ಲೋಕದರ್ಶನ ವರದಿ
ಮುಗಳಖೋಡ 15: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸುಕ್ಷೇತ್ರ ಮುಗಳಖೊಡ ಪಟ್ಟಣದ ಹಿರಿಯರು, ಪರಿಸರ ಪ್ರೇಮಿ, ಶಿಕ್ಷಣ ಪ್ರೇಮಿ, ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಾದ ಡಾ.ಸಿ.ಬಿ.ಕುಲಿಗೋಡ ಹಾಗೂ ವಿಜಯಾ ಅವರ ಸುಪುತ್ರನಾಗಿ 04-02-1974 ರಲ್ಲಿ ಜನಿಸಿದ ಡಾ.ಸಂತ್ತೋಷ ಕುಲಿಗೋಡ.
ಉತ್ತರ ಕರ್ನಾಟಕದಲ್ಲಿ ಅಭಿವೃದ್ಧಿ ಮಾಡುವುದೆಂದರೆ ಸವಾಲಿನ ಕೆಲಸ ಗ್ರಾಮೀಣ ಭಾಗದಲ್ಲಿ ತಮ್ಮ ವ್ಯಾಸಾಂಗ ಮಾಡಿ, ಸವಾಲುಗಳನ್ನೂ ತನ್ನ ಗುರಿಯನ್ನಾಗಿ ಪರಿವರ್ತಿಸಿಕೊಂಡು ಬೆಳಗಾವಿ, ಗೋಕಾಕ, ಅಥಣಿ, ಜಮಖಂಡಿ ಅಷ್ಟೇ ಅಲ್ಲದೆ ಮಹಾರಾಷ್ಟ್ರದ ಮಿರಜ, ಸಾಂಗಿಯಲ್ಲಿ ಕೂಡಾ ತಮ್ಮ ವೈದ್ಯಕೀಯ ವೃತ್ತಿಯನ್ನ ಬೆಳೆಸಿದ ಸರಳ ಸಜ್ಜನಿಕೆ ಸಾಕಾರ ಮೂರ್ತಿ ಡಾ.ಸಂತ್ತೋಷ ಕುಲಿಗೋಡ.
ಡಾ.ಸಂತ್ತೋಷ ಕುಲಿಗೋಡ ಅವರು ತಮ್ಮ ಪ್ರಾಥಮಿಕ ಶಿಕ್ಚಣವನ್ನು ರಾಯಬಾಗ, ಪ್ರೌಢ ಶಿಕ್ಷಣವನ್ನು ಬೆಳಗಾವಿ, ಪದವಿ-ಪೂರ್ವವನ್ನು ಜಮಖಂಡಿಯಲ್ಲಿ ಹಾಗೂ ಎಮ್ಬಿಬಿಎಸ್ ಪದವಿಯನ್ನು ಬಿಜಾಪೂರದಲ್ಲಿ ಮುಗಿಸಿ ನಂತರ ಮೆಡಿಕಲ್ ಆಫೀಸರ್ ಆಗಿ ನಸಲಾಪೂರದಲ್ಲಿ ಕೆಲಸ ಮಾಡುತ್ತಾ ಬೆಳಗಾವಿಯ ಕೆಎಲ್ಇ ಸಂಸ್ಥೆಯಲ್ಲಿ ಎರಡು ವರ್ಷಗಳ ಕಾಲ ರೇಡಿಯೋಲಾಜಿಸ್ಟ ಮುಗಿಸಿಕೊಂಡು ನಂತರ ಮಿರಜನ ಮಿಷನ್ ಹಾಸ್ಪಿಟಲನಲ್ಲಿ ಕೆಲಸ ಮಾಡುತ್ತಾ 2003-04 ರಲ್ಲಿ ಮಿರಜನಲ್ಲಿ ತಮ್ಮದೇ ಆದ ಸ್ವಂತ ಆದಿತ್ಯ ಡೈಯಾಗ್ನೋಸ್ಟಿಕ್ ಸೆಂಟರನ್ನು ಆರಂಭಿಸಿ ಕರ್ನಾಟಕ ಮಹಾರಾಷ್ಟ್ರ ಎರಡು ರಾಜ್ಯಗಳಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಗ್ರಾಮೀಣ ಪ್ರತಿಭೆಯೊಂದು ಹತ್ತು ಹಲವಾರು ಸವಾಲುಗಳನ್ನು ಸ್ವೀಕರಿಸಿ ಇಡೀ ವೈದ್ಯಕೀಯ ಲೋಕವನ್ನೆ ತನ್ನದಾಗಿಸಿಕೊಂಡಿದ್ದಾರೆ. ಇವರು ಗ್ರಾಮೀಣ ವೈದ್ಯರ ಹಾಗೂ ರೋಗಿಗಳ ಜೋತೆಗೆ ಉತ್ತಮ ಒಡನಾಟ, ಸಲಹೆ ಸಹಕಾರ, ನಯ-ವಿನಯದಿಂದ ಯಾವಾಗಲು ಹಸನ್ಮುಖಿಯಾಗಿ ಎಲ್ಲರನ್ನೂ ಉಪಚರಿಸುತ್ತಾರೆ.
ಕೌಟುಂಬಿಕ ಜೀವನ: ಡಾ.ಸಿ.ಬಿ.ಕುಲಿಗೋಡ ಅವರು ಮುಗಳಖೋಡದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿ ಅವರ ವೃತ್ತಿಯಲ್ಲಿ ತಮ್ಮ ಪುತ್ರನನ್ನು ವೈದ್ಯನಾಗಿ ಮಾಡುವ ಕನಸನ್ನು ನನಸಾಗಿಸಿ ಅವರ ಮಾರ್ಗದರ್ಶನ, ಸಲಹೆಯಂತೆ ಕರ್ನಾಟಕ ಮಹಾರಾಷ್ಟ್ರದಲ್ಲಿ ಖ್ಯಾತ ವೈದ್ಯರಾಗಿ ಬೆಳೆದು ನಿಂತ್ತಿದ್ದಾರೆ. 2001 ರಲ್ಲಿ ಸಂತ್ತೋಷ ಕುಲಿಗೋಡ ಅವರ ಬಾಳ ಸಂಗಾತಿಯಾಗಿ ಬಂದ ಶ್ರೀಮತಿ ಮಂಜುಳಾ ಅವರು ಇವರ ಯಶಸ್ಸಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.
ಇಂದು ರವಿವಾರ ದಿ 16ರಂದು ಬೆಳಗಾವಿ ನಗರದ ಪಾಶ್ರ್ವನಾಥ ಪ್ಲಾಜಾ ಕ್ಲಬ್ ರೋಡದ ಹರ್ಷಾ ಇಲೇಕ್ಟ್ರಾನಿಕ್ಸ್ ಹತ್ತಿರ ನೂತನವಾಗಿ ಆದಿತ್ಯ & ಎಕ್ಸಲ್ ಡೈಯಾಗ್ನೋಸ್ಟಿಕ್ ಸೆಂಟರ ಆರಂಭವಾಗುತ್ತಿದ್ದು, ಈ ಸಮಾರಂಭಕ್ಕೆ ಬೆಳಗಾವಿ ನಾಗನೂರ ರುದ್ರಾಕ್ಷಿಮಠದ ಪೂಜ್ಯ ಡಾ. ಅಲ್ಲಮಪ್ರಭು ಸ್ವಾಮಿಜಿ, ಗಣ್ಯರಾದ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳೆ, ಕೆ.ಎಲ್.ಇ ಸಂಸ್ಥೆ ಅಧ್ಯಕ್ಷ ಪ್ರಭಾಕರ ಕೋರೆ, ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಕೆಎಂಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳೆ, ಕರ್ನಾಟಕ ಮುಖ್ಯಸಚೇತಕ ಮಹಾಂತೇಶ ಕವಟಿಗಿಮಠ, ಜವಳಿ ಸಚಿವ ಶ್ರೀಮಂತ ಪಾಟೀಲ, ಮಾಜಿ ಸಚಿವ ಸತೀಶ ಜಾರಕಿಹೊಳೆ, ಎಂಪಿ ಸುರೇಶ ಅಂಗಡಿ, ಶಾಸಕ ಅನಿಲ ಬೆನಕೆ, ಅಥಣಿ ಶಾಸಕ ಮಹೇಶ ಕುಮಟಳ್ಳಿ, ಬೆಳಗಾವಿ ಕೆ.ಎಂ.ಎಫ್ ಅಧ್ಯಕ್ಷ ವಿವೇಕರಾವ ಪಾಟೀಲ, ಚಿಕ್ಕೋಡಿ ಎಂ.ಪಿ. ಅಣ್ಣಾಸಾಹೇಬ ಜೊಲ್ಲೆ, ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ, ಮಾಜಿ ಸಚಿವ ಉಮೇಶ ಕತ್ತಿ, ರಾಯಬಾಗ ವಸಂತರಾವ ಪಾಟೀಲ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪ್ರತಾಪರಾವ ಪಾಟೀಲ, ಜಿ.ಪಂ ಮಾಜಿ ಸದಸ್ಯ ಡಾ.ಸಿ.ಬಿ.ಕುಲಿಗೋಡ ಹಾಗೂ ಡಾ.ರಮೇಶ ಪಾಟೀಲ ಮುಂತಾದವರು ಆಗಮಿಸಲಿದ್ದಾರೆ.
ನೂತನವಾಗಿ ಆರಂಭವಾಗುತ್ತಿರುವ ಈ ಆದಿತ್ಯ & ಎಕ್ಸಲ್ ಡೈಯಾಗ್ನೋಸ್ಟಿಕ್ ಸೆಂಟರದಲ್ಲಿ ಡಾ. ಸಂತೋಷ ಕುಲಿಗೋಡ ಅವರೊಂದಿಗೆ ಡಾ.ಅಜಯ ಎಂ.ಕೆ., ಡಾ.ಸಂದೀಪ ಪಟ್ಟಣಶೆಟ್ಟಿ, ಡಾ.ಪ್ರವೀಣ ವಾಲಿ ಹಾಗೂ ಡಾ.ಶ್ರೀದೇವಿ ಬೋಬಾಟೆ ಇವರು ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಸಂಜಯ ಕುಲಿಗೋಡ ತಿಳಿಸಿದ್ದಾರೆ.