ಹೆಣ್ಣು ಮನೆಗೆ ಹುಣ್ಣೆಂಬ ಮೌಢ್ಯತೆಯಿಂದ ಹೊರಬನ್ನಿ...
Get rid of the foolish idea that women are a burden to the house...
ವಿಜಯಪುರ 10 : ಸ್ತ್ರೀಯು ಕುಟುಂಬದ ಕಷ್ಟ-ಸುಖಗಳಲ್ಲಿ ಸಮಪಾಲು ಮತ್ತು ಸಂಸಾರ ನಡೆಸಲು ತನ್ನ ಪಾಲಿನ ದುಡಿಮೆಯನ್ನು ಮನೆಯೊಳಗೆ ಅಷ್ಟೇ ಅಲ್ಲದೇ ಹೊಸ್ತಿಲು ದಾಟಿ ಬಂದು ಎಲ್ಲ ರಂಗಗಳಲ್ಲಿ ಸಕ್ರೀಯವಾಗಿತನ್ನನ್ನು ತೊಡಗಿಸಿಕೊಂಡಿದ್ದಾಳೆ. ಸಂಸಾರದ ಒಳಿತಿಗಾಗಿ ಕಷ್ಟಪಡುತ್ತಿರುವ ಮತ್ತು ಗಾಣದೆತ್ತಿನಂತೆ ಸದಾ ಪರೋಪಕಾರಿಯಾಗಿರುವ ಹೆಣ್ಣು ಎಂದರೆ 'ಹೆಣ್ಣು ಮನೆಗೆ ಹುಣ್ಣು' ಎಂಬ ಮೌಢ್ಯತೆಯಿಂದ ಹೊರಬಂದು “ಹೆಣ್ಣು ಸಮಾಜದ ಕಣ್ಣು” ಎಂಬುದನ್ನು ಅರಿಯಬೇಕಾಗಿದೆ ಎಂದು ಸಮಾಜಶಾಸ್ತ್ರದ ಮುಖ್ಯಸ್ಥೆ ಡಾ. ರಾಜಶ್ರೀ ಮಾರನೂರ ಅವರು ಅಭಿಪ್ರಾಯಪಟ್ಟರು.
ಅವರು ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ದಿನಾಂಖ: 10-03-2026 ರಂದು ಹೋಟೆಲಗ ಲಲಿತ ಮಹಲ್ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಅವರು ಮಾತನಾಡುತ್ತಾ, ಸಮಾಜ ಸೇವೆಯಲ್ಲಿ ತನ್ನನ್ನು ಸಕ್ರೀಯವಾಗಿ ತೊಡಗಿಸಿಕೊಂಡು ಎಲ್ಲವನ್ನು ಬಹಳ ಜಾಣ್ಮೆ, ಬುದ್ಧಿವಂತಿಕೆ, ಕುಶಲಗಾರಿಕೆಯಿಂದ ಕಾರ್ಯವನ್ನು ನಿರ್ವಹಿಸುವ ಚಾಕಚಕ್ಯತೆಯನ್ನು ಹೊಂದಿದ್ದಾಳೆ. ಹೀಗೆ ಸ್ತ್ರೀಯು ಶಿಕ್ಷಣ, ಕಲೆ, ಸಾಹಿತ್ಯ, ರಂಗಭೂಮಿ, ಸೇನೆ, ವೈದ್ಯಕೀಯ, ಕ್ರೀಡೆ, ರಾಜಕೀಯ, ವಿಜ್ಞಾನ-ತಂತ್ರಜ್ಞಾನ, ಕೈಗಾರಿಕೆ-ಉದ್ಯಮ ರಂಗಗಳಲ್ಲಿಯೂ ವಿಶೇಷವಾದ ಸಾಧನೆ-ಮೈಲುಗಲ್ಲನ್ನು ತೋರಿ ತನ್ನದೇ ಛಾಪು ಮೂಡಿಸಿದ್ದಾಳೆ ಎಂದರು.
ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ರೋಹಿಣಿ ಹಿರೇಶೆಡ್ಡಿ ಅವರು ಮಾತನಾಡಿ, ಕನ್ನಡದ ಖ್ಯಾತ ಕವಿಯತ್ರಿ ಸಂಚಿ ಹೊನ್ನಮ್ಮರವರ ತಮ್ಮ ಕಾವ್ಯದಲ್ಲಿ ಉಲ್ಲೇಖಿಸಿದಂತೆ, “ಪೆಣ್ಣಲ್ಲವೇ ನಮ್ಮೆಲ್ಲರ ಹಡೆದ ತಾಯಿ, ಪೆಣ್ಣಲ್ಲವೇ ಪೊರೆದವಳು, ಪೆಣ್ಣು ಪೆಣ್ಣೆಂದೇತಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು” ಸ್ತ್ರೀಯ ಮಹತ್ವವನ್ನು ಸಾರುವ ಸಾಲಗಳಿಂದ ತಿಳಿದು ಬರುವದೇನೆಂದರೆ, ನಾವು ಹೆಣ್ಣಿನ ಬಗ್ಗೆ ಯಾವುದೇ ತಾತ್ಸಾರ, ತಿರಸ್ಕಾರ, ಕೀಳಾಗಿ ಕಾಣುವ ಮನೋಭಾವನೆಯನ್ನು ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಉತ್ತಮ ಪರಿಸರ ಮತ್ತು ಅವಕಾಶ ಒದಗಿಸಿಕೊಡುವಂತೆ ಕಿವಿಮಾತು ಹೇಳಿದರು.
ಬದಲಾದ ಕಾಲಘಟ್ಟ ಮತ್ತು ಸನ್ನಿವೇಶದಲ್ಲಿ ಸ್ತ್ರೀಯ ಪುರುಷನಿಗೆ ಸರಿಸಾಟಿಯಾಗಬಲ್ಲ ಹಾಗೂ ತನ್ನ ಕಾರ್ಯದಕ್ಷತೆಯಿಂದಲೇ ಪುರುಷನಿಗಿಂತಲೂ ಮಿಗಿಲಾದ ಸಾಧನೆಯನ್ನು ತೋರುತ್ತಿದ್ದಾಳೆ. ಆಕೆಯು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಅಮೋಘವಾದ ಸಾಧನೆಗೈದು ಇಡೀ ಪುರುಷ ಪ್ರಧಾನ ಸಮಾಜವು ನಿಬ್ಬೆರಗಾಗುವಂತೆ ಮುನ್ನಡೆಯುತ್ತಿದ್ದಾಳೆ ಎಂದರು.
ಇಂದಿನ ಈ ಮಹಿಳಾ ದಿನಾಚರಣೆಯನ್ನು ಪುರುಷ ಪ್ರಾಧ್ಯಾಪಕರು ಆಯೋಜಿಸಿದ್ದು ಒಂದು ವಿಶೇಷವಾಗಿದೆ ಎಂದರು.ಸಮಾರಂಭದಲ್ಲಿ ಪ್ರಾಧ್ಯಾಪಕಿಯರಾದ ಡಾ. ದ್ರಾಕ್ಷಾಯಣಿ ಟಕ್ಕಳಕಿ, ಡಾ. ಶೀರೀನ್ ಸುಲ್ತಾನ ಇನಾಂದಾರ, ಡಾ. ಮಮತಾ ಬನ್ನೂರ, ಅಶ್ವೀನಿ ರಾಮಪೂರ, ಸರ್ವಶ್ರೀ ಚಟ್ಟೇರ, ಸುರೇಖಾ ದುಲಾರಿ ಮತ್ತು ಶೋಭಾ ಪವಾರ ಇನ್ನಿತರರು ವೇದಿಕೆಯ ಮೇಲಿದ್ದರು. ಈ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರ ಸಂಘದ ನಿರ್ದೇಶಕ ಡಾ. ಚಂದ್ರಕಾಂತ.ಬಿ, ಡಾ. ಚಿದಾನಂದ ಆನೂರ, ಪ್ರೊ. ಆರ್.ಎಸ್.ಕುರಿ, ಪ್ರೊ. ಎಂ.ಎಸ್.ಖೊದ್ನಾಪೂರ, ಡಾ. ಸುನೀಲ ತೋಂಟಾಪೂರ, ಡಾ. ದೇವೇಂದ್ರಗೌಡ ಪಾಟೀಲ, ಡಾ. ಎಸ್.ಪಿ.ಚವ್ಹಾಣ, ಡಾ. ಬಿ.ಎನ್.ಶಾಡದಳ್ಳಿ, ಪ್ರೊ. ಸಂಗಮೇಶ ಗುರವ, ಪ್ರೊ. ವಿನೋದ ಹುಲ್ಲೂರ, ಪ್ರೊ. ಮೇಘರಾಜ ನಾಯಕ, ಡಾ. ಕೇಶವಮೂರ್ತಿ, ಪ್ರೊ. ಸುನೀಲ ಹತ್ತಿ, ಉಸ್ಮಾನಸಾಬ ಮುಜಾವರ, ನವೀನ ಬಿರಾದಾರ, ಮಲ್ಲು ಗೋಠೆ ಇನ್ನಿತರರು ಭಾಗವಹಿಸಿದ್ದರು. ಈ ಸಮಾರಂಭವನ್ನು ಕಾಲೇಜಿನ ಎಲ್ಲ ಪುರುಷ ಬೋಧಕ-ಬೋಧಕರ ವರ್ಗದವರು ಗೌರವದ ಪ್ರತೀಕವಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 