ರಾಜ್ಶ ಮಟ್ಟದ ಕಥಾ ಸ್ಫರ್ಧೆ: ಶಿವಾನಿ ಪ್ರಥಮ ಸ್ಥಾನ
ಸವಣೂರ 02: ತಾಲ್ಲೂಕಿನ ಚಳ್ಳಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೂರನೇ ತರಗತಿ ವಿದ್ಶಾರ್ಥಿ ಕು.ಶಿವಾನಿ ಶಿವಶಂಕರಸ್ವಾಮಿ ಹಿರೇಮಠ ಕರ್ನಾಟಕ ರಾಜ್ಶ ಶಿಕ್ಷಕರ ಪ್ರತಿಭಾ ಪರಿಷತ್ (ರಿ)ಮೈಸೂರಿನ ನಲಿ ಕಲಿ ಶಿಕ್ಷಕರ ಸಮಿತಿ ವತಿಯಿಂದ ಹಮ್ಮಿಕೊಂಡ ಚಿತ್ರಕೊಂದು ಕಥೆ ರಾಜ್ಶ ಮಟ್ಟದ ಶಾರ್ಟ್ ವಿಡಿಯೋ ಕಥಾ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಶಾಲೆಗೆ ಹಾಗೂ ಊರಿಗೆ ಕೀರ್ತಿ ತಂದಿದ್ದರಿಂದ ಶಾಲಾ ಶಿಕ್ಷಕರು ಹಾಗೂ ಗ್ರಾಮಸ್ಥರು ಎಸ್‌ಡಿಎಮ್‌ಸಿ ಅವರು ಸನ್ಮಾನಿಸಿ ಗೌರವಿಸಿದರು.