ಧಾರವಾಡ 03: ದೈನಂದಿನ ಜಂಜಡಗಳಿಂದ ದೂರವಿದ್ದು, ಮಾನಸಿಕ ನೆಮ್ಮದಿ ಕಂಡುಕೊಳ್ಳಲು ಈ ರೀತಿಯ ಕ್ರೀಡಾಕೂಟಗಳು ಸಹಕಾರಿಯಾಗಲಿವೆ ಎಂದು ಧಾರವಾಡ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಮಹಾವೀರ ಉಪಾಧ್ಯೆ ಹೇಳಿದರು.
ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಧಾರವಾಡ ತಾಲೂಕಾ ಹಾಗೂ ಕಛೇರಿ ಸಿಬ್ಬಂದಿಗೆ ಜೆ.ಎಸ್.ಎಸ್ ಮೈದಾನದಲ್ಲಿ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಡಾ. ವೀರೇಂದ್ರ ಹೆಗ್ಗಡೆಯವರ ಬಹುದೊಡ್ಡ ಕಾಣಿಕೆ ಗ್ರಾಮಾಭಿವೃದ್ಧಿ ಯೋಜನೆ. ಈ ಯೋಜನೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಿಮ್ಮ ಶ್ರಮ ಶ್ಲಾಘನೀಯ ಎಂದು ಶ್ಲಾಘಿಸಿದರು.
ಒಂದೇ ಕುಟುಂಬದ ಸದಸ್ಯರಂತಿರುವ ನಾವು ದಿನ ನಿತ್ಯದ ಕೆಲಸಗಳಿಂದ ಮಾನಸಿಕ ನೆಮ್ಮದಿ ಕಂಡುಕೊಳ್ಳಲು ಈ ರೀತಿ ಕ್ರೀಡಾಕೂಟ ಸ್ನೇಹ ಕೂಟಗಳನ್ನು ಆಯೋಜಿಸುತ್ತಿದ್ದೇವೆ. ಕ್ರೀಡಾ ಮನೋಭಾವನೆಯಿಂದ ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಿ ಎಂದು ಧರ್ಮಸ್ಥಳದ ಗ್ರಾಮಾಭಿವೃದ್ಧಿ ಧಾರವಾಡದ ನಿದರ್ೇಶಕ ದಿನೇಶ. ಎಂ. ರವರು ಹೇಳಿದರು.
ಯೋಜನಾಧಿಕಾರಿ ಉಲ್ಲಾಸ ಮೆಸ್ತಾ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. 200 ಜನ ಈ ಕ್ರೀಡಾ ಕೂಟದಲ್ಲಿ ಪಾಲ್ಗೊಂಡಿದ್ದರು.