ಕೆ.ಹನಮಾಪೂರ ಗ್ರಾಮದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ: ಕೃಷಿಯಲ್ಲಿ ಆಧುನಿಕತೆ ಅಳವಡಿಸಿಕೊಳ್ಳಿ: ಶಂಕರ ಹಳದಮನಿ

ಮೂಡಲಗಿ 01: ಕನರ್ಾಟಕದ ಬಹುಸಂಖ್ಯಾತ ನಾಗರಿಕರು ಬೇಸಾಯವನ್ನು ಅವಲಂಬಿಸಿದ್ದಾರೆ. ಸರಕಾರ ಕೃಷಿಯನ್ನು ಅಭಿವೃದ್ಧಿ ಪಡಿಸಲು ಅನೇಕ ಸೌಲಭ್ಯಗಳನ್ನು ರೈತರಿಗೆ ನೀಡುತ್ತಿದೆ. ಗಂಗಾ ಕಲ್ಯಾಣ, ಹನಿ ನೀರಾವರಿ, ಕೃಷಿಹೊಂಡ ನಿಮರ್ಾಣ, ಉತ್ತಮ ತಳೀಯ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಉಚಿತ ಹಾಗೂ ರಿಯಾಯತಿ ದರದಲ್ಲಿ ನೀಡುತ್ತಿದೆ ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಅರಭಾಂವಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶಂಕರ ಹಳದಮನಿ ಹೇಳಿದರು.

ಸಮೀಪದ ದತ್ತು ಗ್ರಾಮ ಕೆ.ಹನಮಾಪೂರ ಗ್ರಾಮದಲ್ಲಿ ಇತ್ತಿಚೆಗೆ ಸ್ಥಳೀಯ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದಜರ್ೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಮ್ಮಿಕೊಂಡಿದ್ದ ವಾಷರ್ಿಕ ವಿಶೇಷ ಶಿಬಿರದ ವಿಶೇಷ ಉಪನ್ಯಾಸ ಕಾಕೆ.ಹನಮಾಪೂರ ಗ್ರಾಮದಲ್ಲಿ ಇತ್ತಿಚೆಗೆ ಸ್ಥಳೀಯ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದಜರ್ೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಮ್ಮಿಕೊಂಡಿದ್ದ ವಾಷರ್ಿಕ ವಿಶೇಷ ಶಿಬಿರದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಇನ್ನೋರ್ವ ಅತಿಥಿ ರಾಜಾಪೂರದ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತರಾದ ರಾಜು ಬೈರುಗೋಳ ಮಾತನಾಡಿ, ರೈತರು ಸಾಂಪ್ರದಾಯಿಕ ಕೃಷಿ ವ್ಯವಸ್ಥೆಯ ಜೊತೆಗೆ ಆಧುನಿಕತೆಯನ್ನು ಅಳವಡಿಸಿಕೊಳ್ಳಬೇಕು. ಅಲ್ಪಕಾಲಿಕ ಬೆಳೆಗಳನ್ನು ಬೆಳೆಯುವ ಮೂಲಕ ಹೆಚ್ಚಿನ ಲಾಭವನ್ನು ಪಡೆಯಬಹುದು. ವಿಶ್ರ ಬೇಸಾಯ ಪದ್ಧತಿ, ಏಕಕಾಲದಲ್ಲಿ ವಿವಿಧ ಬೆಳೆಗಳನ್ನು ಬೆಳೆಯುವುದು ಹಾಗೂ ಹೈನುಗಾರಿಕೆಯನ್ನು ಅಳವಡಿಸಿಕೊಳ್ಳುವುದು ಸೂಕ್ತ ಎಂದು ನುಡಿದರು.

ಕಾರ್ಯಕ್ರಮಾಧಿಕಾರಿ ಶಂಕರ ನಿಂಗನೂರ ಮಾತನಾಡಿ, ಇತೀಚಿನ ದಿನಗಳಲ್ಲಿ ಮಳೆ ಪ್ರಮಾಣ ನಿರೀಕ್ಷಿತ ಮಟ್ಟಕ್ಕಿಂತ ಕಡಿಯಾಗುತ್ತಿದೆ ಹೀಗಾಗಿ ಮಳೆ ಕೊಯ್ಲು ಮತ್ತು ಇಂಗು ಗುಂಡಿಗಳನ್ನು ನಿಮರ್ಾಣಮಾಡಿ ಅಂತರ್ ಜಲ ವೃದ್ಧಿಯಾಗುವಂತೆ ಮಾಡಬೇಕು. ಕೃಷಿಯಲ್ಲಿ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಸೂಕ್ತವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಮೇಶ ಗೋಸಬಾಳ ವಹಿಸಿದ್ದರು. ಮಾರುತಿ ಖಟಾಂವಿ, ಸಹ ಶಿಬಿರಾಧಿಕಾರಿ ಡಿ.ಎಸ್. ಹುಗ್ಗಿ, ಪ್ರಾಧ್ಯಾಪಕರು ಹಾಗೂ ಸ್ವಯಂ ಸೇವಕರು ಪಾಲ್ಗೊಂಡಿದ್ದರು. ಶಾರದಾ ನೇಸರಗಿ ಪ್ರಾಥರ್ಿಸಿದರು. ಸುಶ್ಮೀತಾ ನಾಯಿಕವಾಡಿ ನಿರೂಪಿಸಿದರು. ದೀಪಾ ಸ್ವಾದಿ ವಂದಿಸಿದರು.