ಶಹಪುರ- ಅದ್ದೂರಿಯಾಗಿ ಜರುಗಿದ ಸರ್ಕಾರಿ ಶಾಲಾ ವಾರ್ಷಿಕೋತ್ಸವ
ಹುಲಿಗಿ 07: ಖಾಸಗಿ ಶಾಲೆಗಳು ನಾಚುವಂತೆ ಸರಕಾರಿ ಶಾಲೆಗಳಲ್ಲಿ ಅದ್ದೂರಿ ವಾರ್ಷಿಕೋತ್ಸವ ಆಚರಿಸಿ ಸರಕಾರಿ ಶಾಲಾ ಬಡ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಉಪನ್ಯಾಸಕ ದಯಾನಂದ ಕಿನ್ನಾಳ ಅವರು ಹೇಳಿದರು ಅವರು ಬೇವಿನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಹಪುರ ಗ್ರಾಮದ ಸರಕಾರಿ ಶಾಲಾ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದರು. ನಾನು ಕಲಿತ ಈ ಚಿಕ್ಕ ಶಾಲೆಯಲ್ಲಿ ಇವತ್ತು ಇಂಜಿನಿಯರ್ ಗಳು, ಡಾಕ್ಟರ್ ಗಳು, ಉಪನ್ಯಾಸಕರು, ಪತ್ರಕರ್ತರು, ವಕೀಲರಂತಹ ದೊಡ್ಡ ಹುದ್ದೆ ಧರಿಸಿದ್ದನ್ನು ನೋಡಿದರೆ ನಮ್ಮ ಸರಕಾರಿ ಶಾಲೆ ಬಗ್ಗೆ ಹೆಮ್ಮೆ ಅನಿಸುತಿದೆ ಎಂದರು. ಥಾಮಸ್ ಅಲ್ವಾ ಎಡಿಸನ್, ಅಂಬೇಡ್ಕರ್, ಅಬ್ದುಲ್ ಕಲಾಂ ಅವರ ಜೀವನ ಚರಿತ್ರೆಯನ್ನು ಮಕ್ಕಳಿಗೆ ಹೇಳಿದರು. ನಂತರ ಮಾತನಾಡಿದ ಮತ್ತೊರ್ವ ಶಿಕ್ಷಕ ಕಾಶಿ ವಿಶ್ವನಾಥ ನಾ ಕಲಿತ ನನ್ನೂರಶಾಲೆ ಮಕ್ಕಳು ತಂದೆ ತಾಯಿಗಳನ್ನು ವಿಮಾನಯಾನದಲ್ಲಿ ಕರೆದುಕೊಂಡು ಹೋಗುವಂತಹ ದೊಡ್ಡ ವ್ಯಕ್ತಿ ಗಳಾಗಿ ಎಂದರು. ಮತ್ತೊರ್ವ ಮುಖ್ಯ ಅತಿಥಿ ಪತ್ರಕರ್ತ ಮುದ್ದಪ್ಪ ಬೇವಿನಹಳ್ಳಿ ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಇಂತಹ ಪಠ್ಯತರ ಚಟುವಟಿಕೆಗಳನ್ನು ಇಷ್ಟೊಂದು ಅದ್ಭುತವಾಗಿ ಆಯೋಜಿಸಿ ಜನಮನಸೂರೆಗೊಳ್ಳುವಂತೆ ಮಾಡಿದ ಶಿಕ್ಷಕ ಶ್ರಮ ನಿಜ್ವಾಗ್ಲೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿ ಸೋಮಲಿಂಗಪ್ಪ ಬೆಣ್ಣಿ, ಮಾತನಾಡಿ ಮಕ್ಕಳು ಸದಾ ಉತ್ತಮ ಹವ್ಯಾಸಗಳನ್ನು ರೂಡಿಸಿಕೊಳ್ಳಿ ಎಂದು ಸಲಹೆ ನೀಡಿದರು ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತೇಜಸ್ ಆಯುರ್ವೇದ ಶಹಪುರ್ ಮತ್ತು ಗೀರೀಶ್ ಹಿರೇಮಠ, ನಿಂಗಜ್ಜ ಚೌದರಿ ಅವರಿಂದ ಪ್ರೋತ್ಸಾಹ ಧನ ಹಾಗೂ ಪಾರಿತೋಷಕಗಳನ್ನು ಉಡುಗೊರೆಯಾಗಿ ನೀಡಿದರು.
ಮುಂಬರುವ ವರ್ಷದಲ್ಲಿ ಮಕ್ಕಳ ವಿಮಾನಯಾನ ಪಯಣಕ್ಕೆ ನಾವು ಕೈಲಾದ ಸಹಾಯ ಮಾಡುತ್ತೇವೆ ನಮ್ಮ ಗ್ರಾಮದ ಮಕ್ಕಳನ್ನು ವಿಮಾನದಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋಗಬೇಕೆಂದು ಮನವಿ ಮಾಡಿದರು. ಕಾರ್ಯಕ್ರಮದ ಲ್ಲಿ ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಹುಲ್ಲೇಶ್ ಸಿಂದೋಗಿ, ಸಂಪನ್ಮೂಲ ವ್ಯಕ್ತಿಗಳಾಗಿ , ಮುಖ್ಯ ಅತಿಥಿಗಳಾಗಿ ನಾಗರಾಜ್ ಬಹಾದ್ದೂರಬಂಡಿ, ಮುರುಳಿದರ್ ಬಸಿರಾಳ, ಹಾಲಪ್ಪ ತೋಟದ್, ಶಿವಮೂರ್ತಿ ಮೂಲಿಮನಿ, ದೇವರಾಜ್ ಮೇಟಿ, ಮಲ್ಲಿಕಾರ್ಜುನ ಕುರಿ, ಕೆಂಚಪ್ಪ ಅಗಳಕೇರ, ನಾಗರಾಜ್ ಮಡ್ಡಿ, ವೀರಣ್ಣ ಕೋಮಲಾಪುರ, ಸುಮಂಗಲ ನಾಗಲಾಪುರ್, ಪದ್ಮಾವತಿ ದೊಡ್ಡಮನಿ, ರೇವತಿ ಗೋನಾಳ, ಗಂಗಮ್ಮ ಪೂಜಾರ್,ಲಕ್ಷ್ಮಿ ದೇವಿ ಚೌದರಿ, ಗೀತಾ ಪೂಜಾರ್, ಮುಖ್ಯ ಶಿಕ್ಷಕ ದೇವರಾಜ್ ಶಿಕ್ಷಕ ನಾಗರಾಜ್, ಶರಣ ಬಸಪ್ಪ, ರಘು, ಕೃಷ್ಣಪ್ಪ, ಜೇಬಾ, ಸೇರಿದಂತೆ ಶಾಲಾ ಮೇಲುಸ್ತುವಾರಿ ಸಮಿತಿ ಸದಸ್ಯರುಗಳು ಗ್ರಾಮದ ಹಿರಿಯರು, ಶಿಕ್ಷಣ ಪ್ರೇಮಿಗಳು, ಪಾಲಕ ಪೋಷಕ ವರ್ಗದವರು ಭಾಗಿಯಾಗಿದ್ದರು.ಫೋಟೋ- ಹುಲಿಗಿ ಶಹಪುರದಲ್ಲಿ ಜರುಗಿದ ಸರ್ಕಾರಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟನೆ ಮಾಡಿದ ಗಣ್ಯರು