ಲೋಕದರ್ಶನ ವರದಿ
ಯಲಬುರ್ಗಾ 12: ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಸಮಯದಲ್ಲಿ ಅತ್ಯಂತ ಶ್ರದ್ಧೆ ಹಾಗೂ ಕಠಿಣ ಪರಿಶ್ರಮದಿಂದ ಓದಿದಾಗ ಮಾತ್ರ ನೀವು ಅಂದುಕೊಂಡ ಗುರಿಯನ್ನು ಮುಟ್ಟಲು ಸಾಧ್ಯವಾಗುತ್ತದೆ ಎಂದು ಪ್ರಾಚಾರ್ಯ ಡಾ, ಶಿವರಾಜ ಗುರಿಕಾರ ಹೇಳಿದರು.
ಪಟ್ಟಣದ ಸರಕಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಉದ್ಯೋಗ ಮಾಹಿತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಒಂದು ಯುಗವು ಅತ್ಯಂತ ತಂತ್ರಜ್ಞಾನ ಹಾಗೂ ಸ್ಪರ್ಧಾತ್ಮಕ ಯುಗವಾಗಿದ್ದು ಇಲ್ಲಿ ಒಂದೊಂದು ಹುದ್ದೆಗೂ ಅತೀಯಾದ ಸ್ಪರ್ಧೆ ಏರ್ಪಡುತ್ತಿದೆ ಆದ್ದರಿಂದ ನೀವು ಇಗಿನಿಂದಲೇ ಉದ್ಯೋಗದ ಕಡೆಗೆ ಗಮನ ನೀಡಬೇಕು ಅಂದಾಗ ಮಾತ್ರ ನೀವು ಅಂದುಕೊಂಡ ಗುರಿಯನ್ನು ಮುಟ್ಟಲು ಸಾಧ್ಯವಾಗುತ್ತದೆ ಎಂದರು.
ಕೊಪ್ಪಳ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಚಾರ್ಯ ಹಾಗೂ ಕೌಶಾಲ್ಯಾಭಿವೃದ್ಧಿ ಅಧ್ಯಕ್ಷ ಗವಿಶಂಕರ ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆದು ಉದ್ಯೋಗಕ್ಕಾಗಿ ಅಲೆಯಬಾರದು ಎನ್ನುವ ಉದ್ದೇಶದಿಂದ ಇಂದು ಈ ಒಂದು ಉದ್ಯೋಗ ಮಾಹಿತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಮುಂದಿನ ನಿಮ್ಮ ಜೀವನದ ಅನುಕೂಲಕ್ಕಾಗಿ ಉದ್ಯೋಗ ಅತ್ಯಂತ ಅವಶ್ಯವಾಗಿದೆ ಅದರಿಂದ ನಿಮ್ಮ ಕುಟುಂಬವು ಚನ್ನಾಗಿ ಸಾಗಲು ಅನುಕೂಲವಾಗುತ್ತದೆ ಆದ್ದರಿಂದ ಇಗಿನಿಂದಲೇ ನೀವು ಕಠಿಣ ಅಭ್ಯಾಸದಲ್ಲಿ ತೊಡಗಿಕೊಳ್ಳಬೇಕು ಅಂದಾಗ ಮಾತ್ರ ಅದು ಸಾದ್ಯಾವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಚಾರ್ಯ ಚನ್ನಬಸಪ್ಪ ಅಂಗಡಿ, ಉಪನ್ಯಾಸಕಾರದ ಎಚ್.ಎಮ್.ಗುಡಿಹಿಂದಲ್, ಎ.ಬಿ.ಕೆಂಚರೆಡ್ಡಿ, ರಾಜಶೇಖರ ಪಾಟೀಲ್, ವಾಯ್.ಬಿ.ಅಂಗಡಿ, ಇಬ್ರಾಹಿಂ, ವಿರೇಶ ಗಜೇಂದ್ರಗಡ, ಎಂ ಎಂ ಹುಕುಮನಾಳ, ವಿನೋದ, ಪತ್ರಕರ್ತರಾದ ಶಿವಮೂರ್ತಿ ಇಟಗಿ, ಮಲ್ಲು ಮಾಟರಂಗಿ ಸೇರಿದಂತೆ ಇನ್ನೀತರರು ಪಾಲ್ಗೊಂಡಿದ್ದರು.