ಸಂಭಾಜಿನಗರ 05: ಮಹಿಳಾ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಬಾವಿಗೆ ಬಿದ್ದ ಪರಿಣಾಮ ಏಳು ಮಂದಿ ಮಹಿಳಾ ಕಾರ್ಮಿಕರು ಮೃತಪಟ್ಟು ಹಲವರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ಸಂಭವಿಸಿದೆ.
ಅಲೆಗಾಂವ್ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ 7.30ರ ಸುಮಾರಿಗೆ ಅಪಘಾತ ಸಂಭವಿಸಿದೆ. ಟ್ರ್ಯಾಕ್ಟರ್‌ನಲ್ಲಿ ಕನಿಷ್ಠ 10 ಮಂದಿ ಪ್ರಯಾಣಿಸುತ್ತಿದ್ದು, ಹೊಲದಲ್ಲಿ ಅರಿಶಿನ ಕೊಯ್ಯಲು ಹೋಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಾವಿಗೆ ಬಿದ್ದಿದೆ, ಬಾವಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಇದ್ದುದರಿಂದ ಟ್ರ್ಯಾಕ್ಟರ್ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ ಪರಿಣಾಮ ಸಾವಿನ ಪ್ರಮಾಣ ಹೆಚ್ಚಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಮೃತರನ್ನು ತಾರಾಬಾಯಿ ಸತ್ವಾಜಿ ಜಾಧವ್ (35), ಧ್ರುಪತ ಸತ್ವಾಜಿ ಜಾಧವ್ (18), ಸರಸ್ವತಿ ಲಖನ್ ಬುರಾದ್ (25), ಸಿಮ್ರಾನ್ ಸಂತೋಷ ಕಾಂಬಳೆ (18), ಚೈತ್ರಾಬಾಯಿ ಮಾಧವ್ ಪರ್ಧೆ (45), ಜ್ಯೋತಿ ಇರಬಾಜಿ ಸರೋದೆ (35), ಸಪ್ನಾ ತುಕಾರಾಂ ರಾವುತ್ (25) ಎಂದು ಗುರುತಿಸಲಾಗಿದೆ.