ಲೋಕದರ್ಶನ ವರದಿ
ಯಲಬುರ್ಗಾ 08: ವಿದ್ಯೆ ಯಾರ ಸ್ವತ್ತು ಅಲ್ಲಾ ಯಾರು ಕಷ್ಟ ಪಟ್ಟು ಓದುತ್ತಾರೋ ಅವರಿಗೆ ವಿದ್ಯೆ ಒಲಿಯುತ್ತದೆ ಎಂದು ಲಕ್ಷ್ಮೀ ನಾಯಾಯಣ ಹೇಳಿದರು.
ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು,
ಸರಕಾರಿ ಶಾಲೆ ಹಾಗೂ ಕಾಲೇಜು ಎಂದರೆ ಅಸಡ್ಡೆವಾಗಿ ಕಾಣುವ ಜನರಿದ್ದಾರೆ ಸರಕಾರಿ ಶಾಲೆ ಕಾಲೇಜುಗಳು ಯಾವ ಖಾಸಗಿ ಶಾಲೆ ಕಾಲೇಜಿಗಿಂತ ಕಡಮೆ ಇಲ್ಲದಂತೆ ಉತ್ತಮ ಶಿಕ್ಷಣ ನೀಡುತ್ತಿವೆ ಅದರಂತೆ ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕಳುಹಿಸಿ ಹಾಗೂ ನಿಮ್ಮ ಮಕ್ಕಳ ವಿದ್ಯಾಭ್ಯಾಸ ಮಾಡುತ್ತಿದ್ದಾರೋ ಇಲ್ಲವೋ ಎನ್ನುವದರ ಬಗ್ಗೆ ಗಮನವಿರಲಿ ಹಾಗೂ ವಿದ್ಯಾರ್ಥಿಗಳು ಮೋಬೈಲ್ಗಳಿಂದ ದೂರವಿರಿ ಹೆಚ್ಚು ಪುಸ್ತಕದ ಜೋತೆಗೆ ಸಮಯವನ್ನು ಕಳೆಯಬೇಕು ಅದರಿಂದ ನಿಮ್ಮ ಜೀವನ ಸುಂದರವಾಗುತ್ತದೆ ಎಂದರು.
ಕೆಎಎಸ್ ಉತ್ತೀರ್ಣ ಹೊಂದಿದ ಗುರುರಾಜ ಛಲವಾದಿ ಮಾತನಾಡಿ ವಿದ್ಯಾಥರ್ಿಗಳು ಸತತ ಪರಿಶ್ರಮ ಹಾಗೂ ನಿರಂತರ ಅಧ್ಯಯನದಿಂದ ಮಾತ್ರ ಏನನ್ನಾದರು ಸಾಧಿಸಬಹುದು ಆದ್ದರಿಂದ ನಿಮ್ಮ ವಿದ್ಯಾಥರ್ಿ ಜೀವನ ಅತ್ಯಮೂಲ್ಯವಾದದು ಅದನ್ನು ಕೆಟ್ಟ ಚಟಗಳಿಗೆ ಬಲಿಯಾಗಿ ಹಾಳು ಮಾಡಿಕೊಳ್ಳದೆ ಓದಿಗಾಗಿ ಉಪಯೋಗಿಸಿರಿ ಅಂದಾಗ ನೀವು ಜೀವನದಲ್ಲಿ ಮುಂದೆ ಬರಲು ಸಾದ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾದ್ಯಕ್ಷ ಶಿವನಗೌಡ್ರ ಬನ್ನಪ್ಪಗೌಡ್ರ, ಪ,ಪೂ,ಶಿ,ಇ,ಕೊಪ್ಪಳದ ಉಪನಿರ್ದೇಶಕರಾದ ಎಲ್ ಜಿ ರಾಟಿಮನಿ, ಪ್ರಾಚಾರ್ಯರಾದ ರಾಜಶೇಖರ ಪಾಟೀಲ, ವಿಶ್ರಾಂತ ಉಪನ್ಯಾಸಕ ರುದ್ರಯ್ಯ ಸರಗಣಾಚಾರ, ಅಭಿವೃದ್ಧಿ ಸಮಿತಿ ಸದಸ್ಯರಾದ ಶರಣಪ್ಪ ಜಾಲಗಾರ, ಅಕ್ಕಮಹಾದೇವಿ ಭೀಮಣ್ಣ ಹವಳಿ, ಪಪಂ ಸದಸ್ಯರಾದ ವಸಂತಕುಮಾರ ಭಾವಿಮನಿ, ಮುಖಂಡರಾದ ಈರಪ್ಪ ಬಣಕಾರ, ಶಂಕರ್ ಭಾವಿಮನಿ, ಸೇರಿದಂತೆ ಅನೇಕರು ಹಾಜರಿದ್ದರು.