ದ್ವಿತೀಯ ಪಿಯು ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳು
ರಾಯಬಾಗ, 14: ತಾಲೂಕಿನ ಮೊರಬ ಗ್ರಾಮದ ಗಜಾನನ ಶಿಕ್ಷಣ ಸಂಸ್ಥೆಯ ಎಸ್.ಆರ್.ಬಾನೆ(ಸರಕಾರ) ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ಪರೀಕ್ಷೆ-1 ಯಲ್ಲಿ ಕಲಾ ವಿಭಾಗದ ಕರುಣಾ ಅಸೋದೆ 550 (ಶೇ.91.66) ಅಂಕ ಪಡೆದು ಪ್ರಥಮ, ಅಕ್ಷತಾ ಬಾನೆ 544 (ಶೇ.90.66) ಅಂಕ ಪಡೆದು ದ್ವಿತೀಯ ಹಾಗೂ ಅಶ್ವಿನಿ ಚೌಗಲಾ ಮತ್ತು ಈಶ್ವರಿ ಅಸೋದೆ 541 (ಶೇ.90.16) ಅಂಕ ಪಡೆದು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಸಂಜೀವಕುಮಾರ ಬಾನೆಸರಕಾರ ಹಾಗೂ ಪ್ರಾಚಾರ್ಯ ರುದ್ರೇಶ ಅಸೋದೆ ಮತ್ತು ಉಪನ್ಯಾಸಕರು ಹರ್ಷ ವ್ಯಕ್ತಪಡಿಸಿದ್ದಾರೆ.