ಶ್ರೀಶೈಲ ಕಮ್ಮಾರಗೆ ಸಿರಿಗನ್ನಡ ಕಲಾ ಪ್ರಶಸ್ತಿ

ಲೋಕದರ್ಶನ ವರದಿ

ಗೋಕಾಕ, 4: ನಗರದ ಲಕ್ಷ್ಮಣರಾವ ಜಾರಕಿಹೊಳಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾಥರ್ಿ ಶ್ರೀಶೈಲ ಕಮ್ಮಾರ ಇತನು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಸಮಾಜ ಕಲ್ಯಾಣ ಸಂಸ್ಥೆ ಹಾಗೂ ಕನರ್ಾಟಕ ರಾಜ್ಯ ಕಲಾವಿದರ ರಕ್ಷಣಾ ವೇದಿಕೆ ಮತ್ತು ಕನರ್ಾಟಕ ಹವ್ಯಾಸಿ ವೃತ್ತಿ ರಂಗಭೂಮಿ ಕಲಾವಿದರ ಒಕ್ಕೂಟ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ಧ ಕನರ್ಾಟಕ ಸಾಹಿತ್ಯ, ಸಂಸ್ಕೃತಿ, ಕಲಾ ಸಂಭ್ರಮ ಸಮ್ಮೇಳನದಲ್ಲಿ ಭಾಗವಹಿಸಿ ಭರತನಾಟ್ಯದಲ್ಲಿ ಸಿರಿಗನ್ನಡ ಕಲಾ ಪ್ರಶಸ್ತಿ ಪಡೆದಿದ್ದಾನೆ.

  ವಿದ್ಯಾಥರ್ಿಯ ಸಾಧನೆಯನ್ನು ಸಂಸ್ಥೆಯ ಚೇರಮನ್ನ ಡಾ. ಭೀಮಶಿ ಜಾರಕಿಹೊಳಿ, ಆಡಳಿತಾಧಿಕಾರಿ ಎಸ್ ಜಿ ಬೆಟಗಾರ, ಮುಖ್ಯೋಪಾಧ್ಯಾಯರಾದ ಎಚ್ ವಿ ಪಾಗ್ನಿಸ್, ಬಿ ಕೆ ಕುಲಕಣರ್ಿ, ಪಿ ವಿ ಚಚಡಿ ಹಾಗೂ ಶಿಕ್ಷಕರು ಸಿಬ್ಬಂದಿಗಳು ಅಭಿನಂದಿಸಿದ್ದಾರೆ.