ಬಿಸಿಲಿನ ತಾಪಕ್ಕೆ ಒಣಗುತ್ತಿರುವ ಕಬ್ಬಿನ ಗದ್ದೆಗಳು ಹೈರಾನಾದ ರೈತ ವರ್ಗ* ಕಪ್ಪಲಗುದ್ದಿ, ಹಂದಿಗುಂದ, ಮರಾಕುಡಿ ಸುಲ್ತಾನಪೂರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ

 ಮುಗಳಖೋಡ 04: ಸಮೀಪದ ಕಪ್ಪಲಗುದ್ದಿ ಗ್ರಾಮದಲ್ಲಿ ಬಿಸಲಿನ ತಾಪಕ್ಕೆ ಭೂಮಿಯಲ್ಲಿರುವ ಅಂತರ್ಜಲಮಟ್ಟ ಕಡಿಮೆಯಾದ ಹಿನ್ನೆಲೆಯಲ್ಲಿ ಬಿಸಲಿನ ತಾಪಕ್ಕೆ ರೈತರು ಬೆಳೆದ ಕಬ್ಬಿನ ಬೆಳೆ ಒಣಗುತ್ತಿವೆ. ಇದರಿಂದ ಹೈರಾನಾದ ರೈತ ವರ್ಗ ಸರಕಾರದಿಂದ ಸೂಕ್ತ ಪರಿಹಾರ ದೊರೆಯದೆ ಚಿಂತಾಕ್ರಾಂತರಾಗಿ ಕುಳಿತುಕೊಳ್ಳುವ ಪರಿಸ್ಥಿತಿ ನಿಮರ್ಾಣವಾಗಿದೆ. ಕಬ್ಬಿನ ತೋಟ ಸಂಪೂರ್ಣವಾಗಿ ಒಣಗಿ ಹೋಗಿದ್ದು, ಕೃಷಿ ಇಲಾಖೆ ಹಾಗೂ ಕಂದಾಯ ಯಾವೊಬ್ಬ ಅಧಿಕಾರಿಯು ಪರಿಶೀಲನೆಗಾಗಿ ಬಾರದಿರುವದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. 

ಸರಕಾರ ಸೂಕ್ತ ಪರಿಹಾರ ನೀಡಲಿ : ರಾಯಬಾಗ ತಾಲೂಕಿನ ಪೂರ್ವ ಹಳ್ಳಿಯಾದ ಕಪ್ಪಲಗುದ್ದಿ ಒಂದು ಕುಗ್ರಾಮ. ಇಲ್ಲಿ ಗ್ರಾಮ ಲೆಕ್ಕಾಧಿಕಾರಿ ತಮಗೆ ಮನಸ್ಸು ತಿಳಿದಾಗ ಬಂದು ಹೋಗುತ್ತಾರೆ. ಇಂತಹ ಬರಗಾಲದಂತಹ ಪರಿಸ್ಥಿತಿಯಲ್ಲಿ ಈ ಭಾಗದ ರೈತರು ಬೆಳೆದ ಬೆಳೆಗಳು ಸಂಪೂರ್ಣವಾಗಿ ಒಣಗುತ್ತಿವೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ದನ, ಕರು, ಜಾನುವಾರುಗಳಿಗೆ ಮೇವು, ನೀರು, ಸಮರ್ಪಕವಾಗಿ ಸರಕಾರ ಪೂರೈಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಕೈಗೊಳ್ಳುವದಾಗಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಟ್ಯಾಂಕರ ಮೂಲಕ ನೀರು ಕೊಡಿ :  ಕಪ್ಪಲಗುದ್ದಿ, ಹಂದಿಗುಂದ, ಮರಾಕುಡಿ ಹಾಗೂ ಸುಲ್ತಾನಪೂರ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಪ್ರತಿನಿತ್ಯ ಹಾಹಾಕಾರ ಹೆಚ್ಚಾಗಿದ್ದು, ಜನರು ದೂರದ ರೈತರ ಹೊಲಕ್ಕೆ ಹೋಗಿ ನೀರು ತರುವಂತಹ ಪರಿಸ್ಥಿತಿ ಬಂದೊದಗಿದೆ. ಕೆಲವು ಜಲಕುಂಭಗಳಿದ್ದರೂ ಅವುಗಳಿಗೆ ನೀರು ಬರುತ್ತಿಲ್ಲ. ಈ ಭಾಗದಲ್ಲಿ ಕುಡಿಯುವ ನೀರಿಗಾಗಿ ತೀವ್ರ ತೊಂದರೆ ಎದುರಾಗಿದೆ. ಹಂದಿಗುಂದದ ನವಗ್ರಾಮ ಸಿದ್ದಾರೂಡ ದೇವಸ್ಥಾನದ ಹತ್ತಿರ ಹನುಮಾನ ನಗರ ಕೀಳಿಕೇತರ ಮಡ್ಡಿ ಅಲ್ಲಿ 200 ಕ್ಕೂ ಹೇಚ್ಚು ಮನೇಗಳ ಕುಟುಂಬಗಳಿಗೆ ಕುಡಿಯುವ ನೀರಿನ ಸಮಸ್ಯ ಹೆಚ್ಚಾಗಿರುವುದುಸಮೀರವಾಡಿ ಸೋಮೈಯ್ಯಾ ಬಯೋರಿಫೈನರೀಜ್ ಸಕ್ಕರೆ ಕಾಖರ್ಾನೆಯ ಮಳ್ಳಿ ನೀರು ಕೊಳವೆ ಬಾವಿ ಹಾಗೂ ಬಾವಿಗಳಲ್ಲಿ ಸೇರುವುದರಿಂದ ಅನೇಕ ರೋಗ ರುಜೀನೆಗಳು ಗ್ರಾಮಸ್ಥರಿಗೆ ಬರುತ್ತಿವೆ. ಇದರಿಂದ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ನಾಲ್ಕು ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ಗ್ರಾಮಗಳಿಗೆ ನೀರು ಕೊಡಬೇಕೆಂದು ರಾಯಬಾಗ ತಹಶೀಲ್ದಾರರಿಗೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಹೇಳಿದರು. ಸರಕಾರದಿಂದ ಬಿಡುಗಡೆಯಾದ ಹಣ ಎಲ್ಲಿ ಹೋಗುತ್ತಿದೆ ಎಂಬುದು ಗ್ರಾಮಸ್ಥರಲ್ಲಿ ಚಚರ್ೆಗೆ ಗ್ರಾಸವಾಗಿದೆ. ಈ ಸಂದರ್ಭದಲ್ಲಿ ಗ್ರಾ.ಪಂ. ಮಾಜಿ ಸದಸ್ಯ ಹನಮಂತ ಮಂಟೂರ, ಪ್ರಭು ದಿವಾಕರ, ಬಾಳು ಐದಮನಿ, ಜ್ಞಾನೇಶ್ವರ ಪೂಜೇರಿ, ಬಾಲಚಂದ್ರ ಮೇತ್ರಿ, ಸಚೀನ ಕೌಜಲಗಿ, ಶಿವಪ್ಪ ದಡ್ಡಿಮನಿ, ನಿಂಗಪ್ಪ ಪಾಟೀಲ, ಮಹಾದೇವ ನಾಯಿಕ, ಶಾಂತಾ ಅಂಗಡಿ, ಸುಶಿಲಾ ನಾಯಿಕ, ಪಾರ್ವತಿ ನಾಯಿಕ, ಮುಂತಾದವರು ಇದ್ದರು.