ಲೋಕದರ್ಶನ ವರದಿ
ಮುದ್ದೇಬಿಹಾಳ18: ಪಟ್ಟಣದಲ್ಲಿ ನಡೆಯುತ್ತಿರುವ ರಾಜ್ಯ ಹೆದ್ದಾರಿಯನ್ನು ಅಗಲೀಕರಣಗೊಳಿಸಬೇಕು ಎಂದು ಆಗ್ರಹಿಸಿ ತಾಲೂಕು ವಿಕಲಚೇತನರ ಒಕ್ಕೂಟ ಹಾಗೂ ಎಂಆರ್ಡಬ್ಲು ಮತ್ತು ವಿಆರ್ಡಬ್ಲುಗಳ ಒಕ್ಕೂಟದ ಸದಸ್ಯರು ಸೋಮವಾರ ಇಲ್ಲಿನ ಮಿನಿ ವಿಧಾನಸೌಧಕ್ಕೆ ಆಗಮಿಸಿ ತಹಸೀಲ್ದಾರ್ ಎಂ.ಎಸ್.ಬಾಗವಾನ ಅವರಿಗೆ ಮನವಿ ಸಲ್ಲಿಸಿದರು. ಯೋಜನೆ ಉಲ್ಲಂಘಿಸಿ ಕಾಮಗಾರಿ ನಡೆಸಲಾಗುತ್ತಿದೆ.
ಈ ಹಿಂದೆ ಪುರಸಭೆಯವರು ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಬಸವೇಶ್ವರ ವೃತ್ತದಿಂದ ಹಡಲಗೇರಿ ಕ್ರಾಸ್ವರೆಗೆ ಚರಂಡಿ ಮಾಡಿದ್ದು ಇದನ್ನು ಕಡೆಗಣಿಸಿ 8 ಅಡಿ ಒಳಗೆ ಬಂದು ರಸ್ತೆ ಕಾಮಗಾರಿ ನಿರ್ವಹಿಸುತ್ತಿರುವವರು ತಮ್ಮದೇ ಆದ ಹೊಸ ಚರಂಡಿ ನಿಮರ್ಾಣ ಕೈಬಿಡಬೇಕು.
ಈ ಹಿಂದೆ ರಾಷ್ಟ್ರೀಯ ಹೆದ್ದಾರಿಗೋಸ್ಕರ ರಸ್ತೆಯ ಎರಡೂ ಬದಿ ಮಾಡಿಕೊಂಡಿರುವ ಭೂಸ್ವಾಧೀನ ಜಾಗೆಯನ್ನೇ ಈಗಲೂ ಬಳಸಿಕೊಂಡು ರಸ್ತೆ ಅಗಲಗೊಳಿಸಬೇಕು. ಪಟ್ಟಣದಲ್ಲಿ ವಾಹನಗಳ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಲಿರುವುದನ್ನು ಗಮನದಲ್ಲಿಟ್ಟುಕೊಂಡು ರಸ್ತೆ ವಿಶಾಲಗೊಳಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ವಿಕಲಚೇತನರ ಒಕ್ಕೂಟದ ಜಿಲ್ಲಾಧ್ಯಕ್ಷ ಎಸ್.ಕೆ.ಘಾಟಿ, ತಾಲೂಕು ಅಧ್ಯಕ್ಷರಾದ ಅಡಿವೆಪ್ಪ ಕೊಡಗಾನೂರ, ನಾಗೇಶ ಅಮರಾವತಿ, ವಿಆರ್ಡಬ್ಲೂ ಒಕ್ಕೂಟದ ಅಧ್ಯಕ್ಷ ಪಾವಡೆಪ್ಪ ಚಲವಾದಿ, ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು. ಮನವಿ ಸಲ್ಲಿಸಿದ ನಂತರ ಎಲ್ಲರೂ ಅಂಬೇಡ್ಕರ್ ವೃತ್ತದಲ್ಲಿ ನಡೆಯುತ್ತಿರುವ ಧರಣಿ ಸ್ಥಳಕ್ಕೆ ತೆರಳಿ ಧರಣಿಯಲ್ಲಿ ಪಾಲ್ಗೊಂಡರು.
15 ದಿನ ಪೂರೈಸಿದ ಧರಣಿ
ರಾಜ್ಯ ಹೆದ್ದಾರಿ ಅಗಲೀಕರಣಕ್ಕೆ ಆಗ್ರಹಿಸಿ ಹುನಗುಂದ-ಮುದ್ದೇಬಿಹಾಳ-ತಾಳಿಕೋಟ ರಾಜ್ಯ ಹೆದ್ದಾರಿ ನಿಮರ್ಾಣ ಸಮಿತಿ ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ನಡೆಸುತ್ತಿರುವ ಅನಿಧರ್ಿಷ್ಟಾವಧಿಯ ಧರಣಿ ಸತ್ಯಾಗ್ರಹ ಸೋಮವಾರ 15 ದಿನ ಪೂರೈಸಿದೆ. ಅಗಲೀಕರಣ ಬೇಡಿಕೆ ಈಡೇರುವತನಕ ಧರಣಿ ಕೈಬಿಡುವುದಿಲ್ಲ ಎಂದು ಹೋರಾಟ ಸಂಘಟಿಸಿರುವ ಸಿದ್ದರಾಜ ಹೊಳಿ, ಪಿ.ಬಿ.ಮಾತಿನ ವಕೀಲರು, ಬಸವರಾಜ ನಂದಿಕೇಶ್ವರಮಠ ಮತ್ತಿತರರು ತಿಳಿಸಿದ್ದಾರೆ.