ಲೋಕದರ್ಶನ ವರದಿ
ಸಂಕೇಶ್ವರ 21: ಸ್ಥಳಿಯ ಎಸ್ ಡಿ ವ್ಹಿ ಎಸ್ ಸಂಘದ ವತಿಯಿಂದ ಪದವಿ ಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಸಾಯಂಕಾಲ 04 ಗಂಟೆಗೆ ಶಿವಕುಮಾರ ಸ್ವಾಮಿಜಿ ಇವರು 111 ನೇ ವಯಸ್ಸಿನಲ್ಲಿ ಶಿವೈಕ್ಯರಾದ ಕಾರಣ ಮಹಾವಿದ್ಯಾಲಯ ಆವರಣದಲ್ಲಿ ಶ್ರದ್ದಾಂಜಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಪ್ರಾರಂಭದಲ್ಲಿ ಶಿವಕುಮಾರ ಸ್ವಾಮಿಜಿಗಳ ಭಾವಚಿತ್ರಕ್ಕೆ ಪುಷ್ಪಹಾರ ಹಾಕಿ ಮಾಜಿ ಸಚೀವ ಎ ಬಿ ಪಾಟೀಲ ಇವರ ಹಸ್ತದಿಂದ ಪೂಜೆ ಮಾಡಲಾಯಿತು.
ಪ್ರಾಧ್ಯಾಪಕ ಶ್ರೀಶೈಲ ಮಠಪತಿ ತಮ್ಮ ಭಾಷಣದಲ್ಲಿ ನಡೆದಾಡುವ ದೇವರು ದಿವ್ಯ ಚೇತನಾ ಶಕ್ತಿಯಾದ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮಿಜಿಗಳು ಸಾವಿರಾರು ಮಕ್ಕಳಿಗೆ ವಿದ್ಯಾದಾನ , ಅನ್ನದಾನ , (ಅಂಗವಿಕಲ ಮಕ್ಕಳಿಗೆ) ಜ್ಞಾನ ದಾಸೋಹಗಳಂತಹ ಸಮಾಜಕ್ಕೆ ಮಾದರಿಯಾಗುವಂತಹ ಕಾರ್ಯಗಳನ್ನು ಮಾಡದ್ದಾರೆ, ಅವರ ಜೀವನ ಚರಿತ್ರೆಯ ಬಗ್ಗೆ ಮಾಹಿತಿ ನೀಡಿ ಎಲ್ಲ ವಿದ್ಯಾಥರ್ಿಗಳಿಗೆ ಅವರ ತತ್ವ ಸಿದ್ದಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹೋಗಬೇಕೆಂದು ಹೇಳಿದರು. ಎಸ್ ಡಿ ವ್ಹಿ ಎಸ್ ಸಂಘದ ಕಾಯರ್ಾಧ್ಯಕ್ಷ ಮಾಜಿ ಸಚೀವ, ಎ ಬಿ ಪಾಟೀಲ ತಮ್ಮ ಭಾಷಣದಲ್ಲಿ ನಡೆದಾಡುವ ದೇವರುಗಳಾದ ಶ್ರೀ ಶಿವಕುಮಾರ ಸ್ವಾಮಿಜಿಗಳು ಸೋಮವಾರ ದಿನಾಂಕ 21/2019 ಹುಣ್ಣಿಮೆಯ ದಿನ ಶಿವೈಕ್ಯರಾಗಿದ್ದಾರೆ.
ಸ್ವಾಮಿಜಿಗಳ ದರ್ಶನ ಪಡೆಯಲು ಸುಮಾರು 10 ಲಕ್ಷಕ್ಕಿಂತ ಹೆಚ್ಚಿನ ಭಕ್ತರು ಭಾಗವಹಿಸಲಿದ್ದಾರೆ. ಸಿದ್ದಗಂಗಾ ತುಮಕುರು ಮಠದಲ್ಲಿ ಸ್ವಾಮಿಜಿಯವರ ಆಶಿವರ್ಾದದಿಂದ ಡಾಕ್ಟರ, ಇಂಜಿನಿಯರ, ರಾಜಕಾರಣಿಗಳು ಹಾಗು ಇನ್ನಿತರ ಕ್ಷೆತ್ರಗಳಲ್ಲಿ ಉನ್ನತ ಪ್ರಗತಿ ಹಾಗು ಸೇವೆ ಸಲ್ಲಿಸಿದ್ದಾರೆ. ಹಾಗು ಕನರ್ಾಟಕ ವಿಧಾನ ಸಭೇಯಲ್ಲಿ ಸ್ವಾಮಿಜಿಗಳ ಆಶಿವರ್ಾದಿಂದ ಎಂ ಎಲ್ ಎ ಆಗಿಯೂ ಸಹ ನಾಯಕರು ಸೇವೆ ಸಲ್ಲಿಸುತ್ತಿದ್ದಾರೆ. ಸಂಘದ ಕಾರ್ಯದಶರ್ಿಗಳಾದ ಗಂಗಧರ ಕೋಟಗಿ , ಪ್ರಾಚಾರ್ಯರು ಬಿ ಜಿ ಪಾಟೀಲ, ಪಿ ಎಸ್ ಮುನ್ನೋಳ್ಳಿ, ಪುಜಾರಿ ಇವರು ತಮ್ಮ ಅನಿಸಿಕೆ ಹಂಚಿಕೊಂಡರು. ಕಾರ್ಯಕ್ರಮಕ್ಕೆ ಪುರಸಭೆ ಸದಸ್ಯ ಸಂಜಯ ನಷ್ಠಿ , ಡಾ ಜಯಪ್ರಕಾಶ ಕರಜಗಿ, ಚಿದಾನಂದ ಕರದನ್ನವರ, ವಿನೋದ ನಾಯಿಕ, ಬಬಲು ರಾಂಪುರೆ, ಬಸನಗ್ವಡಾ ಪಾಟೀಲ, ಜಿತೇಂದ್ರ ಮರಡಿ, ನ್ಯಾಯವಾದಿ ಜಿ ಎಸ್ ಇಂಡಿ, ಡಿ ಎಸ್ ಕೇಸ್ತಿ , ಗಂಗಾಧರ ಮುಡಸಿ, ದಿಲೀಪ ಹೋಸಮನಿ ಸಂತೋಷ ಮುಡಸಿ, ಕುಮಾರ ಸಂಸುದ್ದಿ, ಪ್ರಶಾಂತ ಮನ್ನಿಕೇರಿ, ಹಾಗು ಪತ್ರಕರ್ತ ಪಾಂಡುರಂಗ ಪಾಟೀಲ, ಮೊಹಮ್ಮದ ಮೋಮಿನ, ಕುಮಾರ ಗುಡಸಿ, ಸಚೀನ ಸಾವಂತ, ಆನಂದ ಶಿಂಧೆ, ಪ್ರಕಾಶ ವಿಟೆಕರ, ಮಹಾವಿದ್ಯಾಲಯ ಹಾಗು ಸಂಘದ ಎಲ್ಲ ಸಿಬ್ಬಂದಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.