ವಿದ್ಯಾರ್ಥಿಗಳಿಗೆ ಸರಕಾರಿ ಶೈಕ್ಷಣಿಕ ಯೋಜನೆಗಳ ಅರಿವು ಅಗತ್ಯ

ಮೂಡಲಗಿ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ಶೈಕ್ಷಣಿಕ ಯೋಜನೆಗಳ ಅರಿವು ಹೊಂದುವುದು ಅವಶ್ಯವಿದ್ದು ಇಂದು ಸಮಾಜದಲ್ಲಿ ಕಡೆಗಣಿಸಲ್ಪಟ ವರ್ಗಗಳು ಸಹಿತ ಶಿಕ್ಷಣ ರಂಗದಲ್ಲಿ ಸಂಪೂರ್ಣ ತೊಡಗಿಕೊಳ್ಳುವ ಮತ್ತು ಆರ್ಥಿಕ ರಂಗದಲ್ಲಿ ಬಲಗೊಳ್ಳುವ ಉದ್ದೇಶದಿಂದ ಸರಕಾರ ಉಚಿತ ಶಿಕ್ಷಣದ ಜೊತೆಗ ಎಸ್.ಸಿ., ಎಸ್.ಟಿ. ಸಮುದಾಯಕ್ಕೆ ಪ್ರತ್ಯೇಕ ವಸತಿನಿಲಯಗಳು  ಮತ್ತು ಊಟದ ವ್ಯವಸ್ಥೆ, ಶಿಷ್ಯವೇತನ, ಪ್ರತಿಭಾ ಪ್ರೋತ್ಸಾಹಧನ ಯೋಜನೆಗಳನ್ನು  ಅನುಷ್ಠಾನಗೊಳಿಸಿದೆ ಇದರ ಲಾಭವನ್ನು ಪ್ರತಿಯೊಬ್ಬ ವಿದ್ಯಾರ್ಥಿ ಶೈಕ್ಷಣಿಕ ಅರ್ಹತೆಗಳಲ್ಲಿ ಬಳಿಸಿಕೊಳ್ಳುವುದು ಅವಶ್ಯವಿದೆ ಎಂದು ಮೂಡಲಗಿಯ ಸಮಾಜಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ವಸತಿ ನಿಲಯದ ಮೇಲ್ವಿಚಾರಕ  ಗುರುರಾಜ ಕೊಪ್ಪದ ಹೇಳಿದರು.  

ಅವರು ಸ್ಥಳೀಯ ರೂರಲ್ ಡೆವಲಪ್ಮೆಂಟ್ ಸೊಸೈಟಿಯ ಕಲಾ, ವಾಣಿಜ್ಯ, ಸಮಾಜಕಾರ್ಯ, ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಘಟಕದ ಅಡಿಯಲ್ಲಿ  ಹಮ್ಮಿಕೊಂಡಿರುವ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ ಸಮಾಜ ಕಲ್ಯಾಣ ಇಲಾಖೆಯಲ್ಲಿ ಎಸ್.ಸಿ., ಎಸ್.ಟಿ. ಸಮುದಾಯಕ್ಕೆ ಸೇರಿದ ಮಕ್ಕಳಿಗೆ ಹಾಸ್ಟೇಲ್ ಜೊತೆಗೆ ವಿದ್ಯಾರ್ಥಿ ವೇತನ ಮತ್ತು ಪ್ರೋತ್ಸಾಹ ಬಹುಮಾನಧನ ಹಾಗೂ ತರಬೇತಿ ಕೋರ್ಸಗಳನ್ನು ಸಂಘಟಿಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅಧ್ಯಯನ ಮುಗಿದ ನಂತರ ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ಸಹಾಯ ಸಹಿತ ನೀಡುತ್ತಿದೆ ಇಂತಹ ವಿಷಯಗಳ ಅರಿವು ಪ್ರತಿಯೊಬ್ಬ ವಿದ್ಯಾರ್ಥಿ  ಹೊಂದುವುದು ಅವಶ್ಯವಿದೆ ಎಂದರು. 

ಉಪನ್ಯಾಸಕಿ ಸುನಂದಾ ಅಂಗಡಿ ಮಾತನಾಡಿ ಸರಕಾರದ ಯೋಜನೆಗಳು ಪ್ರತಿಭಾವಂತ ವಿದ್ಯಾರ್ಥಿಗಳ ಅಧ್ಯಯನಕ್ಕೆ ಬಹಳಷ್ಟು ಪ್ರಯೋಜನಕಾರಿಯಾಗಿದ್ದು ಅದರ ಸದ್ಬಳಿಕೆ ಮಾಡಿಕೊಂಡ ಅನೇಕ ವಿದ್ಯಾರ್ಥಿಗಳು ಪ್ರತಿಭಾಶೀಲತೆ ವ್ಯಕ್ತಿತ್ವ ಬೆಳಸಿಕೊಳ್ಳುವಲ್ಲಿ ಸರಕಾರಿ ಯೋಜನೆಗಳು ಮಹತ್ವ ಪಡೆದುಕೊಂಡಿವೆ ಎಂದರು.

  ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಕಾಲೇಜು ಪ್ರಾಚಾರ್ಯ ಸತ್ಯೆಪ್ಪಾ ಗೋಟೂರೆ ವಹಿಸಿಕೊಂಡು ಮಾತನಾಡಿ ಸರಕಾರ ನಮ್ಮ ದೇಶದ ಶಿಕ್ಷಣ ರಂಗದ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದು ಅದರಲ್ಲಿ ಎಸ್.ಸಿ., ಎಸ್.ಟಿ. ಸಮುದಾಯಕ್ಕೆ ಹೆಚ್ಚಿನ ಆಧ್ಯತೆ ನೀಡಿ ಸಮಾಜದ ಮುಖ್ಯವಾಹಿನಿಗೆ ತರಲು ಅನೇಕ ಶೈಕ್ಷಣಿಕ ಯೋಜನೆಗಳನ್ನು ರೂಪಿಸಿದೆ ಅದರ ಪ್ರಯೋಜನ ವಿದ್ಯಾರ್ಥಿಗಳು ಪಡೆದುಕೊಳ್ಳುವುದು ಅವಶ್ಯವಿದೆ ಎಂದರು. 

ಕಾರ್ಯಕ್ರಮದಲ್ಲಿ ವಸತಿ ನಿಲಯದ ಪಿ.ಎಸ್. ಮಾಳಗಿ. ಘಟಕಾಧಿಕಾರಿ ಮಲ್ಲಪ್ಪ ಪಾಟೀಲ ಉಪನ್ಯಾಸಕರಾದ ಸುನಿತಾ ಸುಳ್ಳನ್ನವರ, ಶೀಲಾ ಶಿರಗನ್ನವರ ರಾಜೇಂದ್ರ ಪಾಟೀಲ ಮಲ್ಲಿಕಾರ್ಜುನ ಬಾಡಗಂಡಿ ಮತ್ತಿತರರು ಭಾಗವಹಿಸಿದ್ದರು.

ಸತ್ಯೆಪ್ಪಾ ಮುಗಳಖೋಡ ನಿರೂಪಿಸಿದರು ವಾಣಿ ಜೋಗನ್ನವರ ಸ್ವಾಗತಿಸಿದರು, ಸಾಗರ ಮಾರಾಪೂರೆ ವಂದಿಸಿದರು.