ಮೂಡಲಗಿ 24: ಸಮೀಪದ ಸುಣಧೋಳಿ ಗ್ರಾಮದ ಪವಾಡ ಪುರುಷ ಜಡಿಸಿದ್ದೇಶ್ವರ ಜಾತ್ರೆಯು ಪೀಠಾಧಿಪತಿಗಳಾದ ಶಿವಾನಂದ ಸ್ವಾಮಿಜಿಯವರ ಸಾನಿಧ್ಯದಲ್ಲಿ ಜನಸಾಗರ ಮಧ್ಯ ಮಂಗಳವಾರ ಸಂಭ್ರಮ ಸಡಗರದಿಂದ ಜರುಗಿತು.
ಜಾತ್ರೆಯ ಅಂಗವಾಗಿ ಬೆಳಿಗ್ಗೆ ಜಡಿಸಿದ್ದೇಶ್ವರ ಸನ್ನಿಧಿಗೆ ವಿಶೇಷ ಪೂಜೆ, ಅಭಿಷೇಕಗಳು ಜರುಗಿದವು.
ಸಂಜೆ ಜಡಿಸಿದ್ದೇಶ್ವರ ಹಗ್ಗವಿಲ್ಲದ ರಥೋತ್ಸವವೂ ಜನಸ್ತೋಮದ ನಡುವೆ ಪ್ರತಿವರ್ಷದಂತೆ ದೇವಸ್ಥಾನದಿಂದ ಜಡಿಸಿದ್ದೇಶ್ವರರ ಮೂತರ್ಿಯನ್ನು ತಂದು ರಥದಲ್ಲಿ ಪ್ರತಿಷ್ಠಾಪಿಸಿದರು. ಸುಣಧೋಳಿ ಸೇರಿದಂತೆ ಸುತ್ತಮುತ್ತಲಿನ ಹಲವಾರು ಗ್ರಾಮಗಳಿಂದ ಆಗಮಿಸಿದ್ದ ವಿವಿಧ ಗ್ರಾಮಗಳ ದೇವರುಗಳ ಪಲ್ಲಕ್ಕಿಗಳು ಸೇರುವುದರೊಂದಿಗೆ ವಾಲಗ, ಶಹನಾಯಿ, ತಮಟೆ, ಡೊಳ್ಳು ವಿವಿಧ ಭಾರತೀಯ ಸಂಸ್ಕೃತಿಯ ಸಂಗೀತದ ನಾದಗಳ ಮಧ್ಯ ಸಾವಿರಾರು ಭಕ್ತರ ಮುಗಿಲು ಮುಟ್ಟುವ 'ಹರಹರ ಮಹಾದೇವ' ಎಂಬ ಘೋಷಣೆ ಕೇಳುತ್ತಿದಂತೆ ಪವಾಡ ಪುರುಷ ಜಡಿಸಿದ್ದೇಶ್ವರ ತೇರು ಹಗ್ಗವಿಲ್ಲದೇ ಚಲಿಸಿ ಮರಳಿ ತನ್ನ ಸ್ಥಾನಕ್ಕೆ ಬಂದು ನಿಂತಿತು.
ರಥದ ಮೇಲೆ ಭಕ್ತರು ಇಷ್ಟಾನುಸಾರ ತೆಂಗಿನಕಾಯಿ, ಬಾಳೆಹಣ್ಣು, ಖಾರೀಕು, ಬತ್ತಾಸು, ಹಾಗೂ ಹೂವನ್ನು ಸಮಪರ್ಿಸಿ ಕೃತಾರ್ತರಾದರು. ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿದ ಹಾಗೂ ಹೊರ ರಾಜ್ಯದಿಂದ ಆಗಮಿಸಿದ ಭಕ್ತರು ಇದಕ್ಕೆ ಸಾಕ್ಷಿಯಾದರು ನಂತರ ಮಹಾಪ್ರಸಾದ ನಡೆಯಿತು.