ಲೋಕದರ್ಶನ ವರದಿ
ತಾಳಿಕೋಟೆ 04: ಕ್ರೀಡೆ ಎಂಬುದು ಕೇವಲ ಆಟೋಟೊಪವಾಗಿಲ್ಲಾ ಕ್ರೀಡೆಯಿಂದ ಮಕ್ಕಳಲ್ಲಿ ಮಾನಸಿಕತೆ ಎಂಬುದು ದೂರವಾಗಿ ಚೈತನ್ಯಶೀಲರಾಗುತ್ತಾರಲ್ಲದೇ ಸದೃಢ ದೇಹ ಆರೋಗ್ಯವಂತರಾಗಿ ಬದುಕಲು ಅವಶ್ಯವಾಗಿದೆ ಎಂದು ತಾಲೂಕಾ ದೈಹಿಕ ಶಿಕ್ಷಣಾಧಿಕಾರಿ ಎಸ್.ಬಿ.ಚಲವಾದಿ ಅವರು ನುಡಿದರು.
ಪಟ್ಟಣದ ಕೆಬಿಎಂಪಿಎಸ್ ಶಾಲಾ ಮೈಧಾನದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವಿಜಯಪುರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಾಯರ್ಾಲಯ ಮುದ್ದೇಬಿಹಾಳ ಇವರ ವತಿಯಿಂದ ತಾಳಿಕೋಟೆ ಕ್ಲಷ್ಟರ್ ಮಟ್ಟದ ಖಾಸಗಿ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಮಕ್ಕಳಲ್ಲಿ ಶೃಜನಶೀಲಬಧುಕೆಂಬುದು ಬರಬೇಕು ಶಾಲೆಗಳಲ್ಲಿ ಪಾಠದ ಜೊತೆ ಆಟವೆಂಬುದು ಇರಬೇಕು ಇದರಿಂದ ಶಾಲೆಗಳನ್ನು ಶಿಕ್ಷಕರು ನೀಡಿದ ಪಾಠ ಮನದಟ್ಟವಾಗುತ್ತದೆ ಅಲ್ಲದೇ ಜ್ಞಾಪಕ ಶಕ್ತಿ ಎಂಬುದು ಹೆಚ್ಚಲು ಸಹಾಯಕಾರಿಯಾಗುತ್ತದೆ ಕೇವಲ ಕ್ರೀಡೆಯಿಂದ ಎಷ್ಟೋ ಮಕ್ಕಳು ದೇಶದ ಉನ್ನತ ಕಿರೀಟವನ್ನು ಧರಿಸಿದ್ದಾರೆ ಈಗಿನ ಶಾಲಾ ಮಕ್ಕಳಿಗೆ ಕ್ರೀಡಾ ಮನೋಭಾವನೆ ಹೆಚ್ಚಿಸುವಂತಹ ಕಾರ್ಯವಾಗಬೇಕಿದೆ ಈಗೀನ ಶಿಕ್ಷಣ ಸಂಸ್ಥೆಗಳು ಕ್ರೀಡೆಗಿಂತ ಕೇವಲ ಓದಿನ ಕಡೆ ಹೆಚ್ಚಿಗೆ ಒತ್ತು ನೀಡುತ್ತಿವೆ ಹಾಗಾಗಬಾರದು ಇದರಿಂದ ಮಕ್ಕಳಲ್ಲಿ ಮಾನಸಿಕವಾಗಿ ಖಿನ್ನತೆ ಎಂಬುದು ಕಾಡುತ್ತದೆ ಪಾಠದ ಜೊತೆಗೆ ಆಟವೂ ಇದ್ದರೆ ಮಕ್ಕಳ ಮನಸ್ಸಿನಲ್ಲಿರುವ ಚಂಚಲತೆಯನ್ನು ದೂರವಾಗುತ್ತದೆ ಅಲ್ಲದೇ ಸದೃಢ ಆರೋಗ್ಯವಂತ ದೇಹವನ್ನು ಹೆಚ್ಚಿಸಿಕೊಳ್ಳುವದರೊಂದಿಗೆ ದೇಶದ ಉತ್ತಮ ಪ್ರಜೆ ನಿಮರ್ಾಣದಲ್ಲಿ ಮಹತ್ತರ ಪಾತ್ರವಾಗಲಿದೆ ಎಂದರು.
ಇನ್ನೋರ್ವ ತಾಲೂಕಾ ಸಮನ್ವಯ ಅಧಿಕಾರಿ ಎಂ.ಎಂ.ಬೆಳಗಲ್ಲ ಅವರು ಕ್ರೀಡಾ ಜ್ಯೋತಿಯನ್ನು ಬೆಳಗಿಸಿ ಮಾತನಾಡಿ ಮಕ್ಕಳಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಕ್ರೀಡೆ ಎಂಬುದು ಸಹಾಯಕಾರಿಯಾಗಲಿದೆ ಅನೇಕ ಮಕ್ಕಳಲ್ಲಿ ಕ್ರೀಡೆಯಲ್ಲಿಯ ಪ್ರತಿಭೆಯನ್ನು ಹೊರಹಾಕಲು ಆಗದೇ ನಶಿಸಿ ಹೋಗುತ್ತಿವೆ ಇಂತವುಕ್ಕೆಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳು ಪಾಠದ ಜೊತೆ ಕ್ರೀಡೆ ಎಂಬದನ್ನು ಸಮಾನಾಗಿ ಸ್ವಿಕರಿಸಿ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಕ್ರೀಡಾಕೂಟದಲ್ಲಿ ಆಸಕ್ತಿ ಇರುವಂತಹ ಮಕ್ಕಳನ್ನು ಭಾಗವಹಿಸಲು ಅವಕಾಶ ಕಲ್ಪಿಸಿ ಉತ್ತಮ ಕ್ರೀಡಾಪಟುಗಳನ್ನು ತಯಾರಿಸುವಂತಹ ಕಾರ್ಯವಾಗಬೇಕೆಂದರು.
ಎಂಪಿಎಸ್ ಶಾಲಾ ಮುಖ್ಯೋಪಾದ್ಯಾಯಿನಿ ದೇವಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ನಂತರ ನಡೆದ ವಿವಿಧ ಕ್ರೀಡೆಯಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಪ್ರಥಮ, ದ್ವೀತಿಯ, ತೃತೀಯ ಭಹುಮಾನಗಳನ್ನು ವಿತರಿಸಲಾಯಿತು