ಶಾಲೆಗೆ 1.4 ಲಕ್ಷ ರೂ.ಗಳ ಡೇಸ್ಕ, ಟೇಬಲ್ ದಾನ ನೀಡಿದ ಶ್ರೀರಂಗ ಜೋಶಿ

Sriranga Joshi donated a desk and table worth Rs 1.4 lakh to the school

ಅಥಣಿ 17: ಆರ್ಥಿಕವಾಗಿ ಹಿಂದುಳಿದ  ಮಕ್ಕಳು ಸರಕಾರಿ ಶಾಲೆಗಳಲ್ಲಿ ಅಲ್ಪ ಸೌಕರ್ಯಗಳ ಮಧ್ಯೆ ಕಲಿಕೆಯನ್ನು ಮಾಡುತ್ತಿದ್ದು, ಖಾಸಗಿ ಶಾಲೆಗಳ ಸೌಕರ್ಯಗಳಂತೆ ವ್ಯವಸ್ಥೆ ಮಾಡಬೇಕು ಎನ್ನುವ ಉದ್ದೇಶದಿಂದ ಸಾರಿಗೆ ಇಲಾಖೆ ಅಧಿಕಾರಿ ಶ್ರೀರಂಗ ಜೋಶಿ ಸರಕಾರಿ ಶಾಲೆಗೆ ಡೆಸ್ಕ, ಟೇಬಲ್ ಗಳನ್ನು ದಾನವಾಗಿ ನೀಡಿರುವುದು ಅಭಿನಂದನಾರ್ಹ ಸಂಗತಿ ಎಂದು ಎಸ್‌.ಡಿ.ಎಮ್‌.ಸಿ ಅಧ್ಯಕ್ಷ ರಾಕೇಶ ಮೈಗೂರ ಹೇಳಿದರು.      

ಅವರು ದಾನಿ ಶ್ರೀರಂಗ ಜೋಶಿಯವರಿಂದ 1.4 ಲಕ್ಷ ರೂ.ಗಳ  40 ಡೆಸ್ಕ ಮತ್ತು 4 ಟೇಬಲ್ ಗಳನ್ನು ಸ್ವೀಕರಿಸಿ ಮಾತನಾಡುತ್ತಿದ್ದರು.  ಶ್ರೀರಂಗ ಜೋಶಿ ತಾನು ಕಲಿತ ಶಾಲೆಗೆ ತನ್ನ ಸಂಬಳದಲ್ಲಿನ ಹಣ ಉಳಿಕೆ ಮಾಡಿ ಶಾಲಾ ಮಕ್ಕಳಿಗೆ ಅನಕೂಲ ಮಾಡಿ ಕೊಟ್ಟಿರುವ ಕಾರ್ಯ ನಮಗೆಲ್ಲ ಮಾದರಿ ಎಂದ ಅವರು ದಾನಿಗಳ ಸಹಕಾರದಿಂದಲೇ ಸರಕಾರಿ ಶಾಲೆಗಳು ಅಭಿವೃದ್ಧಿಯಾಗುತ್ತವರ ಎಂದು ಹೇಳಿದರು.      

ಇತ್ತೀಚಿಗೆ ಸರಕಾರಿ ಶಾಲೆ ಎಂದರೆ ಮೂಗು ಮುರಿಯುವ ದಿನಗಳಲ್ಲಿ ಶ್ರೀರಂತ ಜೋಶಿ ತಾನು ಓದಿದ ಸರಕಾರಿ ಶಾಲೆಯಲ್ಲಿಯೇ ತನ್ನ ಮಕ್ಕಳನ್ನೂ ಸಹ ಓದಿಸುತ್ತಿರುವುದು ನಮಗೆಲ್ಲ ಹೆಮ್ಮೆ ಜೊತೆಗೆ ಅವರ ಕಾರ್ಯ ಎಲ್ಲರಿಗೂ ಮಾದರಿ ಎಂದ ಅವರು ಇಂದಿಗೂ ದೇಶದ ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು ಸರಕಾರಿ ಶಾಲೆಗಳಲ್ಲಿಯೇ ಅಧ್ಯಯನ ಮಾಡಿದ್ದಾರೆ ಎನ್ನುವುದನ್ನು ಮನಗಾಣಬೇಕು ಎಂದರು.        

ದಾನಿ ಶ್ರೀರಂಗ ಜೋಶಿ ಮಾತನಾಡಿ,  ನಾನು ಇದೆ ಸರಕಾರಿ  ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದು ಸರಕಾರಿ ಶಾಲೆಯಲ್ಲೆ ಕಲಿತು ಇಂದು ಸರಕಾರಿ ನೌಕರಿಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ನಾನು ಕಲಿತಿರುವ ಶಾಲೆಗೆ ಏನಾದರೂ ಮಾಡಬೇಕು ಅನ್ನುವದು ನನ್ನ ಆಲೋಚನೆಯಾಗಿತ್ತು. ಹಾಗಾಗಿ ವಿಕ್ರಮಪೂರ ಶಾಲೆಗೆ ನನ್ನ ಸಂಬಳದ 1.40  ಲಕ್ಷ ರೂ.ಗಳ ಪರಿಕರಗಳನ್ನು ನೀಡಿದ್ದು ನನಗೆ ಸಂತಸದ ಸಂಗತಿಯಾಗಿದೆ ಎಂದು ಹೇಳಿದರು         ಈ ಸಂದರ್ಭದಲ್ಲಿ ಎ.ಎ. ದೇಶಮುಖ,ಕ್ಷೇತ್ರ ಸಮನ್ವಯ  ಅಧಿಕಾರಿ ಗೌಡಪ್ಪಾ ಖೋತ, ಬಿಆರಿ​‍್ಪ ಎ. ವೈ.  ಐಭತ್ತಿ, ಮುಖ್ಯ ಶಿಕ್ಷಕ ಎಸ್ ಎ ಚೌಗಲಾ, ಶಿಕ್ಷಕರಾದ  ಎಸ್ ಎಸ್ ಮುಗಳಖೋಡ, ಜಿ ಎನ್ ಬಡಿಗೇರ, ಡಿ ಎ ಬರಡಗಿ, ವಿ ಎಸ್ ವಾಗಮೋಡೆ, ಎಪ್ ಕೋರಬು ಸೇರಿದಂತೆ ಅನೇಕರು ಉಪಸ್ಥಿತರಿದ್ದರು