ರಚನಾತ್ಮಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು 20 ರಂದು ಗುರುವಾರ ಸಾಯಂಕಾಲ 5 ಗಂಟೆಗೆ ಆಯೋಜನೆ ಮಾಡಲಾಗಿದೆ : ರವಿ ಪೂಜಾರಿ
ಅಥಣಿ 18: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಮ್ಮ ಅಭಿಮಾನಿ ಬಳಗದಿಂದ 42 ನೆಯ ಹುಟ್ಟುಹಬ್ಬದ ನಿಮಿತ್ಯ ಹತ್ತು ಹಲವು ಸಾಮಾಜಿಕ, ರಚನಾತ್ಮಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಇದೇ ಮಾರ್ಚ್ 20 ರಂದು ಗುರುವಾರ ಸಾಯಂಕಾಲ 5 ಗಂಟೆಗೆ ಆಯೋಜನೆ ಮಾಡಲಾಗಿದೆ ಎಂದು ಯುವ ಉದ್ಯಮಿ ಹಾಗೂ ಆರ ಎಸ್ ಪಿ ಸಮೂಹ ಸಂಸ್ಥೆಗಳ ಅಧ್ಯಕ್ಷ ರವಿ ಪೂಜಾರಿ ಹೇಳಿದರು ಅವರು ಅಥಣಿ ಪಟ್ಟಣದ ಆರ್ ಎಸ್ ಪಿ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಕಾರ್ಯಕ್ರಮಕ್ಕೆ ವೇದಮೂರ್ತಿ ಸಿದ್ದರಾಮ ಅಜ್ಜನವರು ಮೂಲ ಸಂಸ್ಥಾನ ಮಠ ಸುಕ್ಷೇತ್ರ ಬಬಲಾದಿ ಮನಿಪ್ರ ಮರುಳಸಿದ್ದ ಸ್ವಾಮಿಗಳು ಸುಕ್ಷೇತ್ರ ಶೆಟ್ಟರ ಮಠ ಅಥಣಿ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಮಾಜಿ ಶಾಸಕ ಮಹೇಶ ಕುಮಟಳ್ಳಿ ಕಾಗವಾಡ ಮಾಜಿ ಶಾಸಕ ಶ್ರೀಮಂತ ಪಾಟೀಲ ಅರವಿಂದ ದೇಶಪಾಂಡೆ ಮಾಳು ನಿಪನಾಳ ಮಲ್ಲು ಜಮಖಂಡಿ ನಿಂಗರಾಜ್ ಸಿಂಗಾಡಿ ತೃಪ್ತಿ ಧಾರವಾಡ ರೇಣುಕಾ ಸಿದ್ದು ದಡೆಡ್ ರತ್ನಾಪುರ ಚಲನಚಿತ್ರದ ನಟ ಹಾಗೂ ನಿರ್ದೇಶಕ ಹಾಲೇಶ್ ಲೋಕೋರ್ ಸೇರಿದಂತೆ ಹಲವಾರು ಕಲಾವಿದರು ಹಾಗೂ ಅಭಿಮಾನಿ ಬಳಗದವರು ಪಾಲ್ಗೋಳ್ಳುವರು ಅದೇರೀತಿ ಈ ಹುಟ್ಟುಹಬ್ಬ ಪ್ರತಿ ವರ್ಷ ಆಚರಣೆ ಮಾಡಿಕೊಂಡು ಬಂದಿದ್ದು ಇದನ್ನು ನಾವು ಮುಂದುವರೆಸಿಕೊಂಡು ಹೋಗಬೇಕೇಂದು ಅಭಿಮಾನಿಗಳ ಆಸೆಯಾಗಿದ್ದರಿಂದ ನಾವು ಈ ಕಾರ್ಯಕ್ರಮ ಮಾಡುತ್ತಿದ್ದೆವೆ ಎಂದರುಈ ವೇಳೆ ಆನಂದ ಹಡಿಗಿನಾಳ ಪ್ರಕಾಶ ಹಿಡಕಲ ಸಿದ್ದಪ್ಪ ಕುಂಬಾರ ರಮೇಶ ಪುಜಾರಿ ಹಾಲೇಶ ಲೋಕುರ ಬಾಳೇಶ ದುರಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.