನೀಡಿರುತ್ತಾರೆ. ಉಳಿದ ವರಿಗೆ ಕ್ಯಾರೆ ಅನ್ನುವುದಿಲ್ಲ ಎಂದು ಢವಳೇಶ್ವರ ತಾಪಂ ಸದಸ್ಯ ಶ್ರೀಶೈಲ್ ಅವರು ಆರೋಪಿಸಿದಾಗ ಆ ವಿಷಯ ಬಿಡಿ ಅಧ್ಯಕ್ಷರ ಸಮ್ಮುಖದಲ್ಲಿ ಬಗೆಹರಿಸಲಾಗಿದೆ ಎಂದಾಗ ಮತ್ತೇ ವಿಷಯ ವಿಕೋಪಗೊಂಡಿತು. ಸದಸ್ಯರ ಹಾಗೆಲ್ಲಾ ಏಕವಚನದಲ್ಲಿ ಮಾತನಾಡ ಬೇಡಿ ಎಂದು ಅಧಿಕಾರಿ ಹೇಳಿದಾಗ ವಿಷಯ ಅಧ್ಯಕ್ಷರಿಗೂ ಮೀರಿದಾಗ ಸಭೆಯಲ್ಲಿ ಚಚರ್ೆಯಾದ ಕೆಲಸಗಳು ಅನುಷ್ಠಾನಕ್ಕೆ ಬಾರದಿದ್ದರೆ ಸಭೆ ಏಕೆ ಎಂದು ಕೋಪಗೊಂಡ ಸದಸ್ಯರು ಸಭಾತ್ಯಾಗ ಮಾಡಿದರು.
ಸಕಾಲಕ್ಕೆ ಮಳೆ ಆಗದೇ ಇರುವುದರಿಂದ ನೀರಿನ ಸಮಸ್ಯೆ ಉಂಟಾಗುತ್ತಿದೆ. ಇದು ಬೇಸಿಗೆಗೆ ಮತ್ತಷ್ಟು ಉಲ್ಬಣಗೊಳ್ಳುವುದಕ್ಕಿಂತ ಮುಂಚೆ ಅವಶ್ಯ ಇರುವಲ್ಲಿ ಕೊಳವೆ ಬಾವಿ ಹೊಡಿಸಿ ಎಂದು ಸದಸ್ಯರು ಕೇಳಿದಾಗ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖಾಧಿಕಾರಿ ಕಿರಣ ಘೋರ್ಪಡೆ ಅಂತಹ ಸ್ಥತಿ ಕಂಡು ಬಂದಿಲ್ಲ ಎಂದು ಹೇಳಿದಾಗ ಏಕೆ ಇಲ್ಲಾ. ಗ್ರಾಮೀಣ ಪ್ರದೇಶಕ್ಕೆ ಖುದ್ದಾಗಿ ಬಂದು ನೋಡಿ ಬರ್ತಿನಿ ಅಂತಾ ಹೇಳ್ತಿರಿ ಬರೋದೇ ಇಲ್ಲಾ ಎಂದು ಸದಸ್ಯರು ದೂರಿದರು. ಕುಡಿಯುವ ನೀರಿಗೆ ಆದ್ಯತೆ ನೀಡಿ,ಸಕರ್ಾರಿ ಶಾಲೆಗಳಲ್ಲಿ ಮಕ್ಕಳಿಗೆ ನೀರಿನ ತೊಂದರೆ ಇದೆ. ಬೇಗೆನೇ ಪರಿಶೀಲಿಸಿ ವ್ಯವಸ್ಥೆ ಮಾಡಿಕೊಡಲು ಸಭೆಯ ಗಮನಕ್ಕೆ ತಂದರು.
ಅಲ್ಲದೇ ತಾಲೂಕಿನಲ್ಲಿರುವ ಬ್ಯಾರೇಜುಗಳ ದುರಸ್ಥಿಯನ್ನು ಪಡಸಲಗಿ ಬ್ಯಾರೇಜ್ ಮಾದರಿಯಲ್ಲಿ ದುರಸ್ಥಿ ಕಾಮಗಾರಿ ಕೈಗೊಳ್ಳಲು ಕೂಡ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ಸದಸ್ಯರು ತಂದಾಗ ಈ ಕಾರ್ಯ ನಡೆದಿದೆ. ಸಕರ್ಾರವು ಸಮಾನಂತರ ಬ್ಯಾರೇಜ್ಗೆ ಆರಂಭಿಸಲು ಚಿಂತನೆ ನಡೆಸಿದೆ ಎಂದು ಹೇಳಿದರು.
ಕೆಎಸ್ಆರ್ಟಿಸಿ ಬಸ್ಸುಗಳು ಗ್ರಾಮೀಣ ಭಾಗಗಳಿಗೆ ಸಮಯಕ್ಕೆ ಸರಿಯಾಗಿ ವಾಹನಗಳ ಓಡಾಟ ಆಗುತ್ತಿಲ್ಲ. ಈ ಕುರಿತು ಘಟಕ ವ್ಯವಸ್ಥಾಪಕರಿಗೆ ಮನವರಿಕೆ ಮಾಡಿಕೊಡಿ ಎಂದು ಸಭೆಗೆ ಆಗಮಿಸಿದ್ದ ಅಧಿಕಾರಿಗೆ ಸದಸ್ಯರು ಒತ್ತಾಯಿಸಿದರು.
ಅರಣ್ಯ, ಕಂದಾಯ, ಆರೋಗ್ಯ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಮೈಚಳಿಯನ್ನು ಬಿಡಿಸಿದ ಸದಸ್ಯರು ಮುಂದಿನ ಸಭೆಯಲ್ಲಿ ಸಭೆಯ ಮೂರು ದಿನ ಮುಂಚಿತ ಮಾಹಿತಿ ನೀಡಬೇಕೆಂದು ಅಧ್ಯಕ್ಷರು ಸೂಚನೆ ನೀಡಿದರು.
ಮಹಿಳಾ ಸದಸ್ಯೆ ಸಭೆಯಲ್ಲಿ ಮೌನವಾಗಿ ಕುಳಿತ್ತಿದ್ದರೆ ಅವರ ಪತಿರಾಯ ಅಧಿಕಾರಿಗಳಿಗೆ ಪ್ರಶ್ನೇಗಳನ್ನು ಕೇಳಿ ಸಮರ್ಪಕ ಉತ್ತರ ದೊರೆಯದಿದ್ದಾಗ ಅವರನ್ನು ತರಾಟೆಗೂ ಸಹ ತೆಗೆದುಕೊಂಡಿದ್ದು ಕಂಡು ಬಂತು.
ತಾಪಂ ಅಧ್ಯಕ್ಷ ತಿಮ್ಮಣ್ಣ ಬಟಕುಕರ್ಿ ಅಧ್ಯಕ್ಷತೆಯನ್ನು ವಹಿಸಿದ್ದರು. ತಾಪಂ ಕಾರ್ಯನಿವರ್ಾಹಕ ಅಧಿಕಾರಿ ಬಿ.ವ್ಹಿ.ಅಡವಿಮಠ,ಸಾಮಾಜಿಕ ನ್ಯಾಯ ಸಮೀತಿಯ ರುಕ್ಮವ್ವ ಪಾಟೀಲ,ತಾಪಂ ಸದಸ್ಯರಾದ ಸಂಗಪ್ಪ ಇಮ್ಮನ್ನವರ,ಯಶವಂತ ಹರಿಜನ,ಪರಪ್ಪ ಜನವಾಡ,ಮಹಿಳಾ ಸದಸ್ಯರು ಹಾಗೂ ಅಧಿಕಾರಿಗಳಾದ ಎಸ್.ಕೆ.ಕೋರಡ್ಡಿ, ಜಿ.ಎಂ.ರಾಠೋಡ, ಪಿಡಬ್ಲ್ಯೂಡಿಯ ಗಾಯಕವಾಡ, ಎಲ್ಲ.ಎ.ಹಿರೇಮಠ, ಡಾ.ವಿ.ಎಸ್.ಮಲಘಾಣ,ಎಂಬಿ.ದುಂಡನ್ನವರ, ಎಲ್.ಬಿ.ದೇಶನೂರ,ಎಸ್.ಸಿ.ನಾಯ್ಕರ,ಎಂ.ಐ.ಆಲೂರ,ಕಿರಣ ಘೋರ್ಪಡೆ,ಜಿಪಂನಪಿ.ಮೀಸಿ ಮುಂತಾದವರು ಉಪಸ್ಥಿತರಿದ್ದರು.