ಲೋಕದರ್ಶನ ವರದಿ
ಕುಕನೂರು 08: ಪ್ರತಿಯೊಂದು ವಿದ್ಯಾಥರ್ಿಗಳು ಶಿಕ್ಷಣದೊಂದಿಗೆ ಕ್ರೀಡಾ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಕ್ರೀಡೆಯಲ್ಲಿ ಭಾಗವಹಿಸಿದರೆ ನಿಮ್ಮ ಮೇಲಿರುವ ಹಲವಾರು ಒತ್ತಡಗಳು ಶಮನಗೊಳ್ಳುತ್ತದೆ ಎಂದು ಯಲಬುಗರ್ಾ ತಾಲೂಕಿನ ಸಿಪಿಐ ರಮೇಶ ರೋಟ್ಟಿ ಹೇಳಿದರು.
ಪಟ್ಟಣದ ನವೋದಯ ವಿದ್ಯಾಲಯದ ಚಾಂಪಿಯನ್ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾ ದಿನಾಚರಣೆಯ ಅಂಗವಾಗಿ ವಿದ್ಯಾಲಯದ ಮಕ್ಕಳಿಗಾಗಿ ವಿವಿಧ ಆಟೋಟಗಳನ್ನು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ರೀಡೆಯಿಂದ ದೇಹ ಸದೃಢಗೊಳ್ಳುವುದರ ಜತೆಗೆ ಮಾನಸಿಕ ಸ್ಥೈರ್ಯ ಇರುತ್ತದೆ. ಸರಕಾರ ಶಿಕ್ಷಣದ ಜತೆಗೆ ಕ್ರೀಡೆಗೂ ಆದ್ಯತೆ ನೀಡಿದೆ. ಆರೋಗ್ಯಯುತ ಸಮಾಜ ನಿಮರ್ಾಣವಾಗಬೇಕಾದರೆ ಕ್ರೀಡೆ ಅತ್ಯವಶ್ಯಕವಾಗಿದೆ ಆದ್ದರಿಂದ ವಿದ್ಯಾಥರ್ಿಗಳು ಇದರ ಸದುಪಯೋಗ ಪಡೆಯಬೇಕೆಂದರು.
ಸಂದರ್ಭದಲ್ಲಿ ವಿ ಎಚ್ ಕುಲಕಣರ್ಿ. ಎಮ್ ಎಸ್ ಶಿವಶಂಕರ್. ಎಮ್ ಬಿ ಕುಲಕರ್. ಎಮ್ ಹೇಮಾವತಿ. ಎಸ್ ಎಫ್ ಆಸ್ಮಾ. ಮೇಘರಾಜ ಜೀಡಗಿ. ಸಂಜೀವ್ ಹಾಗೂ ಮತ್ತಿತರರಿದ್ದರು.