ವರುಣದೇವನ ಕೃಪೆಗಾಗಿ ವಿಶೇಷ ಪೂಜೆ

ಬ್ಯಾಡಗಿ೦೫: ಮಳೆ ಕೊರತೆಯಿಂದ ಭೀಕರ ಬರಗಾಲದ ಛಾಯೆ ಎದುರಾಗಿದೆ, ಪ್ರಸಕ್ತ ವರ್ಷ ಜೂನ ತಿಂಗಳು ಆರಂಭವಾದರೂ ಎಲ್ಲಿಯೂ ಮಳೆಯಾಗುತ್ತಿಲ್ಲ ಹೀಗಾಗಿ ಕೃಷಿ ಚಟುವಟಿಕೆಗಳಿಗೆ ಹಿನ್ನೆಡೆಯಾಗುತ್ತಿದೆ, ವಾಡಿಕೆಯಂತೆ ಈಗಾಗಲೇ ಬಿತ್ತನೆ ಕಾರ್ಯ ಮುಕ್ತಾಯ ಗೊಳ್ಳಬೇಕಾಗಿತ್ತು, ಹೀಗಾದರೇ ರೈತರು ಪರಿಸ್ಥಿತಿ ತೀರಾ ಸಂಕಷ್ಟಕ್ಕೊಳಪಡಲಿದೆ, ಆದರೆ ಈ ಭಾಗದಲ್ಲಿ ಮಳೆಯಾಗದೇ ಇರುವುದು ರೈತರನ್ನು ದೃತಿಗೆಡಿಸಿದೆ, ದೇವರು ಈಗಲಾದರೂ ಮಳೆಯನ್ನು ಕರುಣಿಸಲಿ ಪೂಜೆ ಪುನಸ್ಕಾರಗಳನ್ನು ನಿರಂತರವಾಗಿ ನಡೆಸಲಿದ್ದೇವೆ ಎಂದು ಜಗದೀಶ ಕಣಗಲಬಾವಿ ಹೇಳಿದರು.

 ಕೈಕೊಟ್ಟ ಮಳೆಯಿಂದ ಕಂಗಾಲಾದ ಚಿಕ್ಕಬಾಸೂರ ಗ್ರಾಮಸ್ಥರು ಸಿದ್ದರಾಮೇಶ್ವರ ಹಾಗೂ ಸಂಗನಬಸವೇಶ್ವರ ದೇವರಿಗೆ ಪರ್ಜನ್ಯ ಜಪ, ಅಭಿಷೇಕ, ಹೋಮ ಸೇರಿದಂತೆ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಮೊರೆಯಿಟ್ಟರು.

   ವೀರಭದ್ರಪ್ಪ ಗೊಡಚಿ ಮಾತನಾಡಿ, ಗ್ರಾಮದಲ್ಲಿ ಉತ್ತಮವಾದ ಮಳೆ ಹಾಗೂ ಬೆಳೆಗಾಗಿ ಹಿಂದಿನಿಂದಲೂ ಪೂಜೆ, ಅಭಿಷೇಕ, ಜಪ, ತಪ, ಪೂಜೆ ಅನುಷ್ಠಾನ ಮಾಡಿಕೊಂಡು ಬಂದಿರುವ ಸಂಪ್ರದಾಯವಿದೆ, ಸಿದ್ಧರಾಮೇಶ್ವರ ದೇವರ ಕೃಪೆಯಿಂದ ಉತ್ತಮ ಮಳೆಯಾಗಲಿ ಎಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದರು.

              ಚನ್ನಬಸಣ್ಣ ನಿಟ್ಟೂರ, ಚನ್ನಬಸಪ್ಪ ಅಣಜಿ, ಸುಭಾಸ್ ಹೊಂಕಣದ, ಸಿದ್ರಾಮಗೌಡ ಚನ್ನಗೌಡ್ರ, ರುದ್ರಪ್ಪ ಪುರವಂತಗೌಡ್ರ, ಜಯಣ್ಣ ಮಲ್ಲಿಗಾರ, ಜಗದೀಶಪ್ಪ ಮಂಕಾವಿ, ಶಶಿಧರ ಕನವಳ್ಳಿ, ಫಕ್ಕಿರೇಶ ಅಜಗೊಂಡ್ರ, ನಾಗರಾಜ ಹಂಜೇರ, ಶಿವರಾಯಪ್ಪ ಹುಳ್ಳೆರ, ನಾಗರಾಜ ಬಟ್ಟೇರ, ಕುಮಾರಯ್ಯ ಪ್ಯಾಟಿಮಠ ಇನ್ನಿತರಿದ್ದರು.