ಮುಗದ ಗ್ರಾಮದ ಗಂಗವ್ವ ಅವರಾದಿ ಅವರ ಜಮೀನಿನಲ್ಲಿ ಆಡು ಮೇಯಿಸುತ್ತಿರುವಾಗ ಸಾಯಂಕಾಲ 6 ಗಂಟೆ ಸುಮಾರಿಗೆ ಸಿಡಿಲು ಬಡಿದು ಮುಗದ ಗ್ರಾಮದ ರಸೂಲ್ ಸಾಬ್ ತಂದೆ ಮಹಬೂಬ್ ಸಾಬ್ ಚಾಂದವಾಲೆ (63) ಎಂಬ ಹೆಸರಿನ ವ್ಯಕ್ತಿ ಮೃತಪಟ್ಟಿದ್ದರು.
ಇವರ ಕುಟುಂಬದವರಿಗೆ ಇಂದು ಬೆಳಿಗ್ಗೆ ಧಾರವಾಡದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು, ಪರಿಹಾರಧನದ ಚೆಕ್ ವಿವರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ, ಧಾರವಾಡ ತಹಶಿಲ್ದಾರ ಡಾ.ಡಿ.ಎಚ್.ಹೂಗಾರ ಅವರು ಇದ್ದರು.