ಹುಕ್ಕೇರಿ : ಸ್ಥಳೀಯ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾದ ಸ್ವಾಮಿ ವಿವೇಕಾನಂದ ಸಿ.ಬಿ.ಎಸ್.ಇ ಸ್ಕೂಲಿನ ವಾಷರ್ಿಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಉತ್ಸಾಹದ ವಾತಾವರಣದಲ್ಲಿ ಜರುಗಿತು.
ಶಾಲಾ ಆವರಣದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆ ಅಧ್ಯಕ್ಷ ಅಶೋಕ ಪಾಟೀಲ ಎರಡು ದಶಕದಿಂದ ಶೈಕ್ಷಣೀಕ ಕ್ಷೇತ್ರ ಸಾಕಷ್ಟು ಸ್ಪಧರ್ಾತ್ಮಕ ಹಾಗೂ ಪ್ರಗತಿ ಕಂಡು ಬರುತ್ತಿದೆ. ಇದಕ್ಕೂ ಮೊದಲು ತಾಲೂಕಿಗೆ ಬೆರಳೆಣಿಕೆಯಷ್ಟು ಪ್ರೌಢಶಾಲೆಗಳಿದ್ದವು. ಗ್ರಾಮೀಣ ವಿದ್ಯಾಥರ್ಿಗಳಿಗೆ ಸರಿಯಾದ ವಾಹನ ಸೌಲಭ್ಯ ಸಹ ಇರಲಿಲ್ಲ. ಈಗ ಪಟ್ಟಣ ಮತ್ತು ಗ್ರಾಮ ಮಟ್ಟದಲ್ಲಿ ಅನೇಕ ಪ್ರೌಢಶಾಲೆಗಳಿವೆ. ಮಕ್ಕಳನ್ನು ಮನೆ ಬಾಗಿಲಿಗೆ ಬಂದು ಶಾಲೆಗಳಿಗೆ ಕರೆದುಕೊಂಡು ಹೋಗುತ್ತಿವೆ. ಆಧುನಿಕ ಸೌಲಭ್ಯದಿಂದ ಎಲ್ಲ ವಿಷಯಗಳನ್ನು ಸುಲಭವಾಗಿ ಅರಿಯಬಹುದು. ಇದರಿಂದ ಬೌದ್ಧಿಕ ಬೆಳವಣಿಗೆಯಾದರೂ ಶಾರೀರಕ ಬೆಳವಣಿಗೆ ಕುಂಠಿತ ಆಗುತ್ತಿದೆ ಎಂದು ವಿಷಾದಿಸಿದರು. ಅದಕ್ಕಾಗಿ ಪ್ರತಿಯೊಬ್ಬ ವಿದ್ಯಾಥರ್ಿಗಳು ಆಟೋಟಗಳಲ್ಲಿ ಪಾಲ್ಗೊಂಡು ಶಾರೀರಕ ಕ್ಷಮತೆ ಹೆಚ್ಚಿಸಿಕೊಳ್ಳಬೇಕೆಂದರು.
ರಾಜ್ಯೋತ್ಸವಜಿಲ್ಲಾ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ರಾಮಣ್ಣ ನಾಯಿಕ ಹಾಗೂ ಪತ್ರಕರ್ತ ಬಾಬು ಸುಂಕದ ಮಾತನಾಡಿ ಶಿಕ್ಷಣ ಸಂಸ್ಥೆಗಳಲ್ಲಿ ಸ್ಪಧರ್ೆ ಹೆಚ್ಚಾಗಿದ್ದರೂ ಗುಣಮಟ್ಟದ ಶಿಕ್ಷಣ ನೀಡುವ ಸಂಸ್ಥೆಗಳನ್ನು ಪಾಲಕರು ಆಯ್ಕೆ ಮಾಡಿಕೊಳ್ಳುತ್ತಾರೆ. ಆ ನಿಟ್ಟಿನಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾಥರ್ಿಗಳಿಗೆ ವಿದ್ಯೆ ನೀಡುವ ಮೂಲಕ ತಾಲೂಕಿನ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳ ಸಾಲಿನಲ್ಲಿ ಈ ಸಂಸ್ಥೆ ಹೆಸರಾಗಿದೆ ಎಂದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾಮಣ್ಣ ನಾಯಿಕ, ವಿದ್ಯತ್ ಸಹಕಾರಿ ಸಂಘದ ನಿವೃತ್ತ ಉದ್ಯೋಗಿ ಕೆಂಪಣ್ಣ ನೇಲರ್ಿ ಅವರನ್ನು ಸತ್ಕರಿಸಿದರು. ನಂತರ ಪಾಲಕರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಭರತ ಸೊಲ್ಲಾಪೂರೆ, ಬಸವರಾಜ ವಾಜಂತ್ರಿ, ನಿಸ್ಸಾರ ಮೋಮಿನ, ವಿಠ್ಠಲ ಬೋಂಗಾಳೆ ಮೊದಲಾದ ಗಣ್ಯರು, ಸಂಸ್ಥೆ ವ್ಯವಸ್ಥಾಪಕ ಅನೀಲ ಪಾಟೀಲ, ಪ್ರಾಂಶುಪಾಲೆ ಲಕ್ಷ್ಮೀದೊಡ್ಡಲಿಂಗನವರ, ಪ್ರವೀಣ ಪಾಟೀಲ ವೇದಿಕೆಯಲ್ಲಿದ್ದರು. ವಿದ್ಯಾಥರ್ಿಗಳಾದ ಸಾತ್ವಿಕ್ ಜಾಂಬೋಟಿ ಸ್ವಾಗತಿಸಿದಳು. ಶೃದ್ಧಾ ಹೆದ್ದೂರಶೆಟ್ಟಿ ಮತ್ತು ಸ್ನೇಹಲ ಶಿಂಧೆ ನಿರೂಪಿಸಿದರೆ ಸಾಕ್ಷಿ ವಾಲಿ ವಂದಿಸಿದಳು.