ಲೋಕದರ್ಶನವರದಿ
ಬ್ಯಾಡಗಿ೨೫: ಸಾರ್ವಜನಿಕರಿಗೆ ಸೌಲಭ್ಯಗಳನ್ನು ಒದಗಿಸುವಲ್ಲಿ ಸ್ಥಳೀಯ ಪುರಸಭೆಯು ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ, ಈ ನಿಟ್ಟಿನಲ್ಲಿ ಯೂನಿಯನ್ ಬ್ಯಾಂಕ್ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ಆಸ್ತಿಗಳ ತೆರಿಗೆದಾರರಿಗೆ ಹಣ ಪಾವತಿಸಲು ಯೂನಿಯನ್ ಬ್ಯಾಂಕ್ ಸಹಕಾರದೊಂದಿಗೆ ಆರಂಭಿಸಿರುವ ಸಬ್ ಕಲೆಕ್ಷನ್ ಕೌಂಟರ್ ಉದ್ಘಾಟಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯಕ್ಕೂ ಮುನ್ನ ಕಸದ ಪಟ್ಟಿ ಸಂಗ್ರಹದಿಂದ ಆರಂಭವಾದ ಪುರಸಭೆಯು ಇದೀಗ ಕ್ಯಾಶ್ಲೆಸ್ ವಹಿವಾಟಿನವರೆಗೂ ಬಂದಿರುವುದಲ್ಲದೇ ಪಟ್ಟಣದ ಸಾರ್ವಜನಿಕರಿಗೆ ಕುಡಿಯುವ ನೀರು, ವಿದ್ಯುತ್ ದೀಪ, ರಸ್ತೆ ಚರಂಡಿ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಮುಟ್ಟಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ಬ್ಯಾಂಕ್ ಕೌಂಟರ್ ಸದ್ಭಳಕೆಯಾಗಲಿ: ಪುರಸಭೆ ಆಡಳಿತಾಧಿಕಾರಿ ಉಪವಿಭಾಗಾಧಿಕಾರಿ ದಿಲೀಷ್ ಮಾತನಾಡಿ, ಸಾರ್ವಜನಿಕ ರಿಗೆ ಸೌಲಭ್ಯ ಕಲ್ಪಿಸುವಲ್ಲಿ ಯೂನಿಯನ್ ಬ್ಯಾಂಕ್ ಮುಂಚೂಣಿಯಲ್ಲಿದೆ, ತೆರಿಗೆ ಕಟ್ಟುವ ಜನರು ಬ್ಯಾಂಕ್ವರೆಗೂ ಅಲೆದಾ ಡದಿರಲಿ ಎಂಬ ಉದ್ದೇಶದಿಂದ ಸಬ್ ಕಲೆಕ್ಷನ್ ಕೌಂಟರ್ ಆರಂಭಿಸಿರುವ ಯೂನಿಯನ್ ಬ್ಯಾಂಕ್ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರಲ್ಲದೇ ಜನರು ಇದರ ಸದುಪಯೋಗ ಪಡೆದುಕೊಳ್ಳವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಶರಣಮ್ಮ, ಪುರಸಭೆ ಮುಖ್ಯಾಧಿಕಾರಿ ವಿ.ಎಂ.ಪೂಜಾರ, ಸದಸ್ಯರಾದ ಬಿ.ಎಂ.ಛತ್ರದ, ಬಾಲಚಂದ್ರ ಪಾಟೀಲ, ರಾಮಣ್ಣ ಕೋಡಿಹಳ್ಳಿ, ಈರಣ್ಣ ಬಣಕಾರ, ಗಾಯತ್ರಿ ರಾಯ್ಕರ್, ಶಿವರಾಜ್ ಅಂಗಡಿ, ಸುಭಾಸ್ ಮಾಳಗಿ, ಕಲಾವತಿ ಬಡಿಗೇರ, ಹನುಮಂತ ಮ್ಯಾಗೇರಿ, ಫಕ್ಕೀರಮ್ಮ ಛಲವಾದಿ, ಸರೋಜಾ ಉಳ್ಳಾಗಡ್ಡಿ, ಯೂನಿಯನ್ ಬ್ಯಾಂಕ್ ವ್ಯವಸ್ಥಾಪಕ ದಂಡುನಾಯಕ್ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.