ತಾಂಬಾ: ಕಳಪೆ ಕಾಮಗಾರಿ ಸೆತುವೆ ಗೊಡೆಗಳಲ್ಲಿ ಬಿರುಕು

ಲೋಕದರ್ಶನ ವರದಿ

ತಾಂಬಾ 12: ರೈತರ ಕಣ್ಣಿಗೆ ಮಣ್ಣೆರೆಚಿ ಇಲಾಖೆಯ ನಿಯಮಗಳನ್ನು ಲೆಕ್ಕಿಸದೆ ರಾತ್ರೊರಾತ್ರಿ ಕಾಮಗಾರಿ ಮಾಡಿ ಮುಗಿಸುವ ಕಾಲುವೆಗಳ ಸ್ಥಿತಿ ಹೆಗಿರುತ್ತದೆ ಎಂಬುದಕ್ಕೆ ತಾಂಬಾ ಗ್ರಾಮದ ಜಮೀನುಗಳಲ್ಲಿ ನಿಮರ್ಿಸಲಾದ ಗುತ್ತಿ ಬಸವಣ್ಣ ಏತನಿರಾವರಿ ಉಪ ಕಾಲುವೆಗಳೆ ಸಾಕ್ಷಿ 

ತಾಂಬಾ ಗ್ರಾಮದಿಂದ ಬೆನಕನಳ್ಳಿ ಮಾರ್ಗವಾಗಿ ಹಾದು ಹೊದ ಗುತ್ತಿಬಸವಣ್ಣ ಏತ ನಿರಾವರಿ ಯೋಜನೆಯಲ್ಲಿ ಬರುವ ಪೂರ್ವ ಕಾಲುವೆಯ ಡಿಸ್ಟ್ರಿಬುಟರ್ 13ಎ ನಲ್ಲಿ ಕಾಮಗಾರಿಗಳನ್ನು ಗುತ್ತಿಗೆದಾರರು ಎಲ್ಲ ನಿಯಮಾವಳಿ ಮಿರಿ ಕಳಪೆ ಕಾಮಗಾರಿ ಮಾಡಿದ್ದರಿಂದ ಕಾಲುವೆ ನಿಮರ್ಿಸಿದ 1 ವರ್ಷದಲ್ಲಿಯೆ ಮಳೆಯ ರಬಸಕ್ಕೆ ಸೇತುವೆಗಳು ಬಿರುಕು ಬಿಟ್ಟಿರುವದಲ್ಲದೆ ಇನ್ನೊಂದೆಡೆ ಸೇತುವೆಗಳು ಕುಸಿದು ಬಿದ್ದಿವೆ ಅ ವೈಜ್ಞಾನಿಕ ನೀತಿಯಿಂದ ನಿಮರ್ಿಸಲಾದ ಸೇತುವೆಗಳಿಗೆ ಸರಿಯಾದ ನೀರಿನ ನಿರ್ವಹಣೆ ಉತ್ತಮ ಗುಣಮಟ್ಟದ ಮರಳು ಕಬ್ಬಿಣ ಹಾಗೂ ನಿಯಮಾನುಸಾರ ಸಿಮೇಂಟ ಬಳಸದ ಕಾರಣ ಸೇತುವೆಗಳು ಬಿರುಕು ಬಿಟ್ಟಿದ್ದು ಸೇತುವೆಗಳ ತಳಬಾಗದ ಬೆಡ್ ಸಮೇತ ಬಿರುಕುಗೊಂಡಿವೆ ಇದರಿಂದ ರೈತರ ಜಮೀನುಗಳಿಗೆ ನೀರು ನುಗ್ಗುವ ಬೀತಿ ಎದುರಾಗಿದೆ 

ತುಂಬಿದ ಸೇತುವೆ: 

ಕಾಲುವೆಗಳನ್ನು ಕೊರೆಯುವ ವೇಳೆ ರೈತರ ಹಿತ ದೃಷ್ಠಿಯಿಂದ ಮೊದಲು ರಸ್ತೆ ನಿಮರ್ಿಸುವ ನಿಯಮವಿದೆ ಆದರೆ ಗುತ್ತಿಗೆ ದಾರರು ನಿಯಮಗಳನ್ನು ಗಾಳಿಗೆ ತೂರಿ ಕೊರೆದ ಕಾಲುವೆಯ ಮಣ್ಣನ್ನು ಪಕ್ಕದಲ್ಲೆ ಎಸದಿದ್ದಾರೆ ಕಾರಣಕ್ಕಾಗಿ ಮಳೆಯಿಂದ ಸಂಪೂರ್ಣವಾಗಿ ಮಣ್ಣು ಕಾಲುವೆಯಲ್ಲಿ ಹರಿದು  ಸೆತುವೆಯಲ್ಲಿ ಸೆರಿಕೊಂಡಿದೆ ನೀರು ಹರಿಯುವದಕ್ಕೆ ತಡೆವಡ್ಡಿದೆ ಜಮೀನಿನಲ್ಲಿ ನಿಲ್ಲುವ ನೀರು ಬೇರಡೆ ಹರಿಯಲಿ ವ್ಯವಸ್ಥಿತವಾದ ಕಾಮಗಾರಿ ಮಾಡದೆ ಇರುವ ಗುತ್ತಿಗೆ ದಾರರು ನಿರ್ಲಕ್ಷ್ಯ ವಹಿಸಿದ್ದರೆ ಕೆಬಿಜಿಎನ್ಎಲ್ ಅಧಿಕಾರಿಗಳು ಸಹ ಕಾಮಗಾರಿ ನಡೆಯುತ್ತಿದ್ದ ವೇಳೆ ಸ್ಥಳಕ್ಕೆ ಭೇಟಿ ನಿಡಿ ಕಾಮಗಾರಿ ಪರಿಶಿಲಿಸಲಿಲ್ಲ ಹಿಗಾಗಿ ಕಳಪೆ ಕಾಮಗಾರಿಯಿಂದ ರೈತರು ತೊಂದರೆ ಅನುಭವಿಸುವಂತಾಗಿದೆ ಜಮೀನಿನಲ್ಲಿ ನಿತ್ತ ನೀರು ಇನ್ನೊಂದೆಡೆ ಸರಾಗವಾಗಿ ಹರಿಯಲು ಒಳಗಟ್ಟಿ ನಿಮರ್ಿಸಿಲ್ಲ ಹಾಗೂ ರೈತರು ತಮ್ಮ ಜಮೀನುಗಳಿಗೆ ತಿರುಗಾಡಲು ರಸ್ತೆ  ನಿಮರ್ಿಸಿಲ್ಲ ಹಾಗೂ ನಿಮರ್ಿಸಲಾದ ಸೇತುವೆಗಳನ್ನು ಜಮೀನುಗಳ ಸಮಬಾಗಕ್ಕೆ ನಿಮರ್ಿಸಿ ನೀರು ಹರಿದು ಹಳ್ಳ ಸೆರುವಂತ ವ್ಯವಸ್ಥೆ ಆಗಬೇಕಿತ್ತು ಈ ಭಾಗದ ಜಮೀನುಗಳಿಗೆ ಹೊಂದಿಕೊಂಡ ಕಾಲುವೆಗಳಿಗೆ ನಿಮರ್ಿಸಲಾದ ಸೆತುವೆಗಳ ಮೆಲ್ಬಾಗದಿಂದ ನೀರು ಹರಿದು ಬೇರೆಡೆ ಸೆರುವ ವ್ಯವಸ್ಥಿತವಾದ ಕಾಮಗಾರಿ ಮಾಡಿಲ್ಲ ಎಂದು ರೈತರು ಆರೊಪಿಸಿದ್ದಾರೆ.