ಎನ್ಎಸ್ಎಸ್ ಘಟಕದ ವಿಶೇಷ ವಾಷರ್ಿಕ ಶಿಬಿರ
ಲೋಕದರ್ಶನ ವರದಿ
ಬೆಳಗಾವಿ, 6: ನಗರದ ಪ್ರತಿಷ್ಠಿತ ಕೆ.ಎಲ್.ಇ ಸಂಸ್ಥೆಯ ರಾಜಾ ಲಖಮಗೌಡ (ಸ್ವಾಯತ್ತ) ಮಹಾವಿದ್ಯಾಲಯದ ಎನ್.ಎಸ್.ಎಸ್ (ಓಖಖ) ಘಟಕವು ವಿಶೇಷ ವಾಷರ್ಿಕ ಶಿಬಿರವನ್ನು ದತ್ತು ಗ್ರಾಮವಾದ ಮಾರೀಹಾಳ ಗ್ರಾಮದಲ್ಲಿ ದಿ. 05ರಂದು ಸಾಯಂಕಾಲ 5 ಗಂಟೆಗೆ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಲಾಯಿತು.
ವಿಶೇಷ ವಾಷರ್ಿಕ ಶಿಬಿರವನ್ನು ಉದ್ಘಾಟಿಸಿದ ಮಾರಿಹಾಳ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಮಹಾದೇವಿ.ಶಿ.ಅಜ್ಜಪ್ಪನವರ್ ಅವರು ಮಾತನಾಡುತ್ತಾ,ಇಂತಹ ಶಿಬಿರಗಳು ಗ್ರಾಮೀಣ ಪ್ರದೇಶದಲ್ಲಿ ಹಮ್ಮಿಕೊಳ್ಳುವುದರ ಮೂಲಕ ಜನರಲ್ಲಿ ಹಲವಾರು ಜಾಗೃತಿಯ ವಿಷಯಗಳು ಮನವರಿಕೆಯಾಗುತ್ತವೆ. ಶಿಬಿರದ ಸ್ವಯಂ ಸೇವಕರಿಗೆ ಎಲ್ಲಾ ರೀತಿಯ ಸಹಾಯ ಸಹಕಾರ ನೀಡುತ್ತೇವೆ ಎಂದು ಹೇಳಿದರು. ಇನ್ನೊರ್ವ ಗೌರವಾನ್ವಿತ ಅತಿಥಿಯಾದ ಪದವಿ ಪೂರ್ವ ಪ್ರಾಚಾರ್ಯರಾದ ಪ್ರೊ ಎಸ್.ಜಿ.ನಂಜಪ್ಪನವರ ಅವರು ಮಾತನಾಡುತ್ತಾ, ಜಾಗತೀಕರಣ ಸಂದರ್ಭದಲ್ಲಿ ಈಗೀನ ಶಿಬಿರದ ಸ್ವಯಂ ಸೇವಕರ ಸಂಖ್ಯೆ ಕ್ಷೀಣಿಸುತ್ತಿದೆ. ಸ್ವಯಂ ಸೇವಕರ ಬಗ್ಗೆ ತಿಳಿಸಿಕೊಡುವ ಕೆಲಸ ನಡೆಯಲೇಬೇಕು ಎಂದು ಹೇಳಿದರು.
ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಜಾಲಖಮಗೌಡ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ವ್ಹಿ.ಡಿ.ಯಳಮಲಿ ಅವರು ಮಾತನಾಡುತ್ತಾ, ಇಂದಿನ ವಿದ್ಯಾಥರ್ಿಗಳು ಜ್ಞಾನಕ್ಕೆ ಹೆಚ್ಚು ಮಹತ್ವ ಕೊಡುತ್ತಾ, ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರೀಯವಾಗಿ ಭಾಗವಹಿಸಬೇಕು. ಸ್ಪಧರ್ಾ ಮನೋಭಾವದ ಜೊತೆಗೆ ಸೇವಾ ಮನೋಭಾವವನ್ನು ಹೊಂದಿ ಸಮಾಜ ಕಟ್ಟುವ ಕೆಲಸದಲ್ಲಿ ಭಾಗಿಯಾಗಬೇಕು ಸಾಮಾಜಿಕ ಮೌಢ್ಯಗಳ ಬಗ್ಗೆ ರಂಗಪ್ರಯೋಗಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ನುಡಿದರು.
ಕುಮಾರಿ.ಮಹಾಲಕ್ಷ್ಮೀ ಹಾಗೂ ಸಂಗಡಿಗರು ಓಖಖ ಗೀತೆಹಾಡಿದರು. ಕುಮಾರಿ.ಕೀತರ್ಿ ಬಶೆಟ್ಟಿ ಸ್ವಾಗತಿಸಿದರು.ಕುಮಾರ.ಸೌರಭ ವಂದಿಸಿದರು. ಕುಮಾರ. ಕಾತರ್ೀಕ್ ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಸಮಾರಂಭದಲ್ಲಿ ಓಖಖ ಸಂಯೋಜನಾಧಿಕಾರಿಯಾದ ಪ್ರೊ.ಎಸ್.ಎಸ್.ಅಬ್ಬಾಯಿ ಮತ್ತು ಸಹ ಶಿಬಿರಾಧಿಕಾರಿಯಾದ ಪ್ರೊ.ಎಸ್.ಜಿ.ಗಲಗಲಿ ಹಾಗೂ ಗ್ರಾಮದ ನಾಗರಿಕರು ಮತ್ತು ಶಿಬಿರದ ಸ್ವಯಂಸೇವಕರು ಉಪಸ್ಥಿತರಿದ್ದರು