ಸ್ವಾಮಿ ವಿವೇಕಾನಂದರು ಸಮಾಜದ ನಿಜವಾದ ಸುಧಾರಕರಾಗಿದ್ದಾರೆ

ಮೂಡಲಗಿ 12: ಭಾರತ ದೇಶದ ಸಂಸ್ಕೃತಿ ಹಾಗೂ ಪರಂಪರೆಯನ್ನು ವಿಶ್ವಮಟ್ಟಕ್ಕೆ ಪರಿಚಯಿಸುವುದರೊಂದಿಗೆ ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗಿರುವ ಸ್ವಾಮಿ ವಿವೇಕಾನಂದರು ಸಮಾಜದ ನಿಜವಾದ ಸುಧಾರಕರಾಗಿದ್ದಾರೆ. ಇಡೀ ತಮ್ಮ ಜೀವನವನ್ನು ಭಾರತದ ಎಳಿಗೆಗೆ ಮುಡುಪಾಗಿಟ್ಟಿದ್ದರು ಎಂದು ಸ್ಥಳೀಯ ದಂತ ವೈದ್ಯರಾದ ಡಾ. ಸಂಜಯ ಶಿಂಧಿಹಟ್ಟಿ ಇವರು ಹೇಳಿದರು.

ಅವರು ಸ್ಥಳೀಯ ಶ್ರೀಪಾದಬೋಧ ಸ್ವಾಮಿಜಿ ಸರಕಾರಿ ಪ್ರಥಮ ದಜರ್ೆ ಮಾಹಾವಿದ್ಯಾಲಯದಲ್ಲಿ ಆಯ್.ಕ್ಯೂ.ಎ.ಸಿ. ಹಾಗೂ ಸಾಂಸ್ಕೃತಿಕ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸ್ವಾಮಿ ವಿವೇಕಾನಂದರ  157ನೇ ಜನ್ಮ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು,  ದಾರಿದ್ರ್ಯ, ಬಡತನದಿಂದ ಬಳಲುತ್ತಿದ್ದ ಅಂದಿನ ಭಾರತೀಯ ಸಮಾಜದ ಸುಧಾರಣೆಗೆ ಪ್ರಯತ್ನಿಸಿದರು. ಅಲ್ಲದೇ ತಾವೇ ಶ್ರೇಷ್ಟ ಎಂದು ನಂಬಿದ್ದ ಪಾಶ್ಚಿಮಾತ್ಯರ ಗಮನವನ್ನು ಭಾರತೀಯ ಸಂಸ್ಕೃತಿ ಹಾಗೂ ಸನಾತನ ಧರ್ಮದ ಕಡೆಗೆ ಸೆಳೆಯುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇಂದಿನ ಯುವ ಜನತೆ ಅವರ ಆದರ್ಶಗಳನ್ನು ರೂಢಿಸಿಕೊಳ್ಳಬೇಕೆಂದು ತಿಳಿಸಿದರು. 

ಪ್ರಾಂಶುಪಾಲರಾದ ಡಾ. ಆರ್. ಬಿ. ಕೊಕಟನೂರ  ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಪಾಲಿಸಿದರೆ ಜೀವನದಲ್ಲಿ ನೀವು ಅಂದುಕೊಂಡ ಗುರಿಯನ್ನು ಮುಟ್ಟಲು ಸಾಧ್ಯ ಎಂದು ಹೇಳುತ್ತಾ ಇಂತಹ ಮಹನೀಯರ  ನುಡಿಗಳು  ಭಾರತಕ್ಕೆ ಲಭಿಸಿದರಿಂದ  ಇವತ್ತು ನಮ್ಮ ದೇಶ ಆದರ್ಶಪ್ರಾಯವಾಗಲು ಸಾಧ್ಯವಾಗಿದೆ. ಇವರ ತತ್ವಾದರ್ಶಗಳು ಸರ್ವಕಾಲಿಕವಾದವುಗಳು ಎಂದು ಹೇ:ಳಿದರು.

ಸಾಂಸ್ಲೃತಿಕ  ಸಂಯೋಜಕ ಶಿವಾನಂದ ಚಂಡಕೆ ಆಯ್.ಕ್ಯೂ.ಎ.ಸಿ. ಸಂಯೋಜಕ ಚೇತನರಾಜ್ ಬಿ. ಗಾಯತ್ರಿ ಸಾಳೋಖೆ, ಚೇತನರಾಜ್ ಬಿ,ಶಿವಕುಮಾರ, ಶೀತಲ ತಳವಾರ ಹನುಮಂತ ಕಾಂಬಳೆ, ರಾಜೇಂದ್ರ ಆಸಂಗಿ, ರಾಧಾ ಎಂ.ಎನ್, ರವಿ ಗಡದನ್ನವರ, ಎಸ್.ಪಿ.ದೇಶಪಾಂಡೆ, ಕುಮಾರ ಗಾಣಿಗೇರ,ಸಂಜೀವ ಮದರಖಂಡಿ, ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರೊ. ಸ್ವಾಗತಿಸಿದರು  ಪ್ರೊ. ನಿರೂಪಿಸಿದರು  ಪ್ರೊ ವಂದಿಸಿದರು.