ಉತ್ತಮ ಫಲಿತಾಂಶ ಪಡೆಯುವಲ್ಲಿ ಯಶಸ್ವಿಯಾಗಿ: ಹಂಚಿನಾಳ
ರನ್ನ ಬೆಳಗಲಿ 05: ಮುಧೋಳ ತಾಲೂಕ ಮಟ್ಟದ ಗಣಿತ ವಿಷಯ ಸಮೂಹವನ್ನು ಸರ್ಕಾರಿ ಪ್ರೌಢಶಾಲೆ ಮಿರ್ಜಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಹತ್ತನೇ ತರಗತಿಯ ವಿದ್ಯಾರ್ಥಿನಿಯರು ಪ್ರಾರ್ಥನಾ ಗೀತೆಯನ್ನು ಹಾಡಿದರು ನಂತರ ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟನೆ ಮಾಡಿ ನೋಡಲ್ ಅಧಿಕಾರಿಗಳಾದ ಹೇಮಾ ಮಿರ್ಜಿ ಮುಖ್ಯೋಪಾಧ್ಯಾಯರು ಮುದ್ದಾಪುರ ಇವರು ತಾಲೂಕಿನ ಫಲಿತಾಂಶ ಹೆಚ್ಚಾಗಲು ಇಂತಹ ಸಮೂಹಗಳು ಅತ್ಯಂತ ಪೂರಕ ಎಂದು ತಿಳಿಸಿದರು.
ಪ್ರಾಸ್ತಾವಿಕ ನುಡಿಯನ್ನು ಸಮೂಹದ ಅಧ್ಯಕ್ಷರಾದ ಆರ್ ವಿ ಮುತಾಲಿಕ್ ದೇಸಾಯಿ ಬಸವೇಶ್ವರ ಬಾಲಕಿಯ ಪ್ರೌಢಶಾಲೆ ಲೋಕಾಪುರ್ ಇವರು ಬೋರ್ಡ್ ನಿಂದ ಬಿಟ್ಟಂತಹ ಪ್ರಶ್ನೆ ಪತ್ರಿಕೆಯ ವಿಶ್ಲೇಷಣೆ ಮಾಡಿ ಕ್ಲಿಷ್ಟಕರಣಿಸುವ ಸಮಸ್ಯೆಗಳನ್ನು ಚರ್ಚಿಸುವದು ಸೂಕ್ತ ಎಂದು ಹೇಳಿದರು.ಅಧ್ಯಕ್ಷ ಸ್ಥಾನ ವಹಿಸಿದ ಐ ಜಿ ಹಂಚಿನಾಳ ಮುಖ್ಯ ಗುರುಗಳು ಸರ್ಕಾರಿ ಪ್ರೌಢಶಾಲೆ ಮಿರ್ಜಿ ಇವರು ಸಮೂಹದಲ್ಲಿ ಗಣಿತ ವಿಜ್ಞಾನ ಇಂಗ್ಲಿಷ್ ವಿಷಯಗಳು ಕಷ್ಟದಾಯಕವಾಗಿದ್ದರು ಸಹ ಅವುಗಳನ್ನು ಸರಿಯಾದ ರೀತಿಯಲ್ಲಿ ಕರಗತ ಮಾಡಿಕೊಂಡರೆ ಫಲಿತಾಂಶ ಸುಧಾರಣೆ ಸಾಧ್ಯ ಎಂದು ಹೇಳಿದರು ಕಾರ್ಯಕ್ರಮದ ನಿರೂಪಣೆಯನ್ನು ಶೇಖರ ರಾಥೋಡ್ ಗುರುಗಳು ವಂದನಾರೆ್ಣಯನ್ನು ಸಂಗಮೇಶ್ ಜಾನಮಟ್ಟಿ ಗುರುಗಳು ನಡೆಸಿಕೊಟ್ಟರು ನರಸಣ್ಣವರ್ ಮುಖ್ಯ ಗುರುಗಳು ವೀರಭದ್ರೇಶ್ವರ ಪ್ರೌಢಶಾಲೆ ಹಲಗಲಿ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಅದರಂತೆ ಮೂವರು ಸಂಪನ್ಮೂಲ ವ್ಯಕ್ತಿಗಳು ಸಹ ಉಪಸ್ಥಿತರಿದ್ದರು ಚಹಾದ ವಿರಾಮ ಆದ ನಂತರ ಮೊದಲನೇ ಅವಧಿಯನ್ನು ಮಹಾಂತೇಶ್ ಮುರನಾಳ ಗುರುಗಳು ಸರ್ಕಾರಿ ಪ್ರೌಢಶಾಲೆ ಕುಳಲಿ ಇವರು ಮೇಲ್ಮೈ ವಿಸ್ತೀರ್ಣ ಮತ್ತು ಘನಫಲ ಕುರಿತು ಅನ್ವಯಿಕ ಪ್ರಶ್ನೆಗಳನ್ನು ಸುಲಭ ರೀತಿಯಲ್ಲಿ ತಿಳಿಸಿಕೊಟ್ಟರು.
ಎರಡನೇ ಅವಧಿಯನ್ನು ಆನಂದ್ ಶಿರಬೂರ್ ರಮೇಶ್ ಗಡ್ಡಣ್ಣವರ್ ಪ್ರೌಢಶಾಲೆ, ಶಿರೋಳ್ ಗುರುಗಳು ಪಾಸಿಂಗ್ ಪ್ಯಾಕೇಜ್ ಕುರಿತಾಗಿ ಸರಳ ರೀತಿಯಲ್ಲಿ ತಿಳಿಸಿಕೊಟ್ಟರು ಮಧ್ಯದಲ್ಲಿ ವಿಶೇಷವಾದಂತಹ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ವಿಶೇಷವಾದಂತಹ ಟ್ರಿಕ್ಸ್ ಗಳ ಮೂಲಕ ಸುಲಭ ಸರಳ ಅತ್ಯಂತ ಆಸಕ್ತಿದಾಯಕವಾಗಿ ರಮೇಶ್ ಬಾಬು ಕೆಎಲ್‌ಇ ಪ್ರೌಢಶಾಲೆ ಮಾಲಿಂಗಪುರ್ ಇವರು ಚಾರ್ಟ್ ತೋರಿಸುವ ಮೂಲಕ ತಿಳಿಸಿಕೊಟ್ಟರು ನಂತರ ಕೊನೆಯ ಕ್ಷಣದಲ್ಲಿ ವಿಶೇಷವಾಗಿ ಸಂದೇಹಗಳ ಪರಿಹಾರವನ್ನು ಸುಲಭ ರೀತಿಯಲ್ಲಿ ವೃತ್ತಗಳಿಗೆ ಸಂಬಂಧಿಸಿದ ವಿಸ್ತೀರ್ಣ ಕುರಿತು ಸದಾಶಿವ ಪುರಾಣಿಕ ಗುರುಗಳು ಸರ್ಕಾರಿ ಪ್ರೌಢಶಾಲೆ ಅಕ್ಕಿಮರಡಿ ತಿಳಿಸಿಕೊಟ್ಟರು ನಂತರ ಸಂಪನ್ಮೂಲ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ ಶಿಕ್ಷಕರಿಗೆ ಕಿರು ಕಾಣಿಕೆಯನ್ನು ಕೊಡಲಾಯಿತು.
ನಂತರ ಕೊನೆಯಲ್ಲಿ ಸಮಾರೋಪ ಸಮಾರಂಭವನ್ನು ನಡೆಸಲಾಯಿತು. ಎಲ್ಲ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅತ್ಯಂತ ಯಶಸ್ವಿಗೊಳಿಸಿದರು.