ಪ್ರತಿಭೆಗಳನ್ನು ಸಿದ್ಧಪಡಿಸುವ ವಿಧಾನ ಶ್ಲಾಘನೀಯ: ಆರ್ಥರ್

ಇಂದೋರ್, ಜ.8 ಭಾರತದಲ್ಲಿ ಯುವ ಪ್ರತಿಭೆಗಳನ್ನು ಸಿದ್ಧಪಡಿಸುವ ವಿಧಾನದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದು, ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತು ಇದರಿಂದ ಕಲಿಯಬೇಕಾಗಿದೆ ಎಂದು ಶ್ರೀಲಂಕಾ ಕ್ರಿಕೆಟ್ ತಂಡದ ತರಬೇತುದಾರ ಮಿಕ್ಕಿ ಆರ್ಥರ್ ಅಭಿಪ್ರಾಯಪಟ್ಟಿದ್ದಾರೆ. ಇಂದೋರ್ನಲ್ಲಿ ನಡೆದ ಎರಡನೇ ಟಿ 20 ಯಲ್ಲಿ ಭಾರತ ಶ್ರೀಲಂಕಾವನ್ನು ಏಳು ವಿಕೆಟ್ಗಳಿಂದ ಸೋಲಿಸಿ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಮಂಗಳವಾರ ಹೊಲ್ಕರ್ ಕ್ರೀಡಾಂಗಣದಲ್ಲಿ ಆಡಿದ ಈ ಪಂದ್ಯದಲ್ಲಿ ಯುವ ಬೌಲರ್ಗಳಾದ ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ ಭರ್ಜರಿ ಪ್ರದರ್ಶನ ನೀಡಿದರು. ಭಾರತವು ಯುವ ಆಟಗಾರರನ್ನು ಸಿದ್ಧಪಡಿಸುವ ರೀತಿ ಮತ್ತು ಸವಾಲನ್ನು ಎದುರಿಸಲು ಸಿದ್ಧವಾದ ಅವರ ಮನಸ್ಥಿತಿ ಅದ್ಭುತವಾಗಿದೆ ಮತ್ತು ಕ್ರಿಕೆಟ್ ಜಗತ್ತು ಅದರಿಂದ ಕಲಿಯಬೇಕು ಎಂದು ಆರ್ಥರ್ ಹೇಳಿದರು. "ಭಾರತದ ಯುವ ಆಟಗಾರರಿಗೆ ಒತ್ತಡದ ಸನ್ನಿವೇಶದಲ್ಲಿ ಆಡಲು ಅವಕಾಶ ನೀಡಲಾಗುತ್ತಿದ್ದು, ಅವರಿಗೆ ದೊಡ್ಡ ಜವಾಬ್ದಾರಿಗಳನ್ನು ನೀಡಲಾಗುತ್ತಿದೆ. ಇದು ಬಹಳ ಒಳ್ಳೆಯ ನಡೆ ಮತ್ತು ಒತ್ತಡದ ನಡುವೆಯೂ ತಂಡವನ್ನು ಗೆಲ್ಲಲು ಈ ಯುವ ಆಟಗಾರರು ಸಹ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದಿದ್ದಾರೆ. "ಕ್ರಿಕೆಟ್ ಕಲಿಕಾ ವಿಷಯದಲ್ಲಿ ಭಾರತವು ಉತ್ತಮ ಸ್ಥಾನದಲ್ಲಿದೆ ಎಂದು ನಾನು ಭಾವಿಸುತ್ತೇನೆ. ಭಾರತ ಪ್ರಬಲ ತಂಡವಾಗಿದ್ದು, ಅವರಿಗೆ ಯಾವುದೇ ಕೊರತೆಯಿಲ್ಲ. ಬ್ಯಾಟಿಂಗ್ನಿಂದ ಹಿಡಿದು ಬೌಲಿಂಗ್ ವಿಭಾಗದವರೆಗಿನ ಎಲ್ಲದರಲ್ಲೂ ತಂಡ ತುಂಬಾ ಪ್ರಬಲವಾಗಿದೆ ಎಂದು ಆರ್ಥರ್ ತಿಳಿಸಿದ್ದಾರೆ.