ತಾಂಬಾ: ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ

ಲೋಕದರ್ಶನ ವರದಿ

ತಾಂಬಾ 27: ಹಣ ಧಾನ ಮಾಡುವದು ದೊಡ್ಡದಲ್ಲ ತನುದಾನ ಮಾಡುವದು ದೊಡ್ಡದು ಕಾಮಧೇನು ಹರಿಯುವ ನದಿ ಗಿಡಗಳು ಸ್ವಾರ್ಥವನ್ನು ಬಯಸುವದಿಲ್ಲ ನಾವು ಅದೆ ರೀತಿಯಾಗಬೇಕು ಈಗ ದೇಶದಲ್ಲಿ ಡೊಂಗಿ ರಾಜಕಾರಣ ತಾಂಡವಾಡುತ್ತಿದೆ ಎಂದು ಸಮಾಜ ಸೇವಕ ಎಸ್ ಡಿ ಕುಮಾನಿ ಹೇಳಿದರು.

ಹೊನ್ನಳ್ಳಿ ಗ್ರಾಮದ ಶಿವಶರಣೆ ನಿಂಬೆಕ್ಕ ವಿದ್ಯಾಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಶಿವಶರಣೆ ನಿಂಬೆಕ್ಕ ಪೌಢ ಶಾಲೆಯ ಹಾಗೂ ಡಿ.ಎಮ್.ಕುಮಾನಿ ಪದವಿ ಪೂರ್ವ ಮಾಹಾವಿದ್ಯಾಲಯಗಳ ಸಯುಕ್ತ ಆಶ್ರಯದಲ್ಲಿ ಥಿಯಾಸೊಪಿಕಲ್ ಸೋಸೈಟಿ ವತಿಯಿಂದ  ಉಚಿತ ನೋಟ ಬುಕ್ ವಿತರಿಸಿ ಮಾತನಾಡಿ ಚುನಾವಣೆ ಒಂದು ಜಾತ್ರೆ  ಅದು ಪವಿತ್ರವಾದದ್ದು ಕೂಡಾ ಅಧಿಕಾರ ಎಲ್ಲರ ಕೈಯಲ್ಲಿ ಇದೆ ಬಡವರ ರೈತರ ಪರ ಹೋರಾಟ ಮಾಡುವವರಿಗೆ ಮತನೀಡಿ ಎಂದರು. 

ಥಿಯಾಸೊಪಿಕಲ್ ಸೋಸೈಟಿ ತಮ್ಮ ಸ್ವಂತ ಖಚರ್ಿನಲ್ಲಿ ಮಕ್ಕಳಿಗೆ ನೋಟ ಬುಕ ಮತ್ತು ಪೇನ್ನ ಉಚಿತವಾಗಿ ಹತ್ತು ವರ್ಷದಿಂದ ವಿತರಿಸುತ್ತಿರುವದು ಶ್ಲಾಂಘನೀಯ ಎಂದರು. 

ಕಾರ್ಯಕ್ರಮದಲ್ಲಿ ವೇದ ಮೂರ್ತಿ  ಶಿವಮೂತರ್ಿಯ ಹಿರೇಮಠ ಸ್ವಾಮಿಗಳು ಸಾನಿದ್ಯ ವಹಿಸಿ ಆಶಿರ್ವಚನ ನೀಡಿದರು ಜಿ.ಕೆ.ಜಹಗೀರದಾರ ಪ್ರಸ್ಥಾವಿಕವಾಗಿ ಮಾತನಾಡಿದರು. ಎಸ್ಎಸ್ಎಲ್ಸಿ ಪರೀಕ್ಷೇಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾಥರ್ಿ ಶ್ರೀನಿವಾಸ ಸಂಸ್ಥೆಯ ಅಧ್ಯಕ್ಷ ಎಸ್.ಡಿ.ಕುಮಾನಯವರು ಸನ್ಮಾನಿಸಿ ಬಹುಮಾನ ನೀಡಿದರು.

ವಠಲ ಬಾವಿಕಟ್ಟಿ, ರಾಮಗೊಂಡ ತೊನಶ್ಯಾಳ, ಮಲ್ಲಿಕಾಲ್ಲಿರ್ಜನ ಮಾಲಗಾರ, ಗುರಣ್ಣ ವಾಡೆದ, ಪಿ.ಎಸ್.ಕುಮಾನಿ, ಸಿ.ಎಸ್.ಗೊಗಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕ ಎಚ್.ಪಿ.ದೇಶಪಾಂಡೆ ಸ್ವಾಗತಿಸಿದರು. ಬಿ.ಆರ್.ಲಾಳಿ ನಿರೂಪಿಸಿದರು ಎಸ್.ಎಮ್.ಪಾಠಕ್ ವಂದಿಸಿದರು.