ಲೋಕದರ್ಶನ ವರದಿ
ಮೂಡಲಗಿ 02: ವಿದ್ಯಾಥರ್ಿಗಳು ಯಶಸ್ಸು ಗಳಿಸಬೇಕಾದರೆ ಸ್ನೇಹತತ್ವದಿಂದ, ಸಾಧಕತತ್ವದಿಂದ ಸಾದಕರಾಗಬಹುದು ಉತ್ತಮ ವ್ಯಕ್ತಿ ಅಧ್ಯಯನ ಶೀಲತೆ, ಕ್ರೀಯಾಶೀಲತೆ ಮೌಲ್ಯಗಳನ್ನು ದಾರ್ಶನಿಕ ವ್ಯಕ್ತಿಗಳನ್ನು ಅನುಕರಣೆ ಮಾಡುವುದರ ಮೂಲಕ ಬೆಳಸಿಕೊಳ್ಳಬಹುದು. ಇಂದಿನ ಯುವ ವಿದ್ಯಾಥರ್ಿಗಳು ಅಧ್ಯಯನಶೀಲ ವ್ಯಕ್ತಿತ್ವದ ಬದಲಾಗಿ ನಿಜವಾದ ಬದುಕನ್ನು ಕಟ್ಟಿಕೊಳ್ಳುವ ಹುಮ್ಮಸ್ಸಿನಲ್ಲಿ ಇರದೇ ಸಮಯ, ಹಣ, ವಯಸ್ಸು ಹಾಳುಮಾಡಿಕೊಳ್ಳುತ್ತಿದ್ದು ತಿದ್ದಿ ತಿಡಿ ಹೇಳುವ ಗುರುಗಳಿಗೆ ಗೌರವ ನೀಡುವ ಮನೋಭಾವನೆಗಳು ದೂರವಾಗುತ್ತಿದ್ದು. ಇಂತಹ ಸ್ಥಿತಿ ಮುಂದುವರೆದರೆ ವಿದ್ಯಾಥರ್ಿಯ ಬದುಕು ಹಾಳಾಗಿ ನೈಜ ಜೀವನದ ಸ್ವಾದವನ್ನು ಕಳಿದುಕೊಳ್ಳುವರು ಗುರುಭಕ್ತಿ ವ್ಯಕ್ತಿಗಳನ್ನು ಮೇದಾವಿಗಳನ್ನಾಗಿ ಪರಿವತರ್ಿಸುತ್ತದೆ ಎಂದು ಹಿಡಕಲ್ದ ವಸಂತರಾವ ಪಾಟೀಲ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಆರ್.ಟಿ.ಮಾಳಿ ಹೇಳಿದರು.
ಸ್ಥಳೀಯ ಆರ್.ಡಿ.ಸೊಸೈಟಿಯ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ವಾಷರ್ಿಕ ಸ್ನೇಹ ಸಮ್ಮೇಳನ ಮತ್ತು ಬೀಳ್ಕೂಡುವ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ವಿದ್ಯಾಥರ್ಿ ಜೀವನ ಸಮಾಜದಲ್ಲಿ ಉತ್ತಮ ಜೀವನ ನಿರ್ವಹಣೆಯ ಕೌಶಲ್ಯಗಳನ್ನು ಬೆಳಸುತ್ತದೆ ಎಂದರು.
ಮೂಡಲಗಿಯ ಪೋಲಿಸ್ ಠಾಣೆಯ ಪಿಎಸ್ಐ ಎಮ್.ಎನ್ ಸಿಂಧೂರ ಮಾತನಾಡಿ, ಮಕ್ಕಳ ಬದುಕನ್ನು ಉತ್ತಮ ಗೊಳಿಸಲು ತಂದೆ ತಾಯಿಗಳು ನಿರಂತರ ಪ್ರಯತ್ನಿಸುತ್ತಾರೆ ಇಂದಿನ ವಿದ್ಯಾಥರ್ಿಗಳು ಅವುಗಳ ಅರಿವು ಇಲ್ಲದೇ ತಮ್ಮ ಬದುಕು ನಿಷ್ಕ್ರೀಯ ಸ್ಥಿತಿಯಲ್ಲಿ ನಿಮರ್ಿಸಿಕೊಳ್ಳುವುದು ವಿಷಾದನೀಯ ಕಷ್ಟಪಟ್ಟು ವಿದ್ಯಾಥರ್ಿ ಜೀವನವನ್ನು ಸರಿಯಾಗಿ ಉಪಯೋಗಿಸಿಕೊಂಡು ನಮ್ಮ ರಾಷ್ಟ್ರ ಮತ್ತು ನಮ್ಮ ರಾಜ್ಯದಲ್ಲಿ ನಡೆಯುವ ಸ್ಪದರ್ಾತ್ಮಕ ಪರೀಕ್ಷೆಗಳಲ್ಲಿ ಪಾಸಾಗಿ ಯಾವುದೇ ಸರಕಾರಿ ಉದ್ಯೋಗ ಪಡೆದಾಗ ಇರುವ ಸಂತೋಷ ಅವೀಸ್ಮರಣಿಯ ಅಂತಹ ಚಟುವಟಿಕೆಯಲ್ಲಿ ಗುರುಗಳ ಮಾರ್ಗದರ್ಶನ ಪಡೆದು ಸಕಲ ವಿದ್ಯೆಯ ಸಾದಕ ಜೀವನ ರೂಪಿಸಿಕೊಳ್ಳುವುದು ಅವಶ್ಯವಿದೆ ಎಂದರು.
ಮೂಡಲಗಿಯ ಉತ್ತರ ಕನರ್ಾಟಕದ ಜಾನಪದ ಜಾಣ ಶಬ್ಬಿರ ಡಾಂಗೆ ಮಾತನಾಡಿ, ವಿದ್ಯಾಥರ್ಿಗಳು ಪ್ರೀತಿ ಪ್ರೇಮ ಎಂಬ ಆಸೆಗೆ ಬಿದ್ದು ತಂದೆ ತಾಯಿಗಳು ಮಕ್ಕಳ ಮೇಲೆ ಇಟ್ಟಿರುವ ನಂಬಿಕೆಯನ್ನು ಹಾಳು ಮಾಡಿ ತಮ್ಮ ಜೀವನವನ್ನು ಹಾಳುಮಾಡಿಕೊಳ್ಳುವುದು ಸಮಂಜಸವಲ್ಲ ಮುಂದೆ ಗುರಿ ಇರಬೇಕು ಹಿಂದೆ ಇಂತಹ ಶಿಕ್ಷಣ ಸಂಸ್ಥೆಗಳ ಸಹಕಾರ ಇದ್ದಾಗ ಸಮಾಜದಲ್ಲಿ ಉತ್ತಮ ನಾಗರಿಕ ಜೀವನ ರೂಪಿಸಿಕೊಳ್ಳಲು ಸಹಾಯವಾಗುತ್ತದೆ ಎಂದರು.
ರಬಕವಿಯ ಉಪನ್ಯಾಸಕ ಶ್ರೀಕಾಂತ ಗುರುರಾಜ ಕೆಂದೂಳಿ ಮಾತನಾಡಿ ನಮ್ಮ ಸಂಸ್ಕೃತಿ, ಸಂಪ್ರದಾಯ ಆಚಾರ ವಿಚಾರಗಳನ್ನು ಅರಿತು ನಡೆದರೆ ನಮ್ಮ ವ್ಯಕ್ತಿತ್ವ ಉನ್ನತ ಮಟ್ಟಕ್ಕೆ ಬರುವುದು ಜೀವನದ ಸೌಖ್ಯ ಜನಪದ ಸಾಹಿತ್ಯದಲ್ಲಿ ಇದೆ ಅದನ್ನು ರಸಭಾವಗಳಿಂದ ನಮ್ಮ ಸಮಾಜ ಸ್ವೀಕರಿಸುವುದು ಅವಶ್ಯವಿದೆ ವಿದ್ಯಾಥರ್ಿ ಜೀವನ ಉತ್ತಮ ನೈತಿಕ ಜೀವನ ಹೊಂದುವುದು ಅವಶ್ಯವಿದೆ ಎಂದರು. ಸಂಸ್ಥೆಯ ಅಧ್ಯಕ್ಷ ಸಂತೋಷ ಪಾಶರ್ಿ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿ ವಿದ್ಯಾಥರ್ಿಗಳಲ್ಲಿ ಸಾದಕರಾಗುವ ಛಲ ಇರಬೇಕು ಸಾಧನೆಗೆ ಗುರುಗಳು ಸ್ಪೂತರ್ಿಗಳಾಗಿರಬೇಕು ಅಂದಾಗ ಪ್ರತಿಯೊಬ್ಬ ಯಶಸ್ವಿ ನಾಗರಿಕನಾಗುತ್ತಾನೆ ಎಂದರು.
ಕಾರ್ಯಕ್ರಮದಲ್ಲಿ ವಾಯ್.ಬಿ.ಕಳ್ಳಿಗುದ್ದಿ, ಎಮ್.ಯು.ಮಾಯನ್ನವರ, ಎಸ್.ಆರ್.ಖಾನಟ್ಟಿ, ಸಿ.ಎಸ್.ಬಗನಾಳ, ರಮೇಶ ಪಾಟೀಲ, ಅನ್ವರ ನದಾಫ, ಎಸ್.ಕೆ.ಮುರಗೋಡ, ಮತ್ತಿತರರು ಹಾಜರಿದ್ದರು ಉಪನ್ಯಾಸಕ.ಜಿ.ಟಿ.ನರಗುಂದ ಲಕ್ಷ್ಮೀ ಹಂದಿಗುಂದ ನಿರೂಪಿಸಿದರು ಪ್ರಾಚಾರ್ಯ ಸಂಜೀವ ವಾಲಿ ಸ್ವಾಗತಿಸಿದರು.