ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ

State Government Employees District Level Sports and Cultural Competition

ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ  

ಬೆಳಗಾವಿ. ಪೆ.27 : 2024-25 ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಮಾರ್ಚ 7 ಮತ್ತು 8 ರಂದು ನಗರದ  ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿವೆ. 

ಸದರಿ ಕ್ರೀಡಾಕೂಟದಲ್ಲಿ ಅಥ್ಲೇಟಿಕ್ಸ್‌, ಬ್ಯಾಡ್ಮಿಂಟನ್, ಟೆನ್ನಿಸ್, ಕೇರಂ, ಟೆನಿಕ್ವೈಟ್, ಥ್ರೋ ಬಾಲ್, ವಾಲಿಬಾಲ್, ಫುಟ್‌ಬಾಲ್, ಹಾಕಿ, ಖೋ-ಖೋ, ಕಬಡ್ಡಿ, ಕ್ರಿಕೇಟ್, ಬಾಸ್ಕೆಟ್‌ಬಾಲ್, ಬಾಲ್ ಬ್ಯಾಡ್ಮಿಂಟನ್, ಚೆಸ್, ಈಜು, ಯೋಗ, ಕುಸ್ತಿ, ಭಾರ ಎತ್ತುವುದು ಹೀಗೆ ಮೊದಲಾದ ಕ್ರೀಡಾ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸಲಾಗುವುದು. ಆಸಕ್ತರು ದಿನಾಂಕ: 5-3-2025 ರ ಒಳಗಾಗಿ ಗೂಗಲ್ ಫಾರ್ಮ್‌ ಣಣಠಿ://ಜಿಠ.ರಟಜ/ಟತಿಒ5ಖಿಓರಕಿ4ಜಖಿಂತಣಗತ9 ಮೂಲಕ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ: 0831-2474101 ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 



ಮಹಾನಗರ ಪಾಲಿಕೆ ವಿಶೇಷ ಪರಿಷತ್ ಸಭೆ ಮಾರ್ಚ 1 ರಂದು 


ಬೆಳಗಾವಿ, ಫೆ.19 : ಬೆಳಗಾವಿ ಮಹಾನಗರ ಪಾಲಿಕೆ ಸನ್ 2025-26 ನೇ  ಸಾಲಿನ ಆಯವ್ಯಯ  ಅಂದಾಜು ಪತ್ರಿಕೆ ಹಾಗೂ 2024-25 ನೇ ಸಾಲಿನ ಪರಿಷ್ಕೃತ ಆಯವ್ಯಯ ಅಂದಾಜು ಪತ್ರಿಕೆ ಇವುಗಳನ್ನು ಮಂಡಿಸಿ ಅನುಮೋದಿಸುವ ಕುರಿತು ಮಾರ್ಚ 1 ರಂದು ಬೆಳಿಗ್ಗೆ 11-30 ಗಂಟೆಗೆ ಮಹಾನಗರ ಪಾಲಿಕೆಯ ಪರಿಷತ್ ಸಭಾಗೃಹದಲ್ಲಿ ವಿಶೇಷ ಪರಿಷತ್ ಸಭೆ ಕರೆಯಲಾಗಿದೆ ಎಂದು ಮಹಾನಗರ ಪಾಲಿಕೆ ಪರಿಷತ್ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  


ಚಿತ್ರ ಶಿರ್ಷಿಕೆ 

ಬೆಳವಡಿ ಮಲ್ಲಮ್ಮನ ಉತ್ಸವದ ಅಂಗವಾಗಿ ಜಿಲ್ಲೆಯಾದ್ಯಂತ ಸಂಚರಿಸುತ್ತಿರುವ ಜ್ಯೋತಿಯಾತ್ರೆಯನ್ನು ಬೆಳಗಾವಿ ನಗರದ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಗುರುವಾರ (ಫೆ.27) ರಂದು ಸಂಭ್ರಮದಿಂದ ಸ್ವಾಗತಿಸಲಾಯಿತು. ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಉದಯಕುಮಾರ್ ತಳವಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಮತ್ತು ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.