ವಿದ್ಯಾಥರ್ಿಗಳು ಸಮಾನತೆ ಸಾಧಿಸಲು ಚಟಗಳನ್ನು ಬಿಡಬೇಕು: ಪಿ.ಶಿವರಾಜ್

ಲೋಕದರ್ಶನ ವರದಿ

ರಾಣೇಬೆನ್ನೂರು: ಭಾರತೀಯರು ವೇದ ಇತಿಹಾಸ ಕಾಲಗಳಿಂದಲೂ ತಮ್ಮ ದೈನಂದಿನ ಜೀವನ ಬದುಕಿನ ಜೊತೆಗೆ ಅನೇಕ ರೀತಿಯ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ  ಮೂಲಕ ಅವರು ಮಾನಸಿಕ, ದೈಹಿಕ ಮತ್ತು ಬೌದ್ಧಿಕವಾಗಿ ಸದಾ ಕ್ರೀಯಾಶೀಲತೆಯಿಂದ ಬದುಕುತ್ತಿದ್ದರು.ಆದರೆ ಇಂದು ಆಧುನಿಕ ವ್ಯವಸ್ಥೆ ಜೀವನ ನಿಷ್ಕ್ರಿಯಗೊಳ್ಳುತ್ತಿರುವುದು ಅತ್ಯಂತ ವಿಷಾಧಕರ ಸಂಗತಿಯಾಗಿದೆ ಎಂದು ನಗರದ ಸಕರ್ಾರಿ ಪದವಿಪೂರ್ವ ಕಾಲೇಜು ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ ಮತ್ತು ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಮತ್ತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಧಾನ ದಿವಾಣಿ ನ್ಯಾಯಾಧೀಶ ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದಶರ್ಿಗಳಾದ ಪಿ.ಶಿವರಾಜ್ ಹೇಳಿದರು. 

ವಿದ್ಯಾಥರ್ಿಗಳು ಭವಿಷ್ಯದಲ್ಲಿ ಈ ದೇಶದ ನಾಗರೀಕರು ಮತ್ತು ನಾಯಕರು. ಇದರಿಂದ ಭವಿಷ್ಯ ಉಜ್ವಲವಾಗುವ ಬದಲು ಹಾಳಾಗುತ್ತಲಿದೆ. ಇಂತಹ ಚಟಗಳಿಗೆ ಬಲಿಯಾಗದೆ ಉತ್ತಮ ಬದುಕನ್ನು ರೂಪಿಸಿಕೊಂಡು ಸಮಾಜದಲ್ಲಿ ಸಮಾನತೆಯನ್ನು ಕಂಡುಕೊಳ್ಳಲು ಮುಂದಾಗಬೇಕು ಎಂದು ವಿದ್ಯಾಥರ್ಿ ಸಮುದಾಯಕ್ಕೆ ಕರೆ ನೀಡಿದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಜಿ.ಬಿ.ಬೆಳವಿಗಿ ಅವರು ಮಾತನಾಡಿ, ಕಾಲೇಜಿನಲ್ಲಿ ಶಿಕ್ಷಣದ ಜೊತೆಗೆ ಸಮಗ್ರ ವ್ಯಕ್ತಿತ್ವವನ್ನು ನಿರೂಪಿಸಿಕೊಳ್ಳುವ ಎಲ್ಲ ರೀತಿಯ ಕಾರ್ಯಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ. ರಾಷ್ಟ್ರೀಯ ಕಾರ್ಯಕ್ರಮಗಳು ಅತ್ಯಂತ ಪರಿಣಾಮಕಾರಿಯಾಗಿ ನೆರವೇರಿಸುವುದರ ಮೂಲಕ ವಿದ್ಯಾಥರ್ಿಗಳಲ್ಲಿ ಅರಿತು ಮತ್ತು ಜಾಗ್ರತಿ ಮೂಡಿಸಲಾಗುತ್ತಿದೆ ಎಂದರು. 

  ತಾಲೂಕಿನ ನಾಗರೀಕರು ಕಾಲೇಜಿನ ಉಪಯೋಗವನ್ನು ಪಡೆದುಕೊಳ್ಳುವುದರ ಮೂಲಕ ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸಿಕೊಳ್ಳಲು ಮುಂದಾಗಬೇಕು ಎಂದು ಕರೆ ನೀಡಿದರು. ವೇದಿಕೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಎಂ.ಬಿ.ಚಿನ್ನಪ್ಪನವರ, ಉಪಾಧ್ಯಕ್ಷ ಎಂ.ಎಸ್.ರೊಡ್ಡನವರ, ಕಾರ್ಯದಶರ್ಿ ಕುಮಾರ ಎಳೆಹೊಳೆ ಸೇರಿದಂತೆ ಕಾಲೇಜಿನ ಅನೇಕ ಉಪನ್ಯಾಸಕರು, ತಾಲೂಕು ಕಾನೂನು ಸೇವಾ ಸಮಿತಿಯ ನ್ಯಾಯವಾಧಿಗಳು ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಸವಿತಾ ಸಂಗಡಿಗರು ಪ್ರಾಥರ್ಿಸಿದರು. ಪ್ರೊ|| ಗಿರಿಜಾದೇವಿ ಮುಳಗುಂದ ಸ್ವಾಗತಿಸಿದರು. ಹಿರಿಯ ಉಪನ್ಯಾಸಕ ಡಿ.ಬಸವರಾಜಪ್ಪ ನಿರೂಪಿಸಿದರು. ಪ್ರೊ|| ಎಂ.ಬಿ. ಮಲ್ಲಿಕಾಜರ್ುನಪ್ಪ ವಂದಿಸಿದರು.