ಲೋಕದರ್ಶನ ವರದಿ
ಸಂಕೇಶ್ವರ 19: ಸ್ಥಳೀಯ ದು.ವಿ.ಸಂ.ಸಂಘದ, ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಇತ್ತೀಚೆಗೆ ಮೂಡಲಗಿಯ ಎಸ್.ಎಸ್.ಆರ್. ಪಿಯು ಕಾಲೇಜಿನಲ್ಲಿ ಜರುಗಿದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ 4x100 ರಿಲೆ ಸ್ಪರ್ದೇಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಶಿವಮೊಗ್ಗದಲ್ಲಿ ಜರುಗಲಿರುವ ರಾಜ್ಯಮಟ್ಟದ 4x100 ರಿಲೆ ಸ್ಪರ್ದೇಯಲ್ಲಿ ಭಾಗವಹಿಸಲಿರುವ ವಿದ್ಯಾರ್ಥಿಗಳಾದ ಬಾಳಗೌಡಾ ಶೆಟ್ಟಿಮನಿ, ದತ್ತಾ ಮನವಡ್ಡರ, ದಯಾನಂದ ರಬಕವಿ ಮತ್ತು ಸುನೀಲ ಸನದಿ ಅವರನ್ನು ಸಂಘದ ಕಾಯಾಧ್ಯಕ್ಷರಾದ ಎ.ಬಿ. ಪಾಟೀಲ, ಉಪಾಧ್ಯಕ್ಷರಾದ ಜಿ.ಎಸ್.ಇಂಡಿ, ಆಡಳಿತ ಮಂಡಳಿಯ ಎಲ್ಲ ಸದಸ್ಯರು, ಸ್ಥಾನಿಕ ನಿಯಂತ್ರಣ ಸಮೀತಿಯ ಅಧ್ಯಕ್ಷರಾದ ವಿನಯಕುಮಾರ ಪಾಟೀಲ, ಕಾರ್ಯದರ್ಶಿಗಳಾದ ಜಿ.ಸಿ.ಕೊಟಗಿ, ಕಾರ್ಯನಿರ್ವಾಹಕರಾದ ಡಾ. ಬಿ.ಎ.ಪೂಜಾರಿ, ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಸ್.ಯು.ಯರಗಟ್ಟಿ, ಕ್ರೀಡಾ ಸಮೀತಿಯ ಅಧ್ಯಕ್ಷರಾದ ಝಡ್.ಡಿ.ಮುಲ್ತಾನಿ, ದೈಹಿಕ ನಿರ್ದೇಶಕರಾದ ವಿನಾಯಕ ಕದಮ ಹಾಗೂ ಮಹಾವಿದ್ಯಾಲಯದ ಎಲ್ಲ ಸಿಬ್ಬಂದಿಯವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.