ಉಪ ಚುನಾವಣೆ ದಿನ ಪಿ.ಆರ್.ಓ ಮತ್ತು ಎಪಿಆರ್ಗಳಿಗೆ ಸಮಯಪ್ರಜ್ಞೆ ಮುಖ್ಯ: ಬಾಕರ್ಿ

ಹಾವೇರಿ: ಮುಕ್ತ ಹಾಗೂ ಪಾರದರ್ಶಕ ಮತದಾನ ಪ್ರಕ್ರಿಯೆಗೆ ಮತಗಟ್ಟೆ ನಿಯೋಜಿತ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಪಾತ್ರ ಪ್ರಮುಖವಾಗಿದೆ ಎಂದು ಹಾವೇರಿ ತಹಶೀಲ್ದಾರ ಶಂಕರ ಬಾಕರ್ಿ ಅವರು ಹೇಳಿದರು. 

ಜಿಲ್ಲಾಡಳಿತದಿಂದ ವಿಧಾನಸಭಾ ಉಪಚುನಾವಣೆಯ ಮತಗಟ್ಟೆ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಯಾಗಿ ನೇಮಕಗೊಂಡಿರುವ ಅಧಿಕಾರಿಗಳಿಗೆ ಸೋಮವಾರ ನಗರದ ಹುಕ್ಕೇರಿಮಠದ ಶಿವಬಸವೇಶ್ವರ ಪ್ರೌಢಶಾಲೆಯಲ್ಲಿ ಆಯೋಜಿಸಿದ ಒಂದು ದಿನದ ತರಬೇತಿ ಉದ್ದೇಶಿಸಿ ಅವರು ಮಾತನಾಡಿದರು. 

ಮತಗಟ್ಟೆ ಅಧಿಕಾರಿ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಾಗಿ ನಿಯೋಜಿತಗೊಂಡಿರುವ ತಾವು ತರಬೇತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಯಾವುದೇ ಸಂಶಯಗಳು ಮಾಹಿತಿಗಳನ್ನು ಸ್ಪಷ್ಟವಾಗಿ ಅರಿತುಕೊಳ್ಳಬೇಕು. ಗೊಂದಲ ಬೇಜವ್ದಾರಿಯಿಂದ ಚುನಾವಣಾ ಕರ್ತವ್ಯವನ್ನು ನಿರ್ವಹಿಸಲು ಅವಕಾಶ ಇಲ್ಲ. ಒಂದೊಮ್ಮೆ ಕಾರ್ಯದಲ್ಲಿ ಬೇಜವ್ದಾರಿ ಪ್ರದಶರ್ಿಸಿದರೇ ಸೇವಾವಧಿ ಪೂರ್ಣ ತೊಂದರೆ ಅನುಭವಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದರು. 

ತರಬೇತಿದಾರರಾದ ಸೆಕ್ಟರ್ ಆಫೀಸರ್ ಮಲ್ಲಿಕಾಜರ್ುನಪ್ಪ ಎಂ.ಬಿ. ಮಾತನಾಡಿ ಪಿಆರ್ಓಗಳು ಹಾಗೂ ಎಪಿಆರ್ಓಗಳಿಗೆ ಮತದಾನದ ದಿನ ಸಮಯಪ್ರಜ್ಞೆಯಿರಬೇಕು.  ತರಬೇತಿಯಲ್ಲಿ ಎಂ3 ಮಶಿನ್ ಇವಿಎಂ ಮತ್ತು ವಿವಿಪ್ಯಾಟ್ಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಬೇಕು ಎಂದು ಹೇಳಿದರು. 

ಮತಗಟ್ಟೆಗಳಿಗೆ ತಲುಪಿದ ನಂತರ ಎಲ್ಲ ಲಕೋಟೆಗಳನ್ನು ದಾಖಲೆಗಳನ್ನು ಪೂರ್ವಭಾವಿಯಾಗಿ ಸಿದ್ಧತೆ ಮಾಡಿಕೊಳ್ಳಬೇಕು.  ಮತದಾನದ ದಿನ ಬೆಳಿಗ್ಗೆ 6 ಗಂಟೆಗೆ ಕಡ್ಡಾಯವಾಗಿ ಅಣುಕು ಮತದಾನ ಮಾಡಬೇಕು. ಮತದಾನ ಕ್ರಮಬದ್ಧವಾಗಿ ನಡೆಯುತ್ತಿರುವ ಬಗ್ಗೆ ಮೇಲ್ವಿಚಾರಣೆ ಮಾಡಬೇಕು. ಪ್ರತಿ 2 ಗಂಟೆಗೆ ಆದ ಮತದಾನವನ್ನು ದಾಖಲಿಸಿಕೊಂಡು ಎಸ್ಎಂಎಸ್ ಕಳಿಸಬೇಕು. ಮತಯಂತ್ರದ ಯಾವುದೇ ಘಟಕ ಕಾರ್ಯನಿರ್ವಹಿಸದಿದ್ದಲ್ಲಿ ಸೆಕ್ಟರ್ ಆಫಿಸರ್ಗಳಿಗೆ ತಿಳಿಸಿ ಸರಿಪಡಿಸಿಕೊಳ್ಳಬೇಕು. ಮತದಾನದ ಸಂದರ್ಭದಲ್ಲಿ ಸಿಯು ಹಾಗೂ ಬಿಯು ಬದಲಾವಣೆ ಮಾಡುವ ಸಂದರ್ಭದಲ್ಲಿ ಹೊಸದಾಗಿ ಅಳವಡಿಸಿ ಪ್ರತಿ ಅಭ್ಯಥರ್ಿಗೆ ಒಂದು (ನೋಟಾ ಸಹಿತ) ಮತ ಹಾಕಿ ಅಣಕು ಮತದಾನ ಪೂರ್ಣಗೊಳಿಸಬೇಕು. ಸಂಜೆ 6 ಗಂಟೆಯ ನಂತರ ಮತದಾನಕ್ಕಾಗಿ ಮತಗಟ್ಟೆ ಹೊರಗೆ ಸರದಿಯಲ್ಲಿರುವ ಮತದಾರರಿಗೆ ಕೊನೆಯ ಮತದಾರನಿಂದ ಪ್ರಾರಂಭಿಸಿ ಚೀಟಿಯನ್ನು ನೀಡಿ ಮತದಾನಕ್ಕೆ ಅವಕಾಶ ಮಾಡಿಕೋಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. 

ಗಂಡು ಮತ್ತು ಹೆಣ್ಣು ಮತದಾರರ ಅಂಕಿಸಂಖ್ಯೆ ದಾಖಲಿಸಿಬೇಕು. ಪುರುಷ ಹಾಗೂ ಮಹಿಳಾ 2 ಗಂಟೆಗಳಿಗೊಮ್ಮೆ ಮತದಾರರ ಸಂಖ್ಯೆಯನ್ನು ಪಿ.ಆರ್.ಓ ಗಮನಕ್ಕೆ ತರಬೇಕು. ಕಂಟ್ರೋಲ್ ಯುನಿಟ್ದಲ್ಲಿ ತಪ್ಪು ಸಂದೇಶ ಬಂದಲ್ಲಿ ತಕ್ಷಣ ಪಿಆರ್ಓ ಗಮನಕ್ಕೆ ತರಬೇಕು ಎಂದು ಮತಗಟ್ಟೆ ಅಧಿಕಾರಿಗಳಿಗೆ ತಿಳಿಸಿದರು. 

ಪಿಆರ್ಓಗಳು ಹಾಗೂ ಎಪಿಆರ್ಓಗಳು ಪಿಆರ್ಓ ದಿನಚರಿ ಹಾಗೂ ಪಿಆರ್ಓ ಘೋಷಣೆ ಎರಡೂ ಮಹತ್ವವಾದವುಗಳು ಅವುಗಳನ್ನು ಸರಿಯಾಗಿ ಭತರ್ಿಮಾಡಬೇಕು. ಮತದಾರರ ಲೆಕ್ಕಪತ್ರ ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ನೀವು ನೀಡಿದ ದಾಖಲಾತಿಗಳು ಹಾಗೂ ಮಶಿನ್ನಲ್ಲಿರುವ ದಾಖಲಾತಿಗಳು ಸರಿಯಾಗಿರಬೇಕು. ನಿಖರ ಹಾಗೂ ಸ್ಪಷ್ಟ ಮಾಹಿತಿ ನೀಡಬೇಕು. ಒಂದು ವೇಳೆ ತಪ್ಪಾದಲ್ಲಿ ನೇರವಾಗಿ ನೀವೆ ಹೊಣೆಯಾಗಿರುತ್ತೀರಿ ಎಂದು ಅವರು ಹೇಳಿದರು. 

ಫಾರ್ಮ ತುಂಬುವಾಗ ಕನ್ನಡ ಇಲ್ಲವೇ ಇಂಗ್ಲೀಷ್ ಯಾವುದಾದರೂ ಒಂದು ಭಾಷೆಯಲ್ಲಿ ತುಂಬಬೇಕು. ಒಂದು ವೇಳೆ ನಿಮಗೆ ಗೊಂದಲಗಳಿದ್ದಲ್ಲಿ ನಿಮ್ಮ ಸೆಕ್ಟ್ರ್ ಆಫೀಸರ್ನ್ನು ಸಂಪಕರ್ಿಸಬೇಕು,ಎಂ3 ಮಶಿನ್ ವಿವಿಪ್ಯಾಟ್ನ್ನು ನೀವು ಯಾವುದೇ ಕಾರಣಕ್ಕೂ ಮಾಕ್ಪೋಲ್ ಮಾಡುವವರೆಗೂ ಮುಟ್ಟಬಾರದು. ಸರಿಯಾದ ಮಾಹಿತಿಯಿಂದ ಮಾಕ್ಪೋಲ್ ಸಟರ್ಿಫೀಕೆಟ್ ಕಡ್ಡಾಯವಾಗಿ ತುಂಬಬೇಕು ಎಂದು ಅವರು ಹೇಳಿದರು. 

ಮೊದಲ ಹಂತದ ತರಬೇತಿಯಲ್ಲಿ ಉಪಚುನಾವಣೆಯಲ್ಲಿ ಮೊದಲಬಾರಿಗೆ ವಿಶೇಷವಾಗಿ ಬಳಸುತ್ತಿರುವ ಎಂ3 ಮಶಿನ್ ಇವಿಎಂ ಮತ್ತು ವಿವಿಪ್ಯಾಟ್ ಕುರಿತು ಮಾಹಿತಿ ನೀಡಿದರು. ತರಬೇತಿಯಲ್ಲಿ 436 ಸಿಬ್ಬಂದಿ ಭಾಗವಹಿಸಿದ್ದರು.  

ಡಿಡಿಪಿಐ ಅಂದಾನಪ್ಪ ವಡಗೇರಿ, ಇಓ ಬಸವರಾಜ್, ಡಿಸ್ಟ್ರಿಕ್ ಮಾಸ್ಟರ್ ಟ್ರೇನರ್ ಶಬ್ಬೀರ್ ಮನಿಯಾರ್, ಬಿಇಓ ಎಂ.ಎಚ್.ಪಾಟೀಲ, ಎಡಿಎ ಪರಮೇಶ್ವರ್ ಹುಬ್ಬಳ್ಳಿ, ಚುನಾವಣಾ ತರಬೇತಿ ಅಧಿಕಾರಿ ಕರಿಯಲ್ಲಪ್ಪ ಹಾಗೂ ಮತ್ತಿತರರು ಉಪಸ್ಥಿತರಿದ್ದರು.