ಚೆನ್ನೈ, 21 ಬಹುಭಾಷಾ ನಟ, ತಮಿಳುನಾಡಿನ ಮಕ್ಕಲ್ ನೀದಿ ಮಯ್ಯಂ ಪಕ್ಷ - ಎಂ ಎನ್ ಎಂ ಪಿ ಅಧ್ಯಕ್ಷ ಕಮಲ ಹಾಸನ್ ಅವರು ನಾಳೆ ಆಸ್ಪತ್ರೆಗೆ ದಾಖಲಾಗಲಿದ್ದಾರೆ.
ಅವರ ಕಾಲಿಗೆ ಅಳವಡಿಸಲಾಗಿರುವ ಇಂಪ್ಲಾಂಟ್ ತೆಗೆಯಲು ವೈದ್ಯರು ಶುಕ್ರವಾರ ಅವರಿಗೆ ಶಸ್ತ್ರಚಿಕಿತ್ಸೆ ನೆರವೇರಿಸಲಿದ್ದಾರೆ. 2016 ರ ರಸ್ತೆ ಅಪಘಾತದಲ್ಲಿ ಕಮಲ ಹಾಸನ್ ಅವರು ಕಾಲು ಮುರಿಕೊಂಡಿದ್ದಾಗ ವೈದ್ಯರು ಇಂಪ್ಲಾಂಟ್ ಅಳವಡಿಸಿದ್ದರು. ಈಗ ಅದನ್ನು ತೆಗೆದುಹಾಕಬೇಕಾಗಿದೆ. ವೈದ್ಯರ ಸಲಹೆಯ ಮೇರೆಗೆ ಕಮಲ ಹಾಸನ್ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂ ಎನ್ ಎಂ ಪಕ್ಷದ ಉಪಾಧ್ಯಕ್ಷ ಡಾ.ಆರ್ ಮಹೇಂದ್ರನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ವೈದ್ಯರ ಸಲಹೆ ಮೇರೆಗೆ ಕಮಲ್ ಹಾಸನ್ ನಾಳೆ (ನವೆಂಬರ್ 22) ಆಸ್ಪತ್ರೆಗೆ ದಾಖಲಾಗಲಿದ್ದು, ಚೇತರಿಸಿಕೊಳ್ಳಲು ಸ್ವಲ್ಪ ದಿನಗಳು ಅಗತ್ಯವಾಗಲಿದೆ ಎಂದು ಮಹೇಂದ್ರನ್ ಹೇಳಿದ್ದಾರೆ.