ಕಾಗವಾಡ 07: ವಿದ್ಯಾಥರ್ಿಗಳು ಜೀವನದಲ್ಲಿ ಯಶ ಕಾಣಲು ಮನಸ್ಸಿನಲ್ಲಿ ಗುರಿಯಿಟ್ಟುಕೊಂಡು ನಿರಂತರವಾಗಿ ಅಧ್ಯಯನಯತ್ತ ಹೆಚ್ಚಿನ ಗಮನ ಸೆಳೆದರೆ ಯಶ ಕಟ್ಟಿಟ್ಟಿರುವ ಬುತ್ತಿ ಎಂದು ಕನರ್ಾಟಕ ರಾಜ್ಯ ಇಂಜೀನಿಯರ ಸಂಘದ ಉಪಾಧ್ಯಕ್ಷ ಅರುಣ ಯಲಗುದ್ರಿ ಉಗಾರದಲ್ಲಿ ಹೇಳಿದರು.
ಶುಕ್ರವಾರ ಸಂಜೆ ಉಗಾರದ ಪದ್ಮಾವತಿ ಶಿಕ್ಷಣ ಸಂಸ್ಥೆಯ ಜೆ.ಎಲ್.ಚೌಗಲೆ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಮತ್ತು ಪಾಸಗೌಡಾ ಪಾಟೀಲ ಪ್ರೌಢಶಾಲೆಯ 23ನೇ ವಾಷರ್ಿಕ ಸ್ನೇಹ ಸಮ್ಮೇಳನದ ನಿಮಿತ್ಯವಾಗಿ ಆಯೋಜಿಸಿದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅಭಿಯಂತರಾದ ಅರುಣ ಯಲಗುದ್ರಿ ಪಾಲ್ಗೊಂಡು ವಿದ್ಯಾಥರ್ಿಗಳಿಗೆ ಮಾರ್ಗದರ್ಶನ ಮಾಡಿದರು. 11,000 ಶಿಕ್ಷಣ ಸಂಸ್ಥೆಗೆ ದೇಣಿಗೆ ನೀಡಿದರು.
ಸಮಾರಂಭದ ಆಧ್ಯಕ್ಷತೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶೀತಲ ಪಾಟೀಲ ವಹಿಸಿದರು. ಅತಿಥಿಗಳಾಗಿ ಆದರ್ಶ ಶಿಕ್ಷಕ ಆನಂದ ಶಿಂದೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿ ರಾಜು ನಾಯಿಕ ಪಾಲ್ಗೊಂಡಿದ್ದರು.
ಎಸ್.ಎಸ್.ಎಲ್.ಸಿ 10 ವರ್ಷಗಳಿಂದ ಶತಪ್ರತಿಷತ ಫಲಿತಾಂಶ:
ಪಾಸಗೌಡಾ ಪಾಟೀಲ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾಥರ್ಿಗಳು ಕಳೇದ 10 ವರ್ಷಗಳಿಂದ ಶತಪ್ರತಿಷತ ಫಲಿತಾಂಶ ಪಡೆದು ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿ ವ್ಯಾಪ್ತಿಯಲ್ಲಿಯ ಇನ್ನೂಳಿದ ಸಂಸ್ಥೆಗಳಲ್ಲಿ ಮಾದರಿಯಾಗಿದೆ ಎಂದು ಶೀತಲ ಪಾಟೀಲ ಹೇಳಿದರು.
ಕಳೆದ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 100% ಫಲಿತಾಂಶ ದೊರೆತಿದ್ದು. ಇದರಲ್ಲಿ ಪ್ರಥಮ ಸ್ಥಾನ ಪಡೆದ ಶ್ರೇಯಾ ರಾಜೇಂದ್ರ ಕುಂಬಾರ(96.96), ದ್ವೀತಿಯ ಸೌಜನ್ಯ ಸಿದ್ಧಾರ್ಥ ರಡ್ರಟ್ಟಿ(91.20), ತೃತೀಯ ಓಂಕಾರ ಮಹಾದೇವ ಪಾಟೋಳೆ(90.88) ಅಂಕಗಳನ್ನು ಪಡೆದು ಶಾಲೆಗೆ ಕಿತರ್ಿ ತಂದಿದ್ದಾರೆ. ಇವರನ್ನು ಹಾಗೂ ನೂರಕ್ಕೆ ನೂರರಷ್ಟು ಅಂಕಗಳನ್ನು ಪಡೆದ ವಿದ್ಯಾಥರ್ಿಗಳಿಗೆ ಮತ್ತು ರಾಜ್ಯ ಮಟ್ಟದಲ್ಲಿ ಬಿಲ್ಲೆ ಎಸೆತ ಸ್ಪಧರ್ೆಯಲ್ಲಿ ಪಾಲ್ಗೊಂಡ ಅಂಕೀತ ಖಂಡೆರಾಯ ಈ ವಿದ್ಯಾಥರ್ಿಗಳನ್ನು ಅತಿಥಿಗಳಿಂದ ಬಹುಮಾನ ನೀಡಿ ಸನ್ಮಾನಿಸಿದರು.
ಸಂಸ್ಥೆಯ ಉಪಾಧ್ಯಕ್ಷ ಬಾಬು ವಸವಾಡೆ, ಕಾರ್ಯದಶರ್ಿ ರಾವಸಾಬ ಘಾಳಿಮಟ್ಟಿ, ನಿದರ್ೇಶಕರಾದ ಅಣ್ಣಾಸಾಹೇಬ ನಂದಗಾಂವೆ, ಪ್ರಮೋದ ಹೋಸುರೆ, ಮನೋಹರ ಚೌಗುಲೆ, ರಾಜೇಂದ್ರ ಚಿಂಚವಾಡೆ, ಶಾಂತಿನಾಥ ವಸವಾಡೆ, ಸುರೇಶ ಕುಸನಾಳೆ, ದೀಪಕ ಪಾಟೀಲ, ಅಪ್ಪಾಸಾಹೇಬ ಚೌಗುಲೆ, ಸೇರಿದಂತೆ ಅನೇಕರು ಇದ್ದರು. ಮುಖ್ಯಾಧ್ಯಾಪಕ ರಾವಸಾಹೇಬ ಹೊನಮಾನೆ ಸ್ವಾಗತಿಸಿ, ವಂದಿಸಿದರು.