ಲೋಕದರ್ಶನ ವರದಿ
ಶಿಗ್ಗಾವಿ 26: ಪಕ್ಷದ ಕಾರ್ಯಕರ್ತರು ಮತ್ತು ಮತದಾರರು ಪಕ್ಷದ ಅಭ್ಯಥರ್ಿಯನ್ನು ಆಯ್ಕೆ ಮಾಡುವಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದು ಕ್ಷೇತ್ರದ ಜಿಲ್ಲಾ ಪಂಚಾಯತ, ತಾಲೂಕ ಪಂಚಾಯತ ಮತ್ತು ಪುರಸಭೆಗಳಲ್ಲಿ ಆಡಳಿತ ಹಿಡಿದರೂ ಶಾಸಕ ಅಭ್ಯಥರ್ಿಯನ್ನು ಆಯ್ಕೆ ಮಾಡುವಾಗ ಹಿನ್ನಡೆಯಾಗುತ್ತಿರುವುದು ಅಷ್ಟೇ ಸತ್ಯ. ಕಾರಣ ಸ್ಥಳೀಯವಾಗಿ ಮಾಜಿ ಶಾಸಕ ಸೈಯದ್ ಅಜ್ಜಂಪೀರ್ ಖಾದ್ರಿಯವರು ಕಾರ್ಯಕರ್ತರಾಗಿ ಹಗಲಿರುಳು ದುಡಿಯುವರಾಗಿದ್ದು ಕಳೆದ ಮೂರು ಭಾರಿಯು ಜಾತಿ ರಾಜಕಾರಣದಿಂದ ಸೋಲು ಕಂಡಿದ್ದು ಇರುತ್ತದೆ. ಪ್ರಸ್ತಕ ಕ್ಷೇತ್ರದಲ್ಲಿ ಮುಖಂಡರಿಲ್ಲದ ಪಕ್ಷವಾಗಿ ಪರಿವರ್ತನೆ ಆಗುತ್ತಿದ್ದು ಇದು ಕಾರ್ಯಕರ್ತರಲ್ಲಿ ಅತೀವ ನಿರಾಶೆಯನ್ನುಂಟು ಮಾಡಿದೆ. ಕಾರಣ ಪಕ್ಷ ಸಂಘಟನೆ ಮತ್ತು ಕಾರ್ಯಕರ್ತರು ಹಾಗೂ ಪಕ್ಷದ ಮತದಾರರ ಹಿತದೃಷ್ಟಿಯಿಂದ ನಮ್ಮ ಬೇಡಿಕೆ ಒಂದೇ ಸೈಯದ್ ಅಜ್ಜಂಪೀರ ಖಾದ್ರಿಯವರಿಗೆ ಮುಂಬರುವ ನಿಗಮ ಮಂಡಳಿಯಲ್ಲಿ ಸೂಕ್ತ ಸ್ಥಾನ ಮಾನ ನೀಡಬೇಕೆಂದು ಪಕ್ಷದ ಕಾರ್ಯಕರ್ತರಾದ ಮಂಜುನಾಥ ಮಣ್ಣಣ್ಣವರ ಹಾಗೂ ಎಸ,ಟಿ,ಘಟಕ ಕೆ.ಪಿ.ಸಿ.ಸಿ, ಸದಸ್ಯರಾದ ಪ್ರಕಾಶ ಹಾದಿಮನಿ, ಎ.ಪಿ.ಎಂ.ಸಿ. ಅಧ್ಯಕ್ಷರು ಪ್ರೇಮಾ ಪಾಟೀಲ, ಎ.ಪಿ.ಎಂ.ಸಿ ಉಪಾಧ್ಯಕ್ಷರು ಹನುಮರೆಡ್ಡಿ ನಡುವಿನಮನಿ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದು ಮನವಿ ಪತ್ರವನ್ನು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸತೀಶ ಜಾರಕಿಹೊಳಿಯವರಿಗೆ ನೀಡಿ ನಂತರ ಸನ್ಮಾನಿಸಿದರು.