ಲೋಕದರ್ಶನ ವರದಿ
ಕುಕನೂರು 24: ಆಯುಷ್ಮಾನ ಭಾರತ-ಆರೋಗ್ಯ ಕನರ್ಾಟಕ ಈ ಎರಡು ಯೋಜನೆಗಳು ರಾಜ್ಯದ ಬಡವರ,ಮದ್ಯಮ ವರ್ಗದವರ ಕುಟುಂಬಸ್ಥರ ಆರೋಗ್ಯ ರಕ್ಷಣೆ ಒದಗಿಸುವ ವಿಶಿಷ್ಠ ಯೋಜನೆಯಾಗಿವೆ ಎಂದು ಜಿಲ್ಲಾ ಉಪಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ ಹೇಳಿದರು
ಪಟ್ಟಣದ ವಿದ್ಯಾನಂದ ಗುರುಕುಲ ಪ.ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಆಯುಷ್ಮಾನ ಭಾರತ-ಆರೋಗ್ಯ ಕರ್ನಾಟಕ ಹಾಗೂ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಯೋಜನೆಗಳ ಬಗ್ಗೆ ಕಾಲೇಜು ವಿದ್ಯಾಥರ್ಿಗಳಿಗೆ ರಸ ಪ್ರಶ್ನೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು,ಒಂದೇ ಸೂರಿನಡಿ ಎಲ್ಲಾ ಹಂತಗಳ ಆರೋಗ್ಯ ಸೇವೆಗಳು ಲಭ್ಯ.ಬಿಪಿಎಲ್ ಕಾರ್ಡ ಹೊಂದಿರುವವರಿಗೆ ಒಂದು ವರ್ಷಕ್ಕೆ ಒಂದು ಕುಟುಂಬಕ್ಕೆ ರೂ.5 ಲಕ್ಷದವರೆಗೂ ಚಿಕಿತ್ಸೆ ಒದಗಿಸಲಾಗುವದು ಮತ್ತು ಎಪಿಎಲ್ ಕಾರ್ಡ ಹೊಂದಿರುವವರಿಗೆ ಒಂದು ವರ್ಷಕ್ಕೆ ಒಂದು ಕುಟುಂಬಕ್ಕೆ ರೂ.1 ಲಕ್ಷ 50 ಸಾವಿರ ರೂಪಾಯಿವರಗೆ ಚಿಕಿತ್ಸೆ ಒದಗಿಸಲಾಗುವದು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸರಕಾರಿ ಆಸ್ಪತ್ರೆ,ತಾಲೂಕಾ ಆಸ್ಪತ್ರೆ,ಜಿಲ್ಲಾ ಆಸ್ಪತ್ರೆಗಳಲ್ಲಿ ಆರೋಗ್ಯ ಮಿತ್ರರನ್ನೂ ಸಂಪಕರ್ಿಸಿ ಯೋಜನೆ ಸದುಪಯೋಗ ಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕಿ ಹರಿಪ್ರೀಯ ಕುಲಕಣರ್ಿ ಮಾತನಾಡಿ,ಆರೋಗ್ಯವೇ ಭಾಗ್ಯ ಆರೋಗ್ಯದಿಂದ ಇದ್ದರೆ ಎನೆಲ್ಲಾ ಸಾದಿಸಬವುದು ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು ಆರೋಗ್ಯವಂತ ಯುವ ಪ್ರಜೆಯಾಗಿ ಬಾಳಬೇಕು ಸರಕಾರದ ಯೋಜನೆಗಳನ್ನು ಆರೋಗ್ಯ ಇಲಾಖೆಯವರು ತಿಳಿಸಿದ ಮಾಹಿತಿಯನ್ನು ಸಾರ್ವಜನಿಕರಿಗೆ ಮುಟ್ಟಿಸುವಂತ ಕೆಲಸ ವಿದ್ಯಾರ್ಥಿ ಗಳು ಮಾಡಬೇಕೆಂದರು.
ಸಂದರ್ಭದಲ್ಲಿ ವಿವಿಧ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ರಸ ಪ್ರಶ್ನೆ ಮೂಲಕ ವಿದ್ಯಾಥರ್ಿಗಳಿಗೆ ಜಾಗೃತಿ ಮೂಡಿಸಲಾಯಿತು.ಉಪನ್ಯಾಸಕರಾದ ರಾಮಣ್ಣ ಎಸ್,ಆರ್.ಕೆ ಪಾಟೀಲ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ. ಬೆನ್ನೂರ, ಹಿರಿಯ ಆರೋಗ್ಯ ಸಹಾಯಕ ಚನ್ನಬಸಯ್ಯ ಸರಗಣಾಚಾರ, ಆರೋಗ್ಯ ಮಿತ್ರ ಗೋವಿಂದರಾವ್ ಮರಾಠಿ,ಆಪ್ತ ಸಮಾಲೋಚಕ ಕಳಕಪ್ಪ ಬಂಡಿ ಹಾಗೂ ಮತ್ತಿತರರಿದ್ದರು