ನೇಸರಗಿ 19: ಇಂದಿನ ಯುವಕ, ಯುವತಿಯರು ರಾಷ್ಟ್ರೀಯ ಕ್ರೀಡೆಗಳಾದ ಕ್ರಿಕೆಟ್, ವಾಲಿಬಾಲ್, ಕಬ್ಬಡಿ, ಕೋಕೋ ಕ್ರೀಡೆಗಳಲ್ಲಿ ಪಾಲ್ಗೊಂಡು ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಪಾಲ್ಗೊಂಡು ಗ್ರಾಮದ, ತಾಲೂಕಿನ, ಜಿಲ್ಲೆಯ, ರಾಜ್ಯದ, ದೇಶದ ಹೆಸರು ಬೆಳೆಸುವ ಕಾರ್ಯ ಮಾಡಬೇಕೆಂದು ಮಾಜಿ ಶಾಸಕರು ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಹೇಳಿದರು.
ಅವರು ಸಮೀಪದ ಮದನಭಾವಿ ಗ್ರಾಮದಲ್ಲಿ ಶ್ರೀ ಚನ್ನವೃಷಬೇಂದ್ರ ದೇವರಕೊಂಡ ಅಜ್ಜನವರ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಮಹಾಂತೇಶ ಅಣ್ಣಾ ದೊಡ್ಡಗೌಡರ ಅಭಿಮಾನಿಗಳ ಭಳಗದ ವತಿಯಿಂದ ಆಯೋಜಿಸಲಾಗಿದ್ದ ಗ್ರಾಮೀಣ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ ಇಂದಿನ ಯುವಕರು ದುಶ್ಚಟಕ್ಕೆ ಬಲಿಯಾಗದೆ ಗ್ರಾಮೀಣ ಕ್ರೀಡೆಗಳಲ್ಲಿ ಪಾಲ್ಗೊಂಡು ಒಲಂಪಿಕ್ ಕ್ರೀಡೆಗಳಲ್ಲಿ ಪಾಲ್ಗೊಂಡು ಗ್ರಾಮದ ಹೆಸರು ತರಬೇಕು ಎಂದರು.
ಮದನಭಾವಿ ಗ್ರಾಮದಲ್ಲಿ ಇಷ್ಟೊಂದು ಉತ್ಸಾಹದಿಂದ ಕ್ರೀಡೆಗೆ ಆಯೋಜನೆ ಮಾಡಿದ ಯುವಕರ ಕಾರ್ಯ ಶ್ಲಾಘನೀಯವಾದದ್ದು. ಈ ವರ್ಷ ಗ್ರಾಮೀಣ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಮುಂದಿನ ವರ್ಷ ಜಿಲ್ಲಾ ಮಟ್ಟದ ಪಂದ್ಯಾವಳಿ ಆಯೋಜಿಸಲು ಉತ್ಸುಕನಾಗಿದ್ದು ಅದಕ್ಕೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದರು. ಅದಕ್ಕಾಗಿ ವಿದ್ಯಾರ್ಥಿಗಳು ವ್ಯಾಸಂಗ ಸಮಯದಲ್ಲಿ ಪಾಠದ ಜೊತೆಗೆ ಆಟಕ್ಕೂ ಹೆಚ್ಚಿನ ಪ್ರಧಾನ್ಯತೆ ನೀಡಿ ಮಾನಸಿಕವಾಗಿ, ದೈಹಿಕವಾಗಿ ಬೆಳವಣಿಗೆ ಹೊಂಡಬೇಕು ಎಂದರು.
ಈ ಸಂದರ್ಭದಲ್ಲಿ ಚನಗೌಡ ಹಾದಿಮನಿ, ಕಿರಣ ಪಾಟೀಲ, ರಾಮನಗೌಡ ಪಾಟೀಲ, ಮಲ್ಲಿಕಾರ್ಜುನ ಉಳ್ಳಾಗಡ್ಡಿ, ನಿಂಗನಗೌಡ ದೊಡ್ಡಗೌಡರ, ರಾಮನಗೌಡ ಪಾಟೀಲ, ಶಂಕರಗೌಡ ದೊಡ್ಡಗೌಡರ, ಈರನಗೌಡ ದೊಡ್ಡಗೌಡರ, ಯಲ್ಲನಗೌಡ ದೊಡ್ಡಗೌಡರ, ಶಿವಪ್ಪ ಗುಜನಾಳ, ನಾಮದೇವ ಸಿದ್ದಮ್ಮನವರ, ಅಶೋಕ ಹೊಸೂರ, ಶಿವಪ್ಪ ಪುಗಟಿ, ಕೃಷ್ಣ ದೊಡ್ಡಗೌಡರ, ರಜನಿಕಾಂತ ಬಾಳಿಗಡ್ಡಿ, ಪ್ರದೀಪ್ ದೊಡ್ಡಗೌಡರ, ಬಸವರಾಜ ಬದ್ರಿ, ಸಿದ್ದು ಹೊಸಮನಿ ,ಎಸ್ ಕೆ ಹೊಸಮನಿ, ಅಜಯ ದೊಡ್ಡಗೌಡರ, ನಾಗೇಶ ದೊಡ್ಡಗೌಡರ, ಸೋಮಪ್ಪ ಯರಝರ್ವಿ, ಮಂಜುನಾಥ ನಾಲಪರೊಶಿ, ಸೇರಿದಂತೆ ಗ್ರಾಮದ ಹಿರಿಯರು, ಮುಖಂಡರು, ಯುವ ಜನಾಂಗ, ಕ್ರೀಡಾ ಅಭಿಮಾನಿಗಳು ಪಾಲ್ಗೊಂಡಿದ್ದರು.