ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭ: ವಿಷ್ಣೂ ಲಾತೂರ

ಮೂಡಲಗಿ:  ಅಖಿಲ ಕರ್ನಾಟಕ ಉಪ್ಪಾರ ಮಹಾಸಭಾದಿಂದ ಡಿ. 15 ರಂದು ಬೆಂಗಳೂರಿನ ಶಿಕ್ಷಕರ ಸದನದಲ್ಲಿ ರಾಜ್ಯ ಮಟ್ಟದ ಉಪ್ಪಾರ ಸಮಾಜದ ನೌಕರರ, ವೃತ್ತಿಪರರ, ಮತ್ತು ಮಹಿಳೆಯರ ಬೃಹತ್ ಸಮಾವೇಶ ಹಾಗೂ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭ ಆಯೋಜಿಸಲಾಗಿದೆ ಎಂದು ಮಹಾ ಸಭಾದ ಅಧ್ಯಕ್ಷ ವಿಷ್ಣೂ ಲಾತೂರ ತಿಳಿಸಿದ್ದಾರೆ.

ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಕನರ್ಾಟಕ ರಾಜ್ಯದಲ್ಲಿ ಅತ್ಯಂತ ಹಿಂದೂಳಿದ ಉಪ್ಪಾರ ಸಮಾಜವು ರಾಜ್ಯದಲ್ಲಿ 35ರಿಂದ 40 ಲಕ್ಷ ಜನ ಸಂಖ್ಯೆ ಹೊಂದಿರುತ್ತದೆ. ಈ ಸಮಾಜಕ್ಕೆ ಆರ್ಥಿಕವಾಗಿ,ಸಾಮಾಜಿಕವಾಗಿ,ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಸಮಾನವಾದ ಮತ್ತು ಸರಿಯಾದ ನ್ಯಾಯ ದೊರಕಿಸಲು ಅನೇಕ ಹಿರಿಯರು, ಪೂಜ್ಯರು ಮತ್ತು ಅನೇಕ ಸಂಘಟನೆಗಳಿಂದ ಸುಮಾರು ದಶಕಗಳಿಂದ ಹೋರಾಟ ನಡೆಸಿಕೊಂಡು ಬಂದಿರುತ್ತದೆ. ಆದರೆ ಫಲಿತಾಂಶ ಮಾತ್ರ ಬಹಳ ವಿಳಂಭ ಈ ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳು ಉಪ್ಪಾರ ಸಮಾಜವನ್ನು ಕೇವಲ ಮತದಾನ ಸಮಯದಲ್ಲಿ ಬಳಸಿಕೊಂಡು ನಂತರ ಅಧಿಕಾರಕ್ಕೆ ಬಂದ  ಮೇಲೆ ತಿರಸ್ಕರಿಸುತ್ತಾ ಬಂದಿರುತ್ತಾರೆ.

   ಉಪ್ಪಾರ ಸಮಾಜದಲ್ಲಿ  ಬೆರಳಣಿಕೆಯಷ್ಟು ಶಾಸಕರು, ವಿಧಾನ ಪರಿಷತ್ತು ಸದಸ್ಯರು, ನಿಗಮ ಮಂಡಳಿ, ಜಿಲ್ಲಾ ಪಂಚಾಯತ, ತಾಲೂಕಾ ಪಂಚಾಯತ, ಪುರಸಭೆ, ನಗರಸಭೆ ಹಾಗೂ ಸಣ್ಣ ಪುಟ್ಟ ಹುದ್ದೆ ಸ್ವೀಕರಿಸುವುದನ್ನು ಬಿಟ್ಟರೆ ಉನ್ನತ ಮಟ್ಟದ ಅಧಿಕಾರವನ್ನು ಯಾವುದೇ ರಾಜಕೀಯ ಪಕ್ಷಗಳು  ಒದಗಿಸಿರುವುದಿಲ್ಲ. 

ನೌಕರರು ಮತ್ತು ಮಹಿಳೆಯರ ವಿಚಾರಕ್ಕೆ ಬಂದರೆ ನಮ್ಮ ರಾಜ್ಯದಲ್ಲಿ ಹಲವಾರು ಇಲಾಖೆಗಳಲ್ಲಿ ಉನ್ನತ ಮಟ್ಟದ ಅಧಿಕಾರಿಗಳಿಂದ ಹಿಡಿದು ಸಿಪಾಯಿ ಹುದ್ದೆಯ ಮಟ್ಟದ ನೌಕರರಿಗೆ ಏನೇ ತೊಂದರೆ ಬಂದರೂ ಸಹ ಯಾರು ಕೇಳುವವರಿಲ್ಲ. ನಮ್ಮ ಸಮಾಜದ ಮಹಿಳೆಯರು ಸಹ ಆಥರ್ಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಅತ್ಯಂತ ಹಿಂದೂಳಿದಿರುತ್ತಾರೆ. ಯಾವ ರಂಗದಲ್ಲಿಯೂ ಸಹ ಈ ಮಹಿಳೆಯರಿಗೆ ಉನ್ನತ ಮಟ್ಟದ ಸ್ಥಾನಮಾನ ಸಿಕ್ಕಿರುವುದಿಲ್ಲ. 

ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರನ್ನು ಗುರುತಿಸಿ ಗೌರವಿಸುವ ಕಾರ್ಯವು ಸಹ ನಡೆದಿರುವುದಿಲ್ಲ ಯಾಕೆಂದರೆ ಈ ಸಮಾಜದ ಮಹಿಳೆಯರಲ್ಲಿ ಸಂಘಟನೆಯ ಶಕ್ತಿ ಪ್ರದರ್ಶವಾಗಿರುವುದಿಲ್ಲ ಹೀಗೆ ಹಲವಾರು ಸಮಸ್ಯೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಈ ಎಲ್ಲಾ ಸಮಸ್ಯೆಗಳ ಕುರಿತು ಒಂದು ಬೃಹತ್ ಸಭೆ ಏರ್ಪಡಿಸಿ ಸರಕಾರದ ಮುಂದೆ ಉಪ್ಪಾರ ಸಮಾಜದ ನೌಕರರಿಗೆ ಹಾಗೂ ಮಹಿಳೆಯರಿಗರ ಆಗುತ್ತಿರುವ ಅನ್ಯಾಯ ಮತ್ತು ದೌರ್ಜನ್ಯವನ್ನು ಅದರೊಂದಿಗೆ ಇನ್ನಿತರ ಸಮಸ್ಯೆಗಳನ್ನು ತೋರ್ಪಡಿಸಿ ಅವುಗಳಿಗೆ ಸೂಕ್ತ  ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ  ರಾಜ್ಯ ಉಪ್ಪಾರ ಸಮಾಜ ಬಾಂಧವರು ಈ ಕಾರ್ಯಕ್ರಮಕ್ಕೆ ಆಗಮಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೆನೆ ಎಂದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಅರುಣ ಸವತಿಕಾಯಿ, ಶಂಭುಲಿಂಗ ಮುಕ್ಕಣ್ಣನವರ, ಗುರು ಗಂಗನ್ನವರ, ಸುಭಾಸ ಗೊಡ್ಯಾಗೋಳ ಉಪಸ್ಥಿತರಿದ್ದರು.