ಕ್ರೀಡೆ, ಶಾಂತಿ, ಸಾಮರಸ್ಯ, ಮಾನಸಿಕ ನೆಮ್ಮದಿ ಹೆಚ್ಚಿಸುತ್ತದೆ : ಡಾ. ಆಶಿಕ್ ಹೆಗಡೆ

ಲೋಕದರ್ಶನ ವರದಿ

     ಹೊನ್ನಾವರ ,9 : ಕ್ರೀಡೆ ಪರಸ್ಪರ ಸ್ನೇಹ ಭಾವನೆಯನ್ನು ಬೆಳೆಸುತ್ತದೆ, ಸಾಮರಸ್ಯ ಹೆಚ್ಚಿಸುತ್ತದೆ ಮಾತ್ರವಲ್ಲ ದೈಹಿಕ ವ್ಯಾಯಾಮವನ್ನೂ ನೀಡುತ್ತದೆ ಇದರಿಂದ ಮಾನಸಿಕ ನೆಮ್ಮದಿ ಉಂಟಾಗುತ್ತದೆ ಇದರಿಂದ  ಸಮಾಜದಲ್ಲಿ ಶಾಂತಿ ಮೂಡಿಸಲು ಸಾಧ್ಯವಾಗುತ್ತದೆ. ಹಾಗಾಗಿ ಇಂತಹ ಕಾರ್ಯಕ್ರಮಗಳು  ಪ್ರತಿಯೊಂದು ಕಡೆ ನಡೆಯುವಂತಾಗಬೇಕು ಎಂದು ಖ್ಯಾತ ವೈದ್ಯ ಡಾ|| ಆಶಿಕ್ ಹೆಗಡೆ ಹೇಳಿದರು.

   ಅವರು ಕುಮುದಾ ಅಭಿವೃದ್ಧಿ ಸಂಸ್ಥೆ, ಸಮಾನ ಮನಸ್ಕ ಕೆರೆಕೋಣ ಬಳಗ ಮತ್ತು ಕೆರೆಕೋಣ ಹಳೇ ವಿದ್ಯಾಥರ್ಿಗಳ ಸಂಘ, ದಿವಂಗತ ಹೆಬ್ಬಾನಕಾನ್ ಸುಕನ್ಯಾ ಹೆಗಡೆಯವರ ನೆನಪಿನಲ್ಲಿ ಕೆರೆಕೋಣ್ನ ಮಂಜ ಭಟ್ಟ ಕ್ರೀಡಾಂಗಣದಲ್ಲಿ ನಡೆಸಿದ ಜಿಲ್ಲಾ ಮಟ್ಟದ ಚುಟುಕು ಕ್ರಿಕೆಟ್ ಟೂನರ್ಾಮೆಂಟ್ ಉದ್ಘಾಟಿಸಿ ಮಾತನಾಡಿದರು.

     ಕ್ರೀಡಾಂಗಣ ಉದ್ಘಾಟಿಸಿದ ಹಿರಿಯ ಕ್ರಿಕೆಟ್ ಆಟಗಾರ ಜಿ. ಆರ್. ಹೆಗಡೆ, ಗುಬ್ಬು ಮಾತನಾಡಿ ಇಂತಹ ಕ್ರೀಡೆಗಳು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಹೆಚ್ಚು ನಡೆಯಬೇಕು ಮತ್ತು ಆ ಮೂಲಕ ಇಂದಿನ ಯುವಕರಲ್ಲಿ ಮೊಬೈಲ್ ಬಳಕೆ ಕಡಿಮೆ ಮಾಡಿಸಿ ಕ್ರಿಯಾಶೀಲತೆಯನ್ನು ಹೆಚ್ಚಿಸಬೇಕು ಎಂದು ಹೇಳಿ, ಕ್ರೀಡೆ ಯಾವುದೇ ಜಾತಿಗೆ/ವರ್ಗಕ್ಕೆ ಸೀಮಿತವಾದುದಲ್ಲ, ಹಾಗಾಗಿ ಯಾವುದೇ ಪಂದ್ಯಾಟವನ್ನು ಸೀಮಿತ ಜಾತಿ/ವರ್ಗಕ್ಕೆ ನಡೆಸದೇ ಇಲ್ಲಿಯ ಹಾಗೆ ಎಲ್ಲರಿಗೆ ಅವಕಾಶ ಸಿಗುವಂತೆ ನಡೆಸಬೇಕು ಎಂದರು.

 ಮುಖ್ಯ ಅತಿಥಿ ನಿವೃತ್ತ ಶಿಕ್ಷಕ ಬಿ.ವಿ. ಭಂಡಾರಿ,ಮಾತನಾಡಿ ಮಗು ಹುಟ್ಟಿದಾಗಿಂದಲೇ ಆಟ ಆಡಲು ಶುರು ಮಾಡುತ್ತದೆ. ಮಗು ಆಟವಾಡುತ್ತಿದ್ದರೆ, ಆರೋಗ್ಯವಂತ ಮಗು ಎನ್ನುತ್ತಾರೆ, ಅಳುತ್ತಿದ್ದರೆ ಆ ಮಗು ಅನಾರೋಗ್ಯವಾಗಿದೆ ಎಂದರ್ಥ. ಹಾಗಾಗಿ ಕ್ರೀಡೆ, ಆರೋಗ್ಯವಂತ ಸಮಾಜವನ್ನು ನಿಮರ್ಾಣ ಮಾಡುವ ಸಾಧನವಾಗಿದೆ ಎಂದರು.

 ಮುಖ್ಯ ಅತಿಥಿ, ನ್ಯಾಯವಾದಿ ಎಮ್.ಜಿ.ಭಟ (ಮಾತನಾಡಿೆ, ಎಲ್ಲರಿಗೆ ಶುಭ ಕೋರಿದರು. ಸಾಲ್ಕೋಡ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ಕೇಶವ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ಇಲ್ಲಿನ ಯುವಕರ ಕ್ರಿಯಾಶೀಲತೆ, ಸಂಘಟನಾತ್ಮಕ ರೀತಿ ಇತರರಿಗೆ ಮಾದರಿ, ಇದು ಇನ್ನಷ್ಟು ಜನರಿಗೆ ನಾಯಕತ್ವ ಬೆಳಸಿಕೊಳ್ಳಲು ಸಹಾಯಕವಾಗುತ್ತದೆ ಎಂದರು.

 ವೇದಿಕೆಯ ಮೇಲೆ ದಿವಂಗತ ಹೆಬ್ಬಾನಕಾನ್ ಸುಕನ್ಯಾ ಹೆಗಡೆಯವರ ಅಣ್ಣ, ದಿನೇಶ ಹೆಗಡೆ, ಆಯ್.ಆರ್. ಭಟ್ಟ ಉಪಸ್ಥಿತರಿದ್ದರು. 

  ಪ್ರಾರಂಭದಲ್ಲಿ ದಿವಂಗತ ಹೆಬ್ಬಾನಕಾನ್ ಸುಕನ್ಯಾ ಹೆಗಡೆಯವರನ್ನು ಸ್ಮರಿಸಿ ಒಂದು ನಿಮಿಷ ಮೌನ ಆಚರಿಸಿ ಅವರಿಗೆ, ಶೃದ್ದಾಂಜಲಿ ಅಪರ್ಿಸಲಾಯಿತು.

 ಈ ಟೂನರ್ಾಮೆಂಟ್ನಲ್ಲಿ ಕೆರೆಕೋಣ ತಂಡ ಪ್ರಥಮ ಸ್ಥಾನ, ಅರೇಂಗಡಿಯ ಕನರ್ಾಟಕ ಬಲ ತಂಡ ದ್ವಿತೀಯ ಸ್ಥಾನ, ಸಂತೇಗುಳಿ ತಂಡ ತೃತೀಯ ಸ್ಥಾನ ಪಡೆದುಕೊಂಡಿತು.

  ಎಮ್.ಎಸ್. ಶೆಟ್ಟಿ ಸ್ವಾಗತಿಸಿದರು, ಮಹೇಶ ಭಂಡಾರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.