ಕೊಲಂಬೋ 25: ಶ್ರೀಲಂಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಅಂಧರ ಕ್ರಿಕೆಟ್ ತಂಡ 4-1 ಅಂತರದ ಭರ್ಜರಿ ಜಯ ಸಾಧಿಸಿದೆ.
ಮಂಗಳವಾರದಂದು ಕೊಲಂಬೋ ದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿ ಅಭೂತಪೂರ್ವ ದಾಖಲೆ ಬರೆದಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಅತಿಥೇಯ ಶ್ರೀಲಂಕಾ ಪಡೆ ನಿಗದಿತ ಓವರ್ ಗಳಲ್ಲಿ 190 ರನ್ಗಳಿಸಿ ಥತ್ ಸವಾಲನ್ನೇ ಒಡ್ಡಿತು.
ಆದರೆ ವಿಶ್ವ ಚಾಂಪಿಯನ್ ಭಾರತ ತಂಡಕ್ಕೆ ಈ ಗುರಿ ಏನೂ ಸವಾಲಾಗಲಿಲ್ಲ. 16ನೇ ಓವರ್ ಮುಕ್ತಾಯದ ವೇಳೆಗೆ ಅಜಯ್ ರೆಡ್ಡಿ ಪಡೆ ಯಾವ ವಿಕೆಟ್ ನಷ್ಟವಿಲ್ಲದೆ ಗೆಲುವಿನ ದಡ
ಮುತ್ಟಿತು.