ಮಾಂಜರಿ: ನೂತನ ರೈಲ್ವೆ ಸಚಿವರಾಗಿ ಆಯ್ಕೆಯಾಗಿರುವ ಸುರೇಶ್ ಅಂಗಡಿಯವರಿಗೆ ಸನ್ಮಾನ

ಲೋಕದರ್ಶನ ವರದಿ

ಮಾಂಜರಿ 24:  ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂತ್ರಿಮಂಡಲದಲ್ಲಿ ನೂತನವಾಗಿ  ಆಯ್ಕೆಯಾಗಿರುವ  ಕೇಂದ್ರದ ರೈಲ್ವೆ ಸಚಿವರಾದ ಸುರೇಶ್ ಅಂಗಡಿ ಹಾಗೂ ಚಿಕ್ಕೋಡಿ ಲೋಕಸಭೆಯ ಮತಕ್ಷೆ?ತ್ರದಿಂದ  ಸಂಸದರಾಗಿ ಆಯ್ಕೆಯಾಗಿರುವ ಅನ್ನ ಸಾಬ್ ಜೊಲ್ಲೆ ಇವರನ್ನು ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾಖರ್ಾನೆ ಒತ್ತೆಯಿಂದ ರಾಜ್ಯಸಭಾ ಸದಸ್ಯ ಡಾ ಪ್ರಭಾಕರ ಕೋರೆ ಇವರ ಅಧ್ಯಕ್ಷತೆಯಲ್ಲಿ ಅಂಕಲಿ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನಿಸಲಾಯಿತು.  

    ನೂತನವಾಗಿ ಆಯ್ಕೆಯಾಗಿರುವ ರೈಲ್ವೆ ಸಚಿವರಾದ ಸುರೇಶ್ ಅಂಗಡಿ ಹಾಗೂ ಸಂಸದ ಅನ್ನ ಸಾಬ್ ಜಿಲ್ಲೆ ಇವರನ್ನು  ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾಖರ್ಾನೆಯ ಉಪಾಧ್ಯಕ್ಷರಾದ ಸಂದೀಪ್ ಪಾಟೀಲ್ ನಿದರ್ೆಶಕರಾದ ವಿಧಾನ ಪರಿಷತ್ತಿನ ಸದಸ್ಯರಾದ ಮಹಾಂತೇಶ್ ಕವಟಿಗಿಮಠ  ಭರತೇಶ ಬನವಣೆ ಅಜೀತ ರಾವ್ ದೇಸಾಯಿ ಮಲ್ಲಿಕಾಜರ್ುನ ಕೋರೆ ತಾತ್ಯಾಸಾಹೇಬ ಕಾಟೆ ಮಲ್ಲಪ್ಪ ಮೈಶಾಳೆ ರಾಮಚಂದ್ರ ನಿಶಾನದಾರ ಮಹಾವೀರ ಮಿಜರ್ಿ ಅಣ್ಣಾಸಾಹೇಬ ಟಿಪಾಟೀಲ ನಂದಕುಮಾರ ನಾಶಿಪುಡಿ ಇವರು ಸನ್ಮಾನಿಸಿದರು.  

ರಾಜ್ಯದಲ್ಲಿರುವ ರೈಲ್ವೆ ಖಾತೆಯ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ಜತೆಗೆ ಜಿಲ್ಲೆಯ ಅಭಿವೃದ್ಧಿಗಾಗಿ ಹಾಗೂ ಸಕ್ಕರೆ ಉದ್ದಿಮೆಗಾಗಿ ಕಾಯಕಲ್ಪ ನೀಡುವ ಸಲುವಾಗಿ ಕೇಂದ್ರದಿಂದ ಬರುವ ಎಲ್ಲ ಯೋಜನೆಗಳನ್ನು ಸದುಪಯೋಗ ಮಾಡಲಿಕ್ಕೆ ನಾನು ಪ್ರಯತ್ನಿಸುವುದಾಗಿ ರೈಲ್ವೆ ಸಚಿವರಾಗಿ ಸುರೇಶ್ ಅಂಗಡಿ ಸನ್ಮಾನ ಸ್ವೀಕರಿಸಿದ ನಂತರ ಹೇಳಿದರು ಈ ವೇಳೆ ಚಿಕ್ಕೋಡಿ ಸಂಸದರಾದ ಅಣ್ಣಾ ಸಾಹೇಬ್  ಜೊಲ್ಲೆ ಮಾತನಾಡಿ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ ಬರುವ ಎಲ್ಲ ಹಳ್ಳಿಗಳಲ್ಲಿ ನನಗಿದೆ ಬಿದ್ದಿರುವ ಸಮಸ್ಯೆಗಳನ್ನು ಬಗೆಹರಿಸಲಿಕ್ಕೆ ತಮ್ಮ ಸಹಕಾರ  ಅಗತ್ಯವಿದ್ದು ಮುಂಬರುವ ದಿನಮಾನಗಳಲ್ಲಿ ಕೇಂದ್ರದ ಎಲ್ಲ ಯೋಜನೆಗಳನ್ನು ಸಾಮಾನ್ಯ ಜನರಿಗೆ ಮುಟ್ಟಿಸುವ ಕೆಲಸ ಮಾಡಲಾಗುವುದೆಂದು ಅವರು ಹೇಳಿದರು. ಈ ಸನ್ಮಾನ ಸಮಾರಂಭಕ್ಕೆ ದೂರದಿಂದ ಕೃಷ್ಣಾ ಸಹಕಾರಿ ಸಕ್ಕರೆ ಕಾಖರ್ಾನೆಯ ಸದಸ್ಯರು ಹಾಗೂ ಕಾಮರ್ಿಕ ವರ್ಗ ಹಾಜರಿದ್ದರು