ಶಾಸಕರ ಮಲತಾಯಿ ಧೋರಣೆ ವಿರುದ್ಧ ಗುಡುಗಿದ ಆರ್‌ಎಸ್ ಪಾಟೀಲ ಕುಚಬಾಳ

ಶಾಸಕರ ಮಲತಾಯಿ ಧೋರಣೆ ವಿರುದ್ಧ ಗುಡುಗಿದ ಆರ್‌ಎಸ್ ಪಾಟೀಲ ಕುಚಬಾಳ RS Patil Kuchabal thundered against the stepmotherly attitude of the MLAs

 

ತಾಳಿಕೋಟೆ 10: ತಾಲೂಕಿನ ಮೈಲೇಶ್ವರ ಗ್ರಾಮದ ಹತ್ತಿರ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳವನ್ನು ವಿರೋಧಿಸಿ, ನಡೆಯುತ್ತಿರುವ ಧರಣಿ ಸತ್ಯಾಗ್ರಹ ಉದ್ದೇಶಿಸಿ ಮಾತನಾಡಿದ ಮಾಜಿ ಭಾ ಜ ಪ ಜಿಲ್ಲಾಧ್ಯಕ್ಷ. ಆರ್ ಎಸ್ ಪಾಟೀಲ( ಕೂಚಬಾಳ ) ತಾಳಿಕೋಟಿ ಪಟ್ಟಣದಲ್ಲಿ ಹದಿಮೂರು ದಿನಗಳಿಂದ ನಡೆಯುತ್ತಿರುವ ಈ ಧರಣಿ ಸ್ಥಳಕ್ಕೆ ಶಾಸಕರು ಬರದೆ ಧರಣಿ ನಿರತರ ಮುಂದೆ ಹಾದು ಸೌಜನ್ಯಕ್ಕೂ ಕೂಡಾ ಬಾರದೆ ಹೋದದ್ದು ಖಂಡನಿಯ ವಾದುದ್ದು. ನಿಮಗೆ ತಾಳಿಕೋಟಿ ಜನತೆ ಹೆಚ್ಚಿನ ಮತಗಳನ್ನ ನೀಡಿದ್ದಾರೆ ಅದನ್ನು ಶಾಸಕರು ಮರೆತಿದ್ದಾರೆ.  

ಶಾಸಕರು ತಾಳಿಕೋಟಿ ಪಟ್ಟಣದ ಋಣವನ್ನು ತೀರಿಸಬೇಕಾದರೆ ಪಟ್ಟಣದಲ್ಲಿಯೇ ಪ್ರಜಾಸೌಧ ಕಟ್ಟಡ ನಿರ್ಮಿಸುವಂತೆ ಒತ್ತಾಯಿಸಿದರು. ತಾಳಿಕೋಟೆ ತಾಲ್ಲೂಕು ಹೋರಾಟ ಸಮಿತಿಯ ಉಪಾಧ್ಯಕ್ಷ ವಿಜಯ ಸಿಂಗ್ ಹಜೇರಿ ಮಾತನಾಡಿ ತಾಲೂಕು ಆಡಳಿತ ಸಂಪೂರ್ಣ ಏಕ ಪಕ್ಷಿಯವಾಗಿ ನಡೆದು ಕೊಳ್ಳುತ್ತಿದ್ದೂ ತಮ್ಮದೆ ಕುಟುಂಬಕ್ಕೆ ಅನಕೂಲವಾಗುವ ಹಾಗೆ ನಡೆಕೊಳ್ಳುತ್ತಿರುವುದು ವಿಷಾಧನಿಯ ಸಂಗತಿಯಾಗಿದೆ ಎಂದರು. ಈಗ ನಿಗದಿ ಪಡಿಸಿರುವ ಸ್ಥಳ ಕೂಡಲೇ ರದ್ದು ಪಡಿಸಬೇಕು ಎಂದು ಅಗ್ರಹಿಸಿದರು.

ಇಂದು 13 ನೇ ದಿನದ ಧರಣಿ ಸತ್ಯಾಗ್ರಹವು ರಾಜಪುತ ಸಮಾಜದ ಎಲ್ಲಾ ಹಿರಿಯರಿಂದ ನಡೆಯಿತು.ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಪದಾಧಿಕಾರಿಗಳಾದ ಹೋರಾಟ ಸಮಿತಿ ಅಧ್ಯಕ್ಷ ದಶರತಸಿಂಗ್ ಮನಗೂಳಿ, ಎಸ್‌ಬಿ ಕಟ್ಟಿಮನಿ, ಆರ್‌ಎಸ್ ಪಾಟೀಲ (ಕೂಚುಬಾಳ) ಮುತ್ತಪ್ಪ ಚಮಲಾಪುರ, ಕಾಶಿನಾಥ ಮುರಾಳ, ಮೆಹೆಬೂಬ ಚೋರಗಸ್ತಿ, ಪರಶುರಾಮ ತಂಗಡಗಿ, ಪ್ರಕಾಶ ಹಜೇರಿ, ಮಯೂರ ಪಾಟೀಲ, ಅಮಿತ್ ಮನಗೂಳಿ, ಮಹೇಶ ಚಲವಾದಿ, ರವಿ ಕಟ್ಟಿಮನಿ, ಹಾಗೂ ಪಟ್ಟಣದ ರಜಪೂತ ಸಮಾಜದ ಗುರುಹಿರಿಯರು ಹಾಜರಿದ್ದರು.