ವಿಜಯಪುರ 10: ಇದೇ ತಿಂಗಳು 3 ರಿಂದ 7 ರವರೆಗೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮಟ್ಟದ ಮೊದಲನೆಯ ಫೆಡರೇಷನ್ ಕಪ್ ಟಿ-10 ಟೆನ್ನಿಸ್ ಬಾಲ್ ಕ್ರಿಕೆಟ್ ಚಾಂಪಿಯನ್ ಶಿಪ್ ನಲ್ಲಿ ದೇಶದ ವಿವಿಧ ರಾಜ್ಯಗಳಿಂದ 24 ತಂಡಗಳು ಭಾಗವಹಿಸಿದ್ದವು. ಅದರಲ್ಲಿ ನಮ್ಮ ಕರ್ನಾಟಕ ರಾಜ್ಯದ ಕರ್ನಾಟಕ ರಾಜ್ಯ ಟಿ-10 ಕ್ರಿಕೆಟ್ ಸಂಸ್ಥೆ, ಉತ್ತರ ಕರ್ನಾಟಕ ಟಿ-10 ಕ್ರಿಕೆಟ್ ಸಂಸ್ಥೆ,ಮಹಿಳಾ ಕ್ರಿಕೆಟ್ ಸಂಸ್ಥೆಯ ಪರವಾಗಿ 4ತಂಡಗಳು ಭಾಗವಹಿಸಿ 24 ರಾಜ್ಯಗಳ ತಂಡಗಳ ಜೊತೆ ಕಾದಾಡಿ ಕರ್ನಾಟಕ ಸೀನಿಯರ್ಸ್ ತಂಡ ಪ್ರಥಮ ಸ್ಥಾನ ಪಡೆದರೆ, ಅಂಡರ್ 17 ಬಾಲಕರ ತಂಡ ತೃತೀಯ ಸ್ಥಾನ ಹಾಗೂ ಮಹಿಳಾ ತಂಡಗಳು ಉತ್ತಮ ಆಟ ಆಡಿ ಸಮಾಧಾನಕರ ಬಹುಮಾನ ಪಡೆದು ವಿಜಯಪುರ ನಗರದ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ತಂಡಗಳಿಗೆ ವಿವಿಧ ಬಾಜಾ ಭಜಂತ್ರಿಗಳ ಮೂಲಕ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ಅಶೋಕಕುಮಾರ ಜಾಧವ, ಜಿಲ್ಲಾಧ್ಯಕ್ಷರಾದ ಡಾಽಽ ಬಾಬುರಾಜೇಂದ್ರ ನಾಯಿಕ,ಡಾಽಽ ಪ್ರಭುಗೌಡ ಪಾಟೀಲ (ಲಿಂಗದಳ್ಳಿ),ರವಿಕುಮಾರ ಎಫ್ ಚವ್ಹಾಣ,ಎನ್ ಎಂ ಹೋಟಗಿಫಯಾಜ್ ಕಲಾದಗಿ, ಸಂಕೇತ್ ನಾಯಿಕ, ಸುರೇಶ್ ಬಿಜಾಪುರ, ಗಣೇಶ್ ಬೋಸಲೇ, ಶಶಿಕಲಾ ಇಜೇರಿ ವಿದ್ಯಾ ಕೊಟ್ಟೆನ್ನವರ, ಪುಷ್ಪ ಮಹಾಂತಮಠ,ಪ್ರಕಾಶ್ ರಾಠೋಡ, ಸೋಮಶೇಖರ ರಾಠೋಡ, ಶ್ರೀಕಾಂತ್ ಕಾಖಂಡಕಿ, ಸಂತೋಷ ಅಂಗಡಿ, ಜಗದೀಶ್ ದೊಡಮನಿ, ರಾಬರ್ಟ್ ಹೊಸಳ್ಳಿ,ಚಾಂದ್ ವಸಿಮ್ ಮುಕಾದಂ, ಸಲೀಂ ಬೆಪಾರಿ, ಪ್ರಲ್ಹಾದ, ರೇಖಾ ರಾಠೋಡ, ರಾಜೇಶ್ವರಿ ಮಾಗಿ, ಮಾಲಾ ಗುಡಿಗಾರ ಸೇರಿದಂತೆ ಕ್ರೀಡಾಪಟುಗಳು, ಅಭಿಮಾನಿಗಳು, ಕುಟುಂಬಸ್ಥರು ಹಾಗೂ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದು ಅದ್ದೂರಿಯಾಗಿ ಕುಣಿದು ಕುಪ್ಪಳಿಸಿ ವಿಜಯೋತ್ಸವ ಆಚರಣೆ ಮಾಡಿದರು.
ಸಂಕ್ಷಿಪ್ತ ಸ್ಕೋರ್ ವಿವರ : ಉಪಾಂತ್ಯ ಪಂದ್ಯವು ಉತ್ತರ ಪ್ರದೇಶದ ವಿರುದ್ದ ನಡೆಯಿತು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ರಾಜ್ಯ ಸೀನಿಯರ್ಸ್ ತಂಡವು ನಿಗದಿತ 8ಓವರ್ ನಲ್ಲಿ ಭರ್ಜರಿ ಬ್ಯಾಟಿಂಗಮಾಡಿ 7ಹುದ್ದರಿಗಳನ್ನು ಕಳೆದುಕೊಂಡು 109 ರನ್‌ಗಳನ್ನೂ ಕಲೆಹಾಕಿತು ಜಯರಾಂ ಜಾಧವ್ 16ಎಸೆತುಗಳನ್ನು ಎದುರಿಸಿ 4ಸಿಕ್ಸರ್ 2ಬೌಂಡರಿಗಳ ಮೂಲಕ 40ರನ್ ಗಳಿಸಿದರೆ ಅಬೂಬಕ್ಕರ್ ಕೊರಬು 14 ಎಸೆತಗಳನ್ನು ಎದುರಿಸಿ 4ಸಿಕ್ಸರ್ ಹಾಗೂ ಒಂದು ಬೌಂಡರಿ ಮೂಲಕ 38ರನ್ ಗಳನ್ನು ಗಳಿಸಿ ಭರ್ಜರಿ ಬ್ಯಾಟಿಂಗ್ ಮಾಡಿ ಬೃಹತ ಮೊತ್ತ ಕಲೆ ಹಾಕಿದರು..ಇದಕ್ಕೆ ಉತ್ತರವಾಗಿ ಉತ್ತರ ಪ್ರದೇಶ ರಾಜ್ಯ ತಂಡವು 8ಓವರ್ ಗಳಲ್ಲಿ 9ಹುದ್ದರಿಗಳ ನಷ್ಟಕ್ಕೆ ಕೇವಲ 42 ರನ್ ಗಳನ್ನು ಗಳಿಸಿ ಪರಾಭವಗೊಂಡಿತು. ಕರ್ನಾಟಕ ತಂಡದ ಬೌಲರ್ ಮುತ್ತು ನಾಯಿಕ ತನ್ನ ಕರಾರುವಕ್ ಬೌಲಿಂಗ್ ಪ್ರದರ್ಶನ ಮೂಲಕ 2 ಓವರ್ ನಲ್ಲಿ ಕೇವಲ 8ರನ್ ನೀಡಿ 5ವಿಕೆಟ್ ಪಡೆದರೆ ಸಲೀಂ ಶಹಾಪುರ 2ಓವರ್ ನಲ್ಲಿ 10ರನ್ ನೀಡಿ 3 ವಿಕೆಟ್ ಪಡೆದು ಎದುರಾಳಿ ತಂಡಕ್ಕೆ ನಡುಕ ಹುಟ್ಟಿಸಿದರು.. ಒಟ್ಟಾರೆ ಪಂದ್ಯಾವಳಿಯಲ್ಲಿ ಏಕ ಮಾತ್ರ ಶತಕ ಬಾರಿಸಿದ ಅಬುಭಕ್ಕರ ಕೋರಬು ಸರಣಿ ಪುರುಷ ಪ್ರಶಸ್ತಿ ಪಡೆದರು,ಉತ್ತಮ ಬ್ಯಾಟ್ಸ್ ಮನ್ ಪ್ರಶಸ್ತಿ ಯನ್ನುಜಯರಾಮ್ ಜಾಧವ್,ಉತ್ತಮ ಬೌಲರ್ ಪ್ರಶಸ್ತಿಯನ್ನು ಸಲೀಂ ಶಹಾಪುರ, ಆಲ್ ರೌಂಡರ್ ಪ್ರಶಸ್ತಿಯನ್ನು ಮುತ್ತು ನಾಯಿಕ ಪಡೆದರು. ಅಲ್ಲದೆ ಕರ್ನಾಟಕ ರಾಜ್ಯದ ಅಂಡರ್ 17ಬಾಲಕರ ಪಂದ್ಯಾವಳಿಯಲ್ಲಿ ವಿಶಾಲ ಛಲವಾದಿ ಉತ್ತಮ ಬ್ಯಾಟ್ಸ್ ಮನ್ ಆಗಿ ವಯಕ್ತಿಕ ಪ್ರಶಸ್ತಿಯ ಪಡೆದರುತೃತೀಯ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಉತ್ತರ ಪ್ರದೇಶದ ತಂಡವನ್ನು ಮಣಿಸಿ ತೃತೀಯ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡಿತು.