ಗೋಮಾತೆಗೆ ಸೀಮಂತ ಕಾರ್ಯಕ್ರಮ

ಲೋಕದರ್ಶನ ವರದಿ

ಗೋಕಾಕ 24: ಸ್ತ್ರೀ-ಪುರುಷ ಸೃಷ್ಠಿಯ ಅಪರೂಪದ ಕೊಡುಗೆಗಳು. ಭೂಮಿಯ ಮೇಲೆ ಆಗುತ್ತಿರುವ ಪ್ರತಿಯೊಂದು ಚಲನವಲನಗಳಿಗೆ ಮತ್ತು ಜೀವ ಸಂಕುಲದ ವ್ಯವಸ್ಥೆಗೆ ಮೂಲ ಕಾರಣ. ಅದೇ ಕಾರಣದಿಂದ ಪುರುಷ ಪ್ರಾಬಲ್ಯತೆಯ ಸಾಮಾಜಿಕ ವ್ಯವಸ್ಥೆ ನಿಮರ್ಾಣವಾಗಿದ್ದರೂ ಸಹ ಸೃಷ್ಠಿಯ ಮುನ್ನಡೆಯ ಮೂಲ ಶಕ್ತಿ ಹೆಣ್ಣನ್ನು ಪೂಜ್ಯನೀಯ ಭಾವನೆಯಿಂದ ಕಾಣುವದು ಭಾರತೀಯ ಸಂಸ್ಕೃತಿಯ ಶ್ರೇಷ್ಠತೆಯಾಗಿದೆ. 

ಹೆಣ್ಣನ್ನು ದೈವಿ ಸ್ವರೂಪದಿಂದ ಕಾಣುವ ಭಾರತೀಯರು ಹೆಣ್ಣುಮಕ್ಕಳು ಗರ್ಭವತಿಯಾದಾಗ ಗೌರವ ಮತ್ತು ಪೂಜ್ಯನೀಯ ಭಾವನೆಯಿಂದ ಅವಳನ್ನು ಸೀಮಂತ ಕಾರ್ಯದ ಮೂಲಕ ವಿವಿಧ ಭಕ್ಷ ಬೋಜನ ವ್ಯವಸ್ಥೆಯೊಂದಿಗೆ ಗೌರವಿಸುವ ಸತ್ಸಂಪ್ರದಾಯವನ್ನು ಕಾಣುತ್ತೇವೆ. ಆದರೆ ಭಾರತೀಯರು ತಾಯಿಯ ಸ್ವರೂಪದಲ್ಲಿ ಕಾಣುವ ಹೆಣ್ಣುಮಕ್ಕಳನ್ನು ಗೌರವಿಸದಂತೆಯೇ ಗೋ ಮಾತೆಯಲ್ಲಿಯೂ ಸಹ ದೇವತ್ವವನ್ನು ಕಾಣುತ್ತಾರೆ. ಅದೇ ಕಾರಣದಿಂದ ಗೋ ಮಾತೆ ಪ್ರಥಮ ಭಾರೀಗೆ ಗರ್ಭದರಿಸಿದಾಗ ಸೀಮಂತ ಕಾರ್ಯಕ್ರಮ ಮಾಡುವ ಪರಂಪರೆಯ ಉದಾಹರಣೆಗಳನ್ನು ಅಲ್ಲಲ್ಲಿ ಕಾಣುತ್ತೇವೆ. ಅಂತಹದೇ ಅಪರೂಪದ ಪ್ರಸಂಗ ನಗರದ 'ಜ್ಞಾನ ಮಂದಿರ' ಆಧ್ಯಾತ್ಮ ಕೇಂದ್ರದಲ್ಲಿ ನಡೆಯಿತು. 

'ಜ್ಞಾನ ಮಂದಿರ' ಕ್ಕೆ ಕಾಣಿಕೆಯಾಗಿ ನೀಡಿದ ಗೋ ಮಾತೆ ಪ್ರಥಮ ಭಾರಿಗೆ ಗರ್ಭದರಿಸಿರುವ ವಿಷಯ ತಿಳಿದ 'ಜ್ಞಾನ ಮಂದಿರ' ಆಧ್ಯಾತ್ಮ ಕೇಂದ್ರದ ಧರ್ಮದಶರ್ಿ ಸುವಣರ್ಾ ಹೊಸಮಠ ರವರು ಗೋ ಮಾತೆಗೆ ವಿವಿಧ ಭಕ್ಷ ಬೋಜನಗಳನ್ನು ತಯಾರಿಸಿ ಮಹಿಳೆಯರೆಲ್ಲ ಕೂಡಿ ಗೋ ಮಾತೆಯನ್ನು ಹೊಸ ಬಟ್ಟೆಗಳೊಂದಿಗೆ ಸಿಂಗರಿಸಿ, ಹೂವಿನ ದಂಡಿ ಕಟ್ಟಿ ಆರತಿ ಬೆಳಗಿ ಸೀಮಂತ ಕಾರ್ಯಕ್ರಮದ ಹಾಡುಗಳೊಂದಿಗೆ ಭಕ್ತಿ ಭಾವನೆಯಿಂದ ಸೀಮಂತ ಕಾರ್ಯ ನೆರವೆರಿಸಿದರು. ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕತರ್ೆ ಶ್ರೀದೇವಿ ತಡಕೋಡ ತಾವು ಮನೆಯಿಂದ ತಂದ ಭಕ್ಷ ಬೋಜನಗಳನ್ನು ಗೋಮಾತೆಗೆ ಸಮಪರ್ಿಸಿ ಆರತಿ ಬೆಳಗಿದರು. 

ಈ ಸಂದರ್ಭದಲ್ಲಿ ತುಕಾರಾಮ ಮಹಾರಾಜರು ಗೊರಗುದ್ದಿ, ದಾನಮ್ಮ ಹೊಸಮಠ, ಸುಶೀಲಾ ಮರಲಿಂಗಣ್ಣವರ, ಪ್ರೇಮಲತಾ ಸಾವಳಗಿಮಠ, ಶೋಭಾ ಉಪ್ಪಿನ, ಶಕುಂತಲಾ ಬಿದರಿ, ಶ್ರೀದೇವಿ ಕರಮುಶಿ, ರಾಜಶ್ರೀ ಹೊಸಮನಿ, ಲಕ್ಷ್ಮೀ ನೇಸರಗಿ ಮುಂತಾದವರು ಉಪಸ್ಥಿತರಿದ್ದರು.