ಗ್ರಾಮಗಳಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮ

ಲೋಕದರ್ಶನ ವರದಿ

 ಗದಗ 12: ರಾಜ್ಯ ಸಕರ್ಾರದ ನಿದರ್ೇಶನದಂತೆ ಪ್ರತಿ ತಿಂಗಳು ಒಂದು ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿಯ ಸಮಸ್ಯೆ ಗುರುತಿಸಿ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ನೀಡುವ ಉದ್ದೇಶದೊಂದಿಗೆ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ನುಡಿದರು.

                ಕಡಕೋಳ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ (ದಿ.11) ರಂದು ಗ್ರಾಮಸ್ಥರಿಂದ ಕುಂದುಕೊರತೆ, ಅಹವಾಲುಗಳನ್ನು ಸ್ವೀಕರಿಸಿ ಅವರು ಮಾತನಾಡಿದರು. ಪ್ರತಿ ಹಳ್ಳಿಗಳಲ್ಲೂ ಬೇರೆ ಸಮಸ್ಯೆಗಳಿದ್ದು ಅವುಗಳ ಕುರಿತು ಯೋಜನೆ ರೂಪಿಸಿ  ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಜರುಗಿಸಲಾಗುವುದು. ಕಡಕೋಳ ಗ್ರಾಮದಲ್ಲಿ ನೀರಿನ ಸಮಸ್ಯೆಯಿದ್ದು ಕಾರಣದಿಂದಾಗಿ ಗ್ರಾಮ ವಾಸ್ತವ್ಯಕ್ಕಾಗಿ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು. ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಒಟ್ಟು 47 ಅಜರ್ಿಗಳನ್ನು ಸ್ವೀಕರಿಸಿದ್ದು ಇವುಗಳಲ್ಲಿ ನೀರು ಪೂರೈಕೆ ಕುರಿತು ಹೆಚ್ಚಿನ ಅಜರ್ಿಗಳನ್ನು ಸ್ವೀಕರಿಸಲಾಗಿದ್ದು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ 217 ಗ್ರಾಮಗಳಿಗೆ ನೀರು ಸರಬರಾಜು ಮಾಡುವ ಯೋಜನೆಯಡಿ ನೀರು ಸರಬರಾಜು ಮಾಡಲಾಗುತ್ತಿದೆ ಯೋಜನೆಯಡಿ ಸಣ್ಣಪುಟ್ಟ ಸಮಸ್ಯೆಗಳು ತಲೆದೊರಿದರು ಅವುಗಳನ್ನು ಶೀಘ್ರವೆ ಪರಿಹರಿಸಲಾಗುವುದು. ಒಟ್ಟಾರೆಯಾಗಿ ಕಡಕೋಳ ಗ್ರಾಮಕ್ಕೆ ಎರಡರಿಂದ ನಾಲ್ಕು ದಿನಕ್ಕೊಮ್ಮೆಯಾದರು ನೀರು ಪೂರೈಸಲು ಕ್ರಮ ಜರುಗಿಸಲಾಗುವುದು ಎಂದ ಅವರು ತುಂಗಭದ್ರೆ ನದಿ ಇರುವವರೆಗೂ ಗ್ರಾಮಕ್ಕೆ ನೀರಿನ ತೊಂದರೆಯಾಗದು ಎಂದರುಗ್ರಾಮಕ್ಕೆ ಅತೀ ಅವಶ್ಯಕವಾದಂತಹ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅತೀ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಹಾಗೂ ಇದಕ್ಕಾಗಿ ಸರಕಾರಕ್ಕೆ ಅಗತ್ಯದ ಪ್ರಸ್ತಾವನೆಯನ್ನು ಶೀಘ್ರದಲ್ಲೇ ಸಲ್ಲಿಸಲಾಗುವುದು ಜೊತೆಗೆ ಗ್ರಂಥಾಲಯವನ್ನು ಪ್ರಾರಂಭಿಸಲಾಗುವದು ಎಂದರು. ಮಾಸಾಶನ ಹಾಗೂ ಪಡಿತರ ಚೀಟಿ ಕುರಿತು ಸಲ್ಲಿಸಲಾದ ಅಜರ್ಿಗಳ ಕುರಿತಂತೆ ಶೀಘ್ರವೇ ಪರಿಹಾರ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೂಚಿಸಿದರು.

                ಸಭೆಯಲ್ಲಿ ಕೆರೆಗಳಿಗೆ ನೀರು ತುಂಬಿಸುವ, ಸಿ.ಸಿ. ರಸ್ತೆ, ಚರಂಡಿ ನಿಮರ್ಾಣ, ಬೆಳೆ ವಿಮೆ, ಮಾಸಾಶನ, ಆಶ್ರಯ ಮನೆ ನಿಮರ್ಾಣ, ಅರಣ್ಯ ಹಕ್ಕು ಪತ್ರ ವಿತರಣೆ, ನರೇಗಾ ಯೋಜನೆಯಡಿ ನಿರಂತರ ಕೆಲಸ ಹಾಗೂ ಅಕ್ರಮ ಮದ್ಯ ಮಾರಾಟ ನಿಷೇದಿಸುವ ಕುರಿತು ಅಹವಾಲುಗಳನ್ನು ಸ್ವೀಕರಿಸಲಾಯಿತು.

                ಶಾಸಕರಾದ ರಾಮಣ್ಣ ಲಮಾಣಿ, ಜಿ.ಪಂ. ಸದಸ್ಯೆ ರೇಖಾ ಅಳವಂಡಿ, ತಾ.ಪಂ. ಸದಸ್ಯ ತಿಪ್ಪಣ್ಣ ಕೊಂಚಿಗೇರಿಗ್ರಾಮ ಪಂಚಾಯತ ಉಪಾಧ್ಯಕ್ಷೆ ಸೀತವ್ವ ಅಕ್ಕಿ, ಉಪವಿಭಾಗಾಧಿಕಾರಿ ಪಿ.ಎಸ್.ಮಂಜುನಾಥಕೃಷಿ ಇಲಾಖೆ ಜಂಟಿ ನಿದರ್ೇಶಕ ಸಿ.ಬಿ.ಬಾಲರೆಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ. ಎಸ್. ಹೊನಕೇರಿ, ಭೂ.ದಾಖಲೆಗಳ ಉಪನಿದರ್ೇಶಕ ರವಿಕುಮಾರ ಎನ್. ಸಮಾಜ ಕಲ್ಯಾಣ ಇಲಾಖೆ ಉಪನಿದರ್ೇಶಕ ಖಾಜಾ ಹುಸೇನ ಮುಧೋಳ, ಆಹಾರ ಇಲಾಖೆ ಉಪನಿದರ್ೇಶಕ ಅಶೋಕ ಕಲಘಟಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿದರ್ೇಶಕ ರಾಮಕೃಷ್ಣ ಪಡಗಣ್ಣವರ, ಶಿರಹಟ್ಟಿ ತಹಶೀಲ್ದಾರ . ಡಿ. ಅಮರವಾದಗಿ, ತಾ.ಪಂ. ಕಾರ್ಯನಿವಾಹಕ ಅಧಿಕಾರಿ ಆರ್. ವೈ. ಗುರಿಕಾರವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು, ಗುರು ಹಿರಿಯರು, ಕಡಕೋಳ ಸೇರಿದಂತೆ ಅದರ ವ್ಯಾಪ್ತಿಯ ವಿವಿಧ ಗ್ರಾಮಗಳಿಂದ ಆಗಮಿಸಿದ ಗ್ರಾಮಸ್ಥರು ಭಾಗವಹಿಸಿದ್ದರು