ಲೋಕದರ್ಶನ ವರದಿ
ಕುಮಟಾ : ಶಬರಿಮಲೆಗೆ ಮಹಿಳೆಯರನ್ನು ಪ್ರವೇಶಿಸಲು ಸುಪ್ರರ್ಿಂ ಕೋರ್ಟ ಅನುಮತಿಯನ್ನು ನೀಡಿದರಿಂದ ಶಬರಿ ಮಲೆಯಲ್ಲಿ ತಲತಲಾಂತರದಿಂದ ನಡೆದು ಬಂದ ಕಟ್ಟುಪಾಡು, ಧಾಮರ್ಿಕ ಭಾವನೆಗೆ ಧಕ್ಕೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ನವೆಂಬರ್ 12 ರಂದು ಪ್ರತಿಭಟನಾ ಮೆರವಣಿಗೆ ನಡೆಸಿ ಸಹಾಯಕ ಆಯುಕ್ತ ಮೂಲಕ ರಾಷ್ಟಪತಿಗಳಿಗೆ ಈ ತೀರ್ಪನ್ನು ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿ ಮನವಿಯನ್ನು ಸಲ್ಲಿಸಲಾಗುವುದು ಎಂದು ನ್ಯಾಯವಾಧಿ ಆರ್ ಜಿ ನಾಯ್ಕ ಹೇಳಿದರು.
ಅವರು ರವಿವಾರ ಪಟ್ಟಣದ ಮಹಾಸತಿ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಶಬರಿಮಲೆಯ ಅಯಪ್ಪ ದೇವಸ್ಥಾನ ಪವಿತ್ರ ಸ್ಥಳವಾಗಿದ್ದು, ಇಲ್ಲಿ ಪುರಾತನ ಕಾಲದಿಂದ ಅನೇಕ ಕಟ್ಟುಪಾಡುಗಳನ್ನು ಹೊಂದಿದೆ. ಈ ದೇವಾಲಯಕ್ಕೆ ಹೊಗುವರು 45 ದಿನಗಳ ಕಾಲ ಕಠಿಣ ವೃತವನ್ನು ಮಾಡಿ ಪ್ರವೇಶವನ್ನು ಮಾಡಬೇಕು. ಅಲ್ಲದೇ ಬೃಹ್ಮಚರ್ಯ ಪಾಲನೆ, ತಣ್ಣಿರಿಂದ ಸಾನ್ನ ಮಾಡುವುದು ಸೇರಿದಂತೆ ಅತ್ಯಂತ ಕಠಿಣ ವೃತವನ್ನು ಆಚರಣೆ ಮಾಡಿ ಶಬರಿಮಲೆಗೆ ಪ್ರವೇಶವನ್ನು ಮಾಡುತ್ತಾರೆ. ಸುಪ್ರರ್ಿ ಕೋರ್ಟ ತಿಪರ್ಿನ ಸಮಯದಲ್ಲಿ ಶಬರಿ ಮಲೆಯ ಪರವಾಗಿ ವಾದ ಮಾಡುವಂತಹ ವಕೀಲರು ದೇವಸ್ಥಾನದ ಆಚಾರ ವಿಚಾರ ಪರಂಪರೆಗಳ ಬಗ್ಗೆ ಪೂರಕ ದಾಖಲೆಯನ್ನು ನೀಡಿದ್ದಾರೋ ಅಥವಾ ಇಲ್ಲವೋ ಎನ್ನುವ ಸಂಶಯಕ್ಕೆ ಕಾರಣವಾಗುತ್ತದೆ. ನಮಗೆ ಮಹಿಳೆಯರ ಬಗ್ಗೆ ಸಾಕಷ್ಟು ಗೌರವ ಇದೆ. ಆದರೆ, ಅವರು ಸನಾತನ ಕಾಲದಿಂದ ನಡೆದು ಬಂದ ಕಟ್ಟುಪಾಡುಗಳಿರುವ ದೇವಾಲಯಕ್ಕೆ ಮಹಿಳೆಯರು ಪ್ರವೇಶ ಮಾಡಬಾರದು. ಹಾಗಾಗಿ ನ 12 ರಂದು ಮಹಾಸತಿ ದೇವಸ್ಥಾನದಿಂದ ಸಹಾಯಕ ಆಯುಕ್ತರ ಕಛೇರಿಯವರೆಗೆ ಮೆರವಣಿಗೆಯನ್ನು ಹಮ್ಮಿಕೊಂಡಿದ್ದು, ಈ ಮೆರವಣಿಗೆಯಲ್ಲಿ ಅಯಪ್ಪ ಸ್ವಾಮಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ವಿನಂತಿಸಿದರು.
ಸಾಮಾಜಿಕ ಹೋರಾಟಗಾರ ಸೂರಜ್ ನಾಯ್ಕ ಸೋನಿ ಮಾತನಾಡಿ, ನಮ್ಮ ಸಂಸ್ಕ್ರತಿ, ಸಂಪ್ರದಾಯ, ಆಚಾರ ವಿಚಾರಗಳ ಬಗ್ಗೆ ನ್ಯಾಯಾಲಯ ಯಾವ ಯಾವ ಸಂದರ್ಭದಲ್ಲಿ ಮದ್ಯಪ್ರವೇಶ ಮಾಡುತ್ತದೆ ಎಂದು ತಿಳಿಯುತ್ತಿಲ್ಲ. ಈ ತಿಪರ್ಿನಿಂದ ಹಿಂದೂಗಳ ದಾಮರ್ೀಕ ಭಾವನೆಗೆ ದಕ್ಕೆಯಾಗಿದೆ. ನಮ್ಮ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ಇನ್ನು ಕಣ್ಣುಮುಚ್ಚಿಕುಳಿತುಕೊಂಡಿದೆ. ಹೀಗಿರುವಾಗ ಜನಾಂದೋಲನವಾಗಬೇಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಂದ್ರು ನಾಯ್ಕ ಅಳ್ವೆಕೋಡಿ, ಕುಮಾರಸ್ವಾಮಿ ಹೆರವಟ್ಟಾ, ಮದೇವ ಸ್ವಾಮಿ, ಸತ್ಯನಾಯ್ಕ ಹೆಗಡೆ, ಗಜು ನಾಯ್ಕ, ಕುಮಾರ ಸ್ವಾಮಿ, ಲಕ್ಷ್ಮಣ ನಾಯ್ಕ ಗುಡೆಅಂಗಡಿ, ಅಶೋಕ ನಾಯ್ಕ ಬಗ್ಗೋಣ, ನಾರಾಯಣ ಹರಿಕಂತ್ರ ಹಳಕಾರ, ಬಾಳಾ ಮಡಿವಾಳ, ಜಿ ಪಿ ನಾಯ್ಕ, ನವೀನ ನಾಯ್ಕ, ಉಪಸ್ಥಿತರಿದ್ದರು.